Covid-19 Karnataka Update: ಕರ್ನಾಟಕದಲ್ಲಿ 47,563 ಜನರಲ್ಲಿ ಕೊರೊನಾ ಸೋಂಕು ಪತ್ತೆ, 482 ಜನರು ನಿಧನ
Bengaluru Corona Virus Update: ಇಂದು ಒಂದೇ ದಿನ 34,881 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 13,19,301ಕ್ಕೇರಿಕೆಯಾಗಿದೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು ಒಂದೇ ದಿನ 47,563 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ರಾಜ್ಯದಲ್ಲಿ 482 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇಂದು 21,534 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು 285 ಜನರು ನಿಧನರಾಗಿದ್ದಾರೆ. ಇಂದು ಒಂದೇ ದಿನ 34,881 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 13,19,301ಕ್ಕೇರಿಕೆಯಾಗಿದೆ. ಒಟ್ಟು 5,48,841 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಇಂದು 21534 ಜನರಿಗೆ ಕೊರೊನಾ ಪತ್ತೆಯಾಗುವ ಮೂಲಕ ಬೆಂಗಳೂರಿನ ಒಟ್ಟು ಸೋಂಕಿತರ ಸಂಖ್ಯೆ 9,29,996ಕ್ಕೇರಿಕೆಯಾಗಿದೆ. ಈ ಪೈಕಿ 5,77,465 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಬೆಂಗಳೂರಿನಲ್ಲಿ ಕೊರೊನಾದಿಂದ ನಿಧನರಾದ 285 ಜನರನ್ನೂ ಸೇರಿ ನಗರದಲ್ಲಿ ಈವರೆಗೆ 7,776 ಜನ ನಿಧನರಾದಂತಾಗಿದೆ. ಸದ್ಯ ರಾಜಧಾನಿಯಲ್ಲಿ 3,44,754 ಸೋಂಕಿತರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಸೋಂಕಿತರ ಅಂಕಿ ಅಂಶ ಇಂತಿದೆ ಬಾಗಲಕೋಟೆ 1563, ಬಳ್ಳಾರಿ 940, ಬೆಳಗಾವಿ 991, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 958, ಬೆಂಗಳೂರು ನಗರ 21534, ಬೀದರ್ 311, ಚಾಮರಾಜನಗರ 691, ಚಿಕ್ಕಬಳ್ಳಾಪುರ 711, ಚಿಕ್ಕಮಗಳೂರು 356, ಚಿತ್ರದುರ್ಗ 166, ದಕ್ಷಿಣ ಕನ್ನಡ 1513, ದಾವಣಗೆರೆ 323, ಧಾರವಾಡ 965, ಗದಗ 341, ಹಾಸನ 996 , ಹಾವೇರಿ 169, ಕಲಬುರಗಿ 1661, ಕೊಡಗು 765, ಕೋಲಾರ 903, ಕೊಪ್ಪಳ 600, ಮಂಡ್ಯ 1225 , ಮೈಸೂರು 2294, ರಾಯಚೂರು 894, ರಾಮನಗರ 407, ಶಿವಮೊಗ್ಗ 547, ತುಮಕೂರು 2419, ಉಡುಪಿ 1043, ಉತ್ತರ ಕನ್ನಡ 1034, ವಿಜಯಪುರ 525, ಯಾದಗಿರಿಯಲ್ಲಿ 718 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಜಿಲ್ಲಾವಾರು ಮೃತಪಟ್ಟವರ ವಿವರ ರಾಜ್ಯದಲ್ಲಿಂದು ಕೊರೊನಾ ಸೋಂಕಿನಿಂದ 482 ಜನರ ಸಾವನ್ನಪ್ಪಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿಂದು ಕೊರೊನಾ ಸೋಂಕಿಗೆ 285 ಜನರ ನಿಧನರಾಗಿದ್ದಾರೆ. ಬಳ್ಳಾರಿಯಲ್ಲಿ 25, ಮೈಸೂರು 20, ಹಾಸನ, ಶಿವಮೊಗ್ಗ ತಲಾ 13, ತುಮಕೂರು 12 , ಉತ್ತರ ಕನ್ನಡ, ಉಡುಪಿ, ಕಲಬುರಗಿ ಜಿಲ್ಲೆಗಳಲ್ಲಿ ತಲಾ 11 , ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ 7 , ಬೀದರ್, ಚಿಕ್ಕಬಳ್ಳಾಪುರ 6, ಕೋಲಾರ 5, ರಾಯಚೂರು, ಕೊಡಗು ತಲಾ 4, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಯಾದಗಿರಿ ಜಿಲ್ಲೆಗಳಲ್ಲಿ ತಲಾ 3, ಬೆಳಗಾವಿ, ಚಾಮರಾಜನಗರ, ಧಾರವಾಡ, ಗದಗ ತಲಾ ಇಬ್ಬರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ತಲಾ ಒಬ್ಬರು ನಿಧನರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಆಕ್ಸಿಜನ್ ಪೂರೈಕೆಗಾಗಿ 12 ಸದಸ್ಯರ ಟಾಸ್ಕ್ಫೋರ್ಸ್ ರಚಿಸಿದ ಸುಪ್ರೀಂ; ಕರ್ನಾಟಕದ ಡಾ.ದೇವಿ ಪ್ರಸಾದ್ ಶೆಟ್ಟಿಗೂ ಸ್ಥಾನ
ಕೊವಿಡ್ ಸೋಂಕಿನಿಂದ ಪುಪ್ಪುಸ ಉಳಿಸಲು ಡಿಆರ್ಡಿಓ ಹೊಸ ಔಷಧಿ ಆವಿಷ್ಕಾರ: ತುರ್ತು ಬಳಕೆಗೆ ಬಿಡುಗಡೆ
(Karnataka Covid update 47563 new cases and 482 deaths today)
Published On - 10:22 pm, Sat, 8 May 21