ಕಲಬುರಗಿಯಲ್ಲಿ ರೆಮ್‌ಡೆಸಿವಿರ್ ಖಾಲಿ, ಇಂಜೆಕ್ಷನ್ ತರಲು ಸ್ವತ: ಬೆಂಗಳೂರಿಗೆ ಧಾವಿಸಿದ ಸಂಸದ ಉಮೇಶ್ ಜಾಧವ್
ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಮತ್ತೆ ಬೆಂಗಳೂರಿನಿಂದ 480 ಬಾಟಲ್ ಇಂಜೆಕ್ಷನ್ ತಂದಿದ್ದಾರೆ. ಕಳೆದ ರಾತ್ರಿ ಬೆಂಗಳೂರಿನ ಡ್ರಗ್ ಕಂಟ್ರೋಲ್ ಕಚೇರಿಗೆ ಹೋಗಿ ರೆಮ್ಡಿಸಿವರ್ ಇಂಜೆಕ್ಷನ್ ಪಡೆದು ವಿಮಾನದ ಮೂಲಕ ಸ್ವತಃ ತಾವೇ ತಂದು ಇಂಜೆಕ್ಷನ್ ಬಾಟಲಿಗಳನ್ನು ಕಲಬುರಗಿ ಡ್ರಗ್ ಕಂಟ್ರೋಲ್ ಅಧಿಕಾರಿಗಳಿಗೆ ನೀಡಿದ್ದಾರೆ.
ಕಲಬುರಗಿ: ಜಿಲ್ಲೆಯಲ್ಲಿ ರೆಮ್‌ಡೆಸಿವಿರ್ ಖಾಲಿಯಾದ ಹಿನ್ನೆಲೆಯಲ್ಲಿ ಸಂಸದ ಡಾ. ಉಮೇಶ್ ಜಾಧವ್ ಮತ್ತೆ ಬೆಂಗಳೂರಿನಿಂದ ಇಂಜೆಕ್ಷನ್ ತರಿಸಿದ್ದಾರೆ. ಸ್ವತಃ ತಾವೇ ರಾತ್ರಿ ಬೆಂಗಳೂರಿನ ಡ್ರಗ್ ಕಂಟ್ರೋಲ್ ಕಚೇರಿಗೆ ತೆರಳಿ 480 ವಯಲ್ ಇಂಜೆಕ್ಷನ್ ತಂದಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ರೆಮ್‌ಡೆಸಿವಿರ್ ಇಂಜೆಕ್ಷನ್ ಖಾಲಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಮತ್ತೆ ಬೆಂಗಳೂರಿನಿಂದ 480 ಬಾಟಲ್ ಇಂಜೆಕ್ಷನ್ ತಂದಿದ್ದಾರೆ. ಕಳೆದ ರಾತ್ರಿ ಬೆಂಗಳೂರಿನ ಡ್ರಗ್ ಕಂಟ್ರೋಲ್ ಕಚೇರಿಗೆ ಹೋಗಿ ರೆಮ್ಡಿಸಿವರ್ ಇಂಜೆಕ್ಷನ್ ಪಡೆದು ವಿಮಾನದ ಮೂಲಕ ಸ್ವತಃ ತಾವೇ ತಂದು ಇಂಜೆಕ್ಷನ್ ಬಾಟಲಿಗಳನ್ನು ಕಲಬುರಗಿ ಡ್ರಗ್ ಕಂಟ್ರೋಲ್ ಅಧಿಕಾರಿಗಳಿಗೆ ನೀಡಿದ್ದಾರೆ. ಇವರ ಈ ಸ್ಪಂದನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Yesterday received a call from Drug Controller Kalaburagi regarding the shortage of #Remedesivir Injections in Kalaburagi, I have spoken to Shri Avinash, IAS who is heading drug department of the state and convinced him about the shortage of this life saving drug. pic.twitter.com/IiDnfR7Hv1
— Dr. Umesh G Jadhav MPLS (@UmeshJadhav_BJP) April 30, 2021
ಬೆಂಗಳೂರಿನಲ್ಲಿ ರೆಮ್‌ಡೆಸಿವಿರ್ ಮತ್ತು ಆಕ್ಸಿಜನ್ ಕೊರತೆ ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್ಡಿಸಿವಿರ್ ಮತ್ತು ಆಕ್ಸಿಜನ್ ಕೊರತೆ ನಗರದಲ್ಲಿ ತೀವ್ರವಾಗಿದೆ ಎಂದು ಹೈಕೋರ್ಟ್ಗೆ ಕರ್ನಾಟಕ ಖಾಸಗಿ ಆಸ್ಪತ್ರೆಗಳ ಸಂಘಟನೆ ‘ಫನಾ’ದ ಅಧ್ಯಕ್ಷ ಡಾ.ಎಚ್.ಎಂ.ಪ್ರಸನ್ನ ಮಾಹಿತಿ ನೀಡಿದರು. 100 ರೆಮ್ಡಿಸಿವಿರ್ ಕೇಳಿದರೆ 25 ಮಾತ್ರ ಪೂರೈಸ್ತಿದ್ದಾರೆ. ಹೀಗಾಗಿ ಗಂಭೀರ ಸಮಸ್ಯೆ ಇದ್ದವರಿಗೆ ಮಾತ್ರ ನೀಡಲಾಗುತ್ತಿದೆ. ಸರ್ಕಾರದ ಬಳಿ ಸ್ಟಾಕ್ ಇದ್ದರೂ ರೆಮ್ಡಿಸಿವಿರ್ ಒದಗಿಸುತ್ತಿಲ್ಲ. ಬೇಡಿಕೆಯ ಶೇಕಡಾ 50ರಷ್ಟು ಮಾತ್ರ ಆಕ್ಸಿಜನ್ ಲಭ್ಯವಿದೆ. ಖಾಸಗಿ ಪೂರೈಕೆದಾರರಿಂದ ಆಕ್ಸಿಜನ್ ಖರೀದಿಸಲಾಗುತ್ತಿದೆ. ಹೀಗಾಗಿ ಬೆಲೆಯೂ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು.
ಆಕ್ಸಿಜನ್ ಮತ್ತು ರೆಮ್‌ಡಿಸಿವಿರ್ ಕೊರತೆಯಿಂದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಆಕ್ಸಿಜನ್, ರೆಮ್‌ಡಿಸಿವಿರ್ ಲಭ್ಯತೆ ಬಗ್ಗೆ ನಿತ್ಯ ಪ್ರಕಟಿಸಬೇಕು. ಕೇಂದ್ರದಿಂದ ಹಂಚಿಕೆಯಾದ 802 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಿ. ಇಲ್ಲವಾದರೆ ಏ.30ರ ವೇಳೆಗೆ 600 ಮೆಟ್ರಿಕ್ ಟನ್ ಕೊರತೆ ಕಾಣಿಸಿಕೊಳ್ಳುತ್ತದೆ. ರಾಜ್ಯ ಸರ್ಕಾರ ರೆಮ್ಡಿಸಿವರ್ ಪೂರೈಕೆ ಹೆಚ್ಚಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ ಸೂಚನೆ ನೀಡಿತು.