ರೆಮ್ಡೆಸಿವರ್ ಇಂಜೆಕ್ಷನ್ ಅಂತಾ ಪೋಲಿಯೋ ಇಂಜೆಕ್ಷನ್ ಕದ್ದ ಖದೀಮರು.. ಆಮೇಲೆ ಏನು ಮಾಡಿದರು!?
polio vaccine theft: ಇದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ. ಆದ್ರೆ ಆ ಖದೀಮರಿಗೆ ದಾರಿ ಮಧ್ಯೆಯೇ ಗೊತ್ತಾಗಿದ್ದೇನೆಂದ್ರೆ ತಾವು ಕದ್ದಿರುವುದು ಬ್ಲ್ಯಾಕ್ ಮಾರ್ಕೆಟ್ನಲ್ಲಿ ಸಖತ್ ಬೇಡಿಕೆಯಿರುವ ರೆಮ್ಡೆಸಿವರ್ ಇಂಜೆಕ್ಷನ್ ಅಲ್ಲ; ಪೋಲಿಯೋ ಔಷಧಿ ಅಂತಾ ಗೊತ್ತಾಗಿದೆ.
ಬೆಳಗಾವಿ: ಕಳ್ಳಕಾಕರರಿಗೆ ಕೊರೊನಾ ಆದರೆ ಏನು, ಮತ್ತೊಂದಾದರೆ ಏನು? ತಾವುಂಟು ಮೂರು ಲೋಕವುಂಟು ಅಂತಾ ಕಳ್ಳತನ, ಖದೀಮತನ ಮಾಡೋದೆ ಆಗೋಗಿದೆ. ಕೊರೊನಾದಂತಹ ರಾಕ್ಷಸ ಉಗ್ರರೂಪ ತೋರುತ್ತೊದ್ದಾನೆ. ಸ್ವಲ್ಪನಾದರೂ ಮಾನವಂತರಾಗಿರೋಣ ಅನ್ನೋ ಬಾಬತ್ತೇ ಇಲ್ಲ ಅವರಲ್ಲಿ.
ಕಳೆದ ರಾತ್ರಿ ಒಂದಷ್ಟು ಶಾಣ್ಯಾ ಖದೀಮರು ಏನು ಮಾಡಿದ್ದಾರೆ ಅಂದ್ರೆ ಸೀದಾ ಅಥಣಿ ತಾಲೂಕು ಆಸ್ಪತ್ರೆಗೆ ಲಗ್ಗೆ ಹಾಕಿದ್ದಾರೆ. ಕೊರೊನಾ ಮಹಾಮಾರಿ ಅಬ್ಬರದ ನಡುವೆಯೇ ಔಷಧಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಅವರ ಗುರಿಯಿದ್ದಿದ್ದು ರೆಮ್ಡೆಸಿವರ್ ಇಂಜೆಕ್ಷನ್ನತ್ತ. ಅದಕ್ಕೆ ಬಹುಬೇಡಿಕೆಯಿದ್ದು, ಒಂದಷ್ಟು ಕಾಸು ಮಾಡಬಹುದು ಅಂತಾ ಆಸ್ಪತ್ರೆಯಲ್ಲಿಟ್ಟಿದ್ದ ರೆಮ್ಡೆಸಿವರ್ ಇಂಜೆಕ್ಷನ್ ಕದ್ದಿದ್ದಾರೆ. ಆದರೆ ಯಾಮಾರಿ, ರೆಮ್ಡೆಸಿವರ್ ಇಂಜೆಕ್ಷನ್ ಅಂತಾ ಪೋಲಿಯೋ ವೈಸರ್ಗೆ ಕೊಡುವ ವ್ಯಾಕ್ಸಿನೇಶನ್ ಇಂಜೆಕ್ಷನ್ (polio vaccine) ಕದ್ದುಬಿಟ್ಟಿದ್ದಾರೆ!
ಇದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ. ಆದ್ರೆ ಆ ಖದೀಮರಿಗೆ ದಾರಿ ಮಧ್ಯೆಯೇ ಗೊತ್ತಾಗಿದ್ದೇನೆಂದ್ರೆ ತಾವು ಕದ್ದಿರುವುದು ಬ್ಲ್ಯಾಕ್ ಮಾರ್ಕೆಟ್ನಲ್ಲಿ ಸಖತ್ ಬೇಡಿಕೆಯಿರುವ ರೆಮ್ಡೆಸಿವರ್ ಇಂಜೆಕ್ಷನ್ ಅಲ್ಲ; ಪೋಲಿಯೋ ಔಷಧಿ ಅಂತಾ ಗೊತ್ತಾಗಿದೆ. ದುಷ್ಕರ್ಮಿಗಳು ತಕ್ಷಣವೇ ಅಲ್ಲೇ ರಸ್ತೆಯಲ್ಲೇ ಕದ್ದಿದ್ದನ್ನೆಲ್ಲಾ ಎಸೆದು ಹೋಗಿದ್ದಾರೆ. ಅಥಣಿ ಪಟ್ಟಣದ ಸಂಗಮೇಶ್ವರ್ ನಗರದ ಬಳಿಯ ರಸ್ತೆ ಮೇಲೆ ಔಷಧಿ ಎಸೆದು ಹೋಗಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
(miscreants stole polio injection thinking its valuable remdesivir injections in athani hospital)
ಕಲಬುರಗಿಯಲ್ಲಿ ರೆಮ್‌ಡೆಸಿವಿರ್ ಖಾಲಿ, ಇಂಜೆಕ್ಷನ್ ತರಲು ಸ್ವತ: ಬೆಂಗಳೂರಿಗೆ ಧಾವಿಸಿದ ಸಂಸದ ಉಮೇಶ್ ಜಾಧವ್