Karnataka Covid Update: ಬೆಂಗಳೂರಿನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ; ರಾಜ್ಯದಲ್ಲಿ 25,311 ಜನರಿಗೆ ಕೊರೊನಾ ದೃಢ

| Updated By: ganapathi bhat

Updated on: Aug 21, 2021 | 9:54 AM

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಆದರೆ, ಉಳಿದ ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಹಿಡಿತಕ್ಕೆ ಸಿಕ್ಕಿಲ್ಲ. ಜೊತೆಗೆ, ಸಾವಿನ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿಲ್ಲ.

Karnataka Covid Update: ಬೆಂಗಳೂರಿನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ; ರಾಜ್ಯದಲ್ಲಿ 25,311 ಜನರಿಗೆ ಕೊರೊನಾ ದೃಢ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿಂದು ಹೊಸದಾಗಿ 25,311 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24,50,215ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 19,83,948 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 529 ಜನರ ಸಾವು ಸಂಭವಿಸಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 25,811 ಜನರು ಮೃತಪಟ್ಟಿದ್ದಾರೆ. 4,40,435 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಲ್ಲಿ ಇಂದು ಒಂದೇ ದಿನ 5,701 ಜನರಿಗೆ ಸೋಂಕು ತಗುಲಿದೆ. ನಗರದಲ್ಲಿ ಇಂದು ಕೊರೊನಾ ಸೋಂಕಿಗೆ 297 ಜನರು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯ ರಾಜಧಾನಿಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆದರೆ, ರಾಜ್ಯದ ಇತರೆಡೆಗಳಲ್ಲಿ ಕೊವಿಡ್-19 ಪ್ರಕರಣಗಳ ಪ್ರಮಾಣ ಇನ್ನೂ ಹಿಡಿತಕ್ಕೆ ಸಿಕ್ಕಿದಂತಿಲ್ಲ. ಮತ್ತೊಂದೆಡೆ ಕೊರೊನಾದಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆಯೂ ಇಳಿಕೆಯತ್ತ ಮುಖಮಾಡಿಲ್ಲ.

ಬೆಂಗಳೂರಿನ ಕೊರೊನಾ ಪೀಡಿತರ ಸಂಖ್ಯೆ 11,25,253ಕ್ಕೆ ಏರಿಕಯಾಗಿದೆ. 11,25,253 ಸೋಂಕಿತರ ಪೈಕಿ 8,86,871 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 297 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 11,513 ಜನರ ಸಾವು ಸಂಭವಿಸಿದೆ. 2,26,868 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾವಾರು ಕೊರೊನಾ ಸೋಂಕಿತರ ವಿವರ
ಬಾಗಲಕೋಟೆ 283, ಬಳ್ಳಾರಿ 807, ಬೆಳಗಾವಿ 747, ಬೆಂಗಳೂರು ಗ್ರಾಮಾಂತರ 385, ಬೆಂಗಳೂರು ನಗರ 5,701, ಬೀದರ್ 58, ಚಾಮರಾಜನಗರ 439, ಚಿಕ್ಕಬಳ್ಳಾಪುರ 605, ಚಿಕ್ಕಮಗಳೂರು 633, ಚಿತ್ರದುರ್ಗ 541, ದಕ್ಷಿಣ ಕನ್ನಡ 721, ದಾವಣಗೆರೆ 633, ಧಾರವಾಡ 1058, ಗದಗ 277, ಹಾಸನ 1,156, ಹಾವೇರಿ 312, ಕಲಬುರಗಿ 245, ಕೊಡಗು 251, ಕೋಲಾರ 580, ಕೊಪ್ಪಳ337, ಮಂಡ್ಯ 888, ಮೈಸೂರು2,680, ರಾಯಚೂರು 753, ರಾಮನಗರ 285, ಶಿವಮೊಗ್ಗ730, ತುಮಕೂರು1,662, ಉಡುಪಿ 927, ಉತ್ತರ ಕನ್ನಡ 1,110, ವಿಜಯಪುರ 256, ಯಾದಗಿರಿ 251 ಮಂದಿಗೆ ಕೊವಿಡ್-19 ತಗುಲಿರುವುದು ಖಚಿತವಾಗಿದೆ.

ಕೊರೊನಾದಿಂದ ಮೃತಪಟ್ಟವರ ವಿವರ
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 529 ಜನರ ಸಾವು ಸಂಭವಿಸಿದೆ. ಆ ಪೈಕಿ, ಬೆಂಗಳೂರಿನಲ್ಲಿ 297, ಬಳ್ಳಾರಿ ಜಿಲ್ಲೆಯಲ್ಲಿ 19, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 18, ಬೆಳಗಾವಿ ಜಿಲ್ಲೆಯಲ್ಲಿ 17, ಶಿವಮೊಗ್ಗ ಜಿಲ್ಲೆಯಲ್ಲಿ 16, ಧಾರವಾಡ ಜಿಲ್ಲೆಯಲ್ಲಿ 15, ಹಾಸನ ಜಿಲ್ಲೆಯಲ್ಲಿ 14, ಚಾಮರಾಜನಗರ ಜಿಲ್ಲೆಯಲ್ಲಿ 13, ಮೈಸೂರು, ತುಮಕೂರು ಜಿಲ್ಲೆಯಲ್ಲಿಂದು ತಲಾ 11, ಕೋಲಾರ, ಕಲಬುರಗಿ ಜಿಲ್ಲೆಯಲ್ಲಿ ಇಂದು ತಲಾ 9, ಬಾಗಲಕೋಟೆ, ಹಾವೇರಿ ಜಿಲ್ಲೆಯಲ್ಲಿಂದು ತಲಾ 7, ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 7, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲಾ 6, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿಂದು ತಲಾ 5, ಚಿತ್ರದುರ್ಗ ಜಿಲ್ಲೆಯಲ್ಲಿ 5, ಕೊಡಗು, ಕೊಪ್ಪಳ, ಮಂಡ್ಯ ಜಿಲ್ಲೆಯಲ್ಲಿ ತಲಾ 4, ರಾಯಚೂರು, ಉಡುಪಿ ಜಿಲ್ಲೆಯಲ್ಲಿಂದು ತಲಾ 4, ದಕ್ಷಿಣ ಕನ್ನಡ, ದಾವಣಗೆರೆ ಜಿಲ್ಲೆಯಲ್ಲಿ ತಲಾ 3, ಬೀದರ್, ಗದಗ, ರಾಮನಗರ ಜಿಲ್ಲೆಯಲ್ಲಿ ತಲಾ 2 ಮಂದಿ ಮೃತರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 25,811 ಜನರ ಸಾವು ಸಂಭವಿಸಿದೆ.

ಇದನ್ನೂ ಓದಿ: ಕೊವಿಡ್ ವಾರ್​ರೂಂನಲ್ಲಿ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಗೆ ಸ್ವತಃ ಬೆಡ್ ವ್ಯವಸ್ಥೆ ಮಾಡಿದ ಸಿಎಂ ಯಡಿಯೂರಪ್ಪ

ಶೀಘ್ರವೇ ಚಿತ್ರರಂಗದವರಿಗೆ ವಿಶೇಷ ಪ್ಯಾಕೇಜ್​? ಸಿಎಂ ಯಡಿಯೂರಪ್ಪ ಕಡೆಯಿಂದ ಸಕಾರಾತ್ಮಕ ಸ್ಪಂದನೆ

Published On - 8:25 pm, Mon, 24 May 21