ಬೆಂಗಳೂರು, (ಡಿಸೆಂಬರ್ 29): ವಿಧಾನಸಭೆ ಚುನಾವಣೆ ನೀಡಿದ್ದ ಭರವಸೆಯಂತೆ ಹಾಗೂ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಸೆರ್ಕಾರದ ಕಣ್ಣು ಯುವಕರ ಮೇಲೆ ಬಿದ್ದಿದೆ. ಚುನಾವಣೆಯಲ್ಲಿ ಯುವ ಶಕ್ತಿಯನ್ನು ಸೆಳೆಯಲು ರಾಜ್ಯ ಸರ್ಕಾರ(Karnataka Government ) ಬೃಹತ್ ಉದ್ಯೋಗ ಮೇಳ ( job fair )ನಡೆಸಲು ತೀರ್ಮಾನಿಸಿದೆ. ಇನ್ನು ಈ ಸಂಬಂಧ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಜನವರಿ ಕೊನೆಯ ವಾರದಲ್ಲಿ ಸರ್ಕಾರದಿಂದಲೇ ರಾಜ್ಯಮಟ್ಟದ ಉದ್ಯೋಗ ಮೇಳ ನಡೆಸಲು ತೀರ್ಮಾನವಾಗಿದೆ.
ಸರ್ಕಾರದ ವತಿಯಿಂದಲೇ ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲು ಉದ್ದೇಶಿಸಲಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಆಯೋಜಿಸಲೂ 6 ಸಚಿವರನ್ನೊಳಗೊಂದ ತಂಡ ರಚನೆ ಮಾಡಲಾಗಿದೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಐಟಿ, ಬಿಟಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕೌಶಲ್ಯಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಯುವ ಸಬಲೀಕರಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನೊಳಗೊಂಡ ಸಚಿವರ ತಂಡ ರಚನೆ ಮಾಡಲಾಗಿದ್ದು, ಉದ್ಯೋಗದಾತರೊಂದಿಗೆ ಸಭೆ ನಡೆಸಿ ಈ ಕುರಿತು ಚರ್ಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಕೈಗಾರಿಕೆಗಳ ಅಗತ್ಯತೆಯ ನಡುವಿನ ಅಂತರ ಸರಿಪಡಿಸುವ ಬಗ್ಗೆ ದೂರಗಾಮಿ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆಯೂ ಶಿಫಾರಸುಗಳನ್ನು ಮಾಡುವಂತೆ ಸಚಿವರ ತಂಡಕ್ಕೆ ಸೂಚನೆ ನೀಡಲಾಗಿದೆ. ವಿದೇಶದಲ್ಲಿರುವ ಉದ್ಯೋಗಾವಕಾಶಗಳ ಕುರಿತೂ ಸಹ ಪರಿಶೀಲಿಸಲು ಸಿಎಂ ಸೂಚಿಸಿದ್ದಾರೆ. ಇದಲ್ಲದೆ ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಉದ್ಯೋಗ ನೀತಿಯನ್ನು ಹೊಂದುವ ಅಗತ್ಯವಿದೆ. ಈ ನೀತಿಯನ್ನು ರೂಪಿಸಲು ಸಿದ್ಧತೆ ನಡೆಸುವಂತೆ ಸಿಎಂ ತಾಕೀತು ಮಾಡಿದರು.
ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಉದ್ಯೋಗ ಮೇಳದ ಮೂಲಕ ಉದ್ಯೋಗ ನೀಡುವ ಬಗ್ಗೆ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದ್ವಿ. ಖಾಸಗಿ, ಸರ್ಕಾರಿ ಉದ್ಯೋಗ ಖಾಲಿ ಇದೆ. ಎಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕು ಎಂಬ ಸಿಎಂ ಚರ್ಚೆ ಮಾಡಿದ್ದಾರೆ. ನಾವು ಯುವಕರಿಗೆ ಮಾತು ಕೊಟ್ಟಿದ್ದೆವು. ರಾಹುಲ್ ಗಾಂಧಿ ಭಾರತ ಜೋಡೋ ಸಂದರ್ಭಗಳಲ್ಲಿ ಹೇಳಿದ್ದರು ಎಂದು ಹೇಳಿದರು.
ಯವನಿಧಿ ಯೋಜನೆ ಜ. 12ರಂದು ಶಿವಮೊಗ್ಗದಲ್ಲಿ ಚಾಲನೆ ನೀಡುತ್ತೇವೆ ಕೈಗಾರಿಕೆಗಳಿಗೆ ಬೇಕಾದ ಯುವಕರನ್ನು ತಯಾರಲು ಮಾಡಲು ತೀರ್ಮಾನ ಮಾಡಿದ್ದೇವೆ. ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳೆ ಮಾಡುತ್ತೇವೆ. ಗ್ರಾಮೀಣ ಪ್ರದೇಶಕ್ಕೆ ಒತ್ತು ಯಾವ ರೀತಿ ನೀಡಬೇಕು ಹೋಟೆಲ್, ಕೈಗಾರಿಕೆಗಳ ನೈಪುಣ್ಯ ಗೆ ತಕ್ಕಂತೆ ಯುವಕರನ್ನ ಸಿದ್ದ ಮಾಡಬೇಕು. ಜನವರಿ 25 ರ ಬಳಿಕ ಮೊದಲು ಬೆಂಗಳೂರಿನಲ್ಲಿ ಉದ್ಯೋಗ ಮೇಳ ಮಾಡುತ್ತೇವೆ. ನಂತರ ಬೇರೆ ರಾಜ್ಯದ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಮಾಡುತ್ತೇವೆ ಎಂದು ವಿವರಿಸಿದರು.
ಉದ್ಯೋಗ ಯಾವ ರೀತಿ ಕೊಡಬೇಕು. ಇಂಡಸ್ಟ್ರಿ ಜೊತೆ ಹೇಗೆ ಮಾಡಬೇಕು ಅಂತ ಸಚಿವರ ಜೊತೆ ಚರ್ಚೆಯಾಗಿದೆ. ಸಲಹೆ ಕೂಡ ನೀಡಿದ್ದಾರೆ. ಇಂಡಸ್ಟ್ರಿಗೆ ತಕ್ಕಂತೆ ಹುಡುಗರನ್ನ ಸಿದ್ಧ ಮಾಡಬೇಕು. ಈಗ ಸಚಿವರ ಸಮಿತಿ ರಚನೆ ಮಾಡಲಾಗಿದೆ.. ಪ್ರಾರಂಭದಲ್ಲಿ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ವಿಶೇಷವಾಗಿ ಗ್ರಾಮೀಣ ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. ಎಲ್ಲಾ ಇಂಡಸ್ಟ್ರಿ ಎಲ್ಲವೂ ಸೇರಬೇಕು. ಗ್ರಾಮೀಣ, ನಮ್ಮಕನ್ನಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕು ಎಂದರು.
ಇನ್ನು ಈ ಬಗ್ಗೆ ಎಂಟಿ ಪಾಟೀಲ್ ಮಾತನಾಡಿ, ನರ್ಸ್, ಐಟಿ-ಬಿಟಿ ಬೇರೆ ಬೇರೆ ಉದ್ಯೋಗ ಇದೆ. ಕೆಲ ಪ್ರಮುಖ ಬೇಡಿಕೆ ಇರುವ ಉದ್ಯೋಗಗಳಿವೆ. ಅವುಗಳಿಗೆ ತಕ್ಕಂತೆ ಉದ್ಯೋಗ ನೀಡಬೇಕಿದೆ. ಸ್ಕಿಲ್‌ನಲ್ಲಿ ತರಬೇತಿ ನೀಡಬೇಕು. ಪ್ರಿಯಾಂಕ್ ಖರ್ಗೆ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಜನವರಿ ಅಂತ್ಯಕ್ಕೆ ಉದ್ಯೋಗ ಜೊತೆಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತೆ. ಹೇಗೆ ಕೆಲಸ ಮಾಡಬೇಕು ಅನ್ನೋ ಮಾಹಿತಿ ಕೂಡ ನೀಡಲಾಗುತ್ತೆ ಎಂದು ಹೇಳಿದರು.
ಬದಲಾವಣೆಗೆ ಹೊಂದಿಕೊಳ್ಳುವ ಅನುಕೂಲ ಆಗುವ ಉದ್ಯೋಗ ನೀಡಬೇಕಿದೆ. ಸ್ಕಿಲ್ ಡೆವಲಪ್ಮೆಂಟ್ ಗೆ 80 ಸಾವಿರದಷ್ಟು ರಿಜಿಸ್ಟರ್ ಆಗಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೂಡ ಚರ್ಚೆ ಆಗಲಿದೆ. ಕನ್ನಡಿಗ ಯುವಕರಿಗೆ ಉದ್ಯೋಗ ನೀಡಲಾಗುವುದು. ಉದ್ಯೋಗಕ್ಕೆ ಅರ್ಹ ಮಾಡುವಂತೆ ಟ್ರೈನಿಂಗ್ ನೀಡಬೇಕು. ಆ ಕೆಲಸ ಮಾಡುತ್ತೇವೆ. ಚೈನಾ ಚೀಪ್ ಲೇಬರ್ ಅಂತಿದ್ರು. ಆದ್ರೆ ಅವರ ಬಳಿ ಸ್ಕಿಲ್ ಇದೆ. ಆ ದೃಷ್ಟಿಯಿಂದ ನಾವು ಕೆಲಸ ಮಾಡಬೇಕು ಎಂದರು.
Published On - 7:40 pm, Fri, 29 December 23