ಬೆಂಗಳೂರು ಪ್ರೆಸ್ ಕ್ಲಬ್ನಿಂದ ಅಗತ್ಯವುಳ್ಳ ಪತ್ರಕರ್ತರ ಮನೆಗೆ ಆಕ್ಸಿಜನ್ ಕಾನ್ಸ್ಂಟ್ರೇಟರ್ ಸೌಲಭ್ಯ
Bengaluru Press Club Medical Oxygen: ಪ್ರೆಸ್ ಕ್ಲಬ್ ನೀಡುವ ಆಕ್ಸಿಜನ್ ಕಾನ್ಸ್ಂಟ್ರೇಟರ್ನ್ನು ಉಚಿತವಾಗಿ ರೋಗಿಯ ಮನೆಗೆ ತಲುಪಿಸಲು ಸಮಾಜ ಸೇವಕ ಯತೀಶ್ ಮತ್ತು ಅವರ ಉತ್ಸಾಹಿ ತಂಡ ತಲುಪಿಸಲಿದೆ. ಅಗತ್ಯವುಳ್ಳವರು ಯತೀಶ್ ಅವರ ಸಂಪರ್ಕ ಸಂಖ್ಯೆ 9845900666 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಬೆಂಗಳೂರು: ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತೊಮ್ಮೆ ಪತ್ರಕರ್ತರ ರಕ್ಷಣೆಗೆ ಮುಂದೆ ಬಂದಿದೆ. ಕೊವಿಡ್ನ ಮೊದಲ ಅಲೆಯ ವೇಳೆ ಅಗತ್ಯವಿರುವವರಿಗೆ ಕ್ಲಬ್ ಫುಡ್ ಕಿಟ್ ನೀಡಿದ್ದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಈ ಬಾರಿ ಕೊವಿಡ್ ಲಸಿಕೆ ವಿತರಣೆಯ ವ್ಯವಸ್ಥೆ ಮಾಡಿದೆ. ಜತೆಗೆ ತನ್ನ ಸದಸ್ಯರ ಮತ್ತು ಅವರ ಕುಟುಂಬದ ಮಂದಿ ಉಸಿರಾಟದ ಸಮಸ್ಯೆಗೆ ಒಳಗಾದರೆ ಉಚಿತವಾಗಿ ಅವರ ಮನೆಗೆ ಆಕ್ಸಿಜನ್ ಒದಗಿಸುವ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ಬಹುಮುಖ್ಯವಾಗಿ ಪ್ರೆಸ್ ಕ್ಲಬ್ ಸದಸ್ಯರಲ್ಲದ ಪತ್ರಕರ್ತರಿಗೂ ಈ ಸೌಲಭ್ಯವನ್ನು ಕಾರ್ಯಕಾರಿಣಿ ಸಮಿತಿ ವಿಸ್ತರಿಸಿದೆ. ಪ್ರೆಸ್ ಕ್ಲಬ್ ಸದಸ್ಯರ ಶಿಫಾರಸ್ಸು ಪಡೆದು ಬಂದಲ್ಲಿ ಮಾತ್ರ ಈ ಸೇವೆ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನ ಸದಸ್ಯರು ಅನಾರೋಗ್ಯಕ್ಕೆ ಒಳಗಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಲ್ಲಿ ವೈದ್ಯರ ಶಿಫಾರಸ್ಸು ಇದ್ದಲ್ಲಿ ಕ್ಲಬ್ನ ಮ್ಯಾನೇಜರ್ ಮಂಜುನಾಥ್ (9845482307) ಅವರನ್ನು ಸಂಪರ್ಕಿಸಿದರೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತದೆ. ಈ ಕುರಿತು ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್ ಹೆಚ್.ವಿ. ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಪ್ರೆಸ್ ಕ್ಲಬ್ನ ಈ ಯೋಜನೆಗೆ ಯಶ್ ಟೆಲ್ ಸಂಸ್ಥೆಯ ಮಾಲಿಕ ಮಂಜುನಾಥ್ ಸಹಕಾರ ನೀಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ 4 ಆಕ್ಸಿಜನ್ ಕಾನ್ಸ್ಂಟ್ರೇಟರ್ ಒದಗಿಸಿಕೊಟ್ಟಿದ್ದಾರೆ. ಆಂಬ್ಯುಲೆನ್ಸ್ ಯೋಜನೆಯನ್ನೂ ಜಾರಿಗೆ ತಂದಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಪ್ರೆಸ್ ಕ್ಲಬ್ ನೀಡುವ ಆಕ್ಸಿಜನ್ ಕಾನ್ಸ್ಂಟ್ರೇಟರ್ನ್ನು ಉಚಿತವಾಗಿ ರೋಗಿಯ ಮನೆಗೆ ತಲುಪಿಸಲು ಸಮಾಜ ಸೇವಕ ಯತೀಶ್ ಮತ್ತು ಅವರ ಉತ್ಸಾಹಿ ತಂಡ ತಲುಪಿಸಲಿದೆ. ಅಗತ್ಯವುಳ್ಳವರು ಯತೀಶ್ ಅವರ ಸಂಪರ್ಕ ಸಂಖ್ಯೆ 9845900666 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಕೊವಿಡ್ ವಾರ್ರೂಂನಲ್ಲಿ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಗೆ ಸ್ವತಃ ಬೆಡ್ ವ್ಯವಸ್ಥೆ ಮಾಡಿದ ಸಿಎಂ ಯಡಿಯೂರಪ್ಪ
ಕೊವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ಪರಿಹಾರ ಕೊಡುವ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿದ ಸುಪ್ರೀಂಕೋರ್ಟ್ (Oxygen Constrictor Facility for the home of the needy from Bangalore Press Club)
Published On - 8:50 pm, Mon, 24 May 21