ಇಂದಿಗೂ ಸಿಎಂ ಕನಸು ಕಾಣುತ್ತಿರುವ ಸಿದ್ದರಾಮಯ್ಯ! ದುರಂತ ಏನು ಗೊತ್ತಾ?

|

Updated on: Oct 23, 2019 | 1:27 PM

ಬಾಗಲಕೋಟೆ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ್ತಾರಾ? ಹೀಗೊಂದು ಪ್ರಶ್ನೆ ಅತೀವೃಷ್ಟಿಯ ನಡುವೆಯೂ ಬಾಗಲಕೋಟೆಯಲ್ಲಿ ಚಕ್ರಸುಳಿ ಸುತ್ತುತ್ತಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಮುಮ್ಮರೆಡ್ಡಿಕೊಪ್ಪ ಗ್ರಾಮದ ಸಂತ್ರಸ್ತರ ಮುಂದೆ ಸಿದ್ದರಾಮಯ್ಯ ಇಂತಹ ಸುಳಿವು ಬಿಟ್ಟುಕೊಟ್ಟಿದ್ದಾರೆ. ಮಧ್ಯಂತರ ಚುನಾವಣೆಯ ಸುಳಿವು ಕೊಟ್ಟ ಸಿದ್ದರಾಮಯ್ಯ: ಎಪ್ರಿಲ್ ಮೇ ತಿಂಗಳಲ್ಲಿ ಚುನಾವಣೆ ಬರುತ್ತೆ. ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ನಿಮ್ಮ ಎಲ್ಲ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಸಂತ್ರಸ್ಥರಿಗೆ ಅಭಯಹಸ್ತ ನೀಡಿದ್ದಾರೆ. ದುರಂತ ಅಂದ್ರೆ ಇದು! ರಾಜ್ಯದ […]

ಇಂದಿಗೂ ಸಿಎಂ ಕನಸು ಕಾಣುತ್ತಿರುವ ಸಿದ್ದರಾಮಯ್ಯ! ದುರಂತ ಏನು ಗೊತ್ತಾ?
Follow us on

ಬಾಗಲಕೋಟೆ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗ್ತಾರಾ? ಹೀಗೊಂದು ಪ್ರಶ್ನೆ ಅತೀವೃಷ್ಟಿಯ ನಡುವೆಯೂ ಬಾಗಲಕೋಟೆಯಲ್ಲಿ ಚಕ್ರಸುಳಿ ಸುತ್ತುತ್ತಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಮುಮ್ಮರೆಡ್ಡಿಕೊಪ್ಪ ಗ್ರಾಮದ ಸಂತ್ರಸ್ತರ ಮುಂದೆ ಸಿದ್ದರಾಮಯ್ಯ ಇಂತಹ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಮಧ್ಯಂತರ ಚುನಾವಣೆಯ ಸುಳಿವು ಕೊಟ್ಟ ಸಿದ್ದರಾಮಯ್ಯ:
ಎಪ್ರಿಲ್ ಮೇ ತಿಂಗಳಲ್ಲಿ ಚುನಾವಣೆ ಬರುತ್ತೆ. ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ನಿಮ್ಮ ಎಲ್ಲ ಕೆಲಸ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಸಂತ್ರಸ್ಥರಿಗೆ ಅಭಯಹಸ್ತ ನೀಡಿದ್ದಾರೆ.

ದುರಂತ ಅಂದ್ರೆ ಇದು!
ರಾಜ್ಯದ ಜನತೆ ಅತೀವೃಷ್ಟಿಯಿಂದ ತತ್ತರಿಸಿದ್ದರೆ ಆಡಳಿತಾರೂಢ ಬಿಜೆಪಿ ನಾಯಕರಾಗಲಿ ಅಥವಾ ವಿಪಕ್ಷದ ನಾಯಕರಿಗಾಗಲಿ ಜನರ ಬವಣೆ ಬಗ್ಗೆ ಗಮನ ಹರಿಸುವ ಉಮೇದಿ ಇಲ್ಲವಾಗಿದೆ. ಇನ್ನು ಮೂರು ತಿಂಗಳಲ್ಲಿ ಚುನಾವಣೆ ಬರುತ್ತದೆ ಎಂದು ತುತ್ತೂರಿ ಬಾರಿಸುವುದರಲ್ಲಿ ಮಗ್ನರಾಗಿದ್ದಾರೆ.
ಇನ್ನು, ನೆರೆ ಸಂತ್ರಸ್ತ ಸಮಸ್ಯೆ ಆಲಿಸಲು ಹಾಲಿ ಸಿಎಂ ಯಡಿಯೂರಪ್ಪಗೆ ಟೈಂ ಇಲ್ಲವಾಗಿದೆ. ಇಂದು ವಿಧಾನಸೌಧದಲ್ಲಿ  ನಾನಾ ಜಿಲ್ಲಾಧಿಕಾರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್​ ಮೀಟಿಂಗ್ ಅನ್ನು 10 ನಿಮಿಷಕ್ಕೆ ಫಿನಿಶ್ ಮಾಡಿದ ಯಡಿಯೂರಪ್ಪ, ಉಪ ಚುನಾವಣೆ ಮೀಟಿಂಗ್ ಗೆ ಓಡೋಡಿ ಸಾಗಿದ್ದಾರೆ.

Published On - 1:22 pm, Wed, 23 October 19