ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಕೊಡಗು ಜನರ ಕನಸು ಕೊನೆಗೂ ನನಸು

|

Updated on: Apr 25, 2021 | 8:34 AM

ನೂರಾರು ಮನೆಗಳು ನೆಲಸಮವಾಗಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಬದುಕಲು ಸ್ವಂತ ಮನೆಗಳಿಲ್ಲದೆ ಕಂಡ ಕಂಡವರ ಮನೆಗಳಲ್ಲಿ ಉಳಿದುಕೊಂಡು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ರಾಜ್ಯ ಸರ್ಕಾರ ಕೊನೆಗೂ ಇವರ ಮೇಲೆ ಕರುಣೆ ತೋರಿದೆ. ಪ್ರವಾಹ ಸಂತ್ರಸ್ತರಿಗೆ ಮೂರನೇ ಹಂತದಲ್ಲಿ 189 ಮನೆಗಳನ್ನು ಹಸ್ತಾಂತರಿಸಿದೆ.

ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಕೊಡಗು ಜನರ ಕನಸು ಕೊನೆಗೂ ನನಸು
ಸಂತ್ರಸ್ತರಿಗೆ ಹೊಸ ಮನೆಗಳು
Follow us on

ಕೊಡಗು: ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ್ದ ರಣ ಭೀಕರ ಪ್ರವಾಹ ಮತ್ತು ಭೂಕುಸಿತ ಮರೆಯಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡವವರ ಮುಖದಲ್ಲಿ ಇದೀಗ ನಗು ಅರಳಿದೆ. ಅಂದದ ಸ್ವಂತ ಸೂರಿನ ಕನಸು ಕೊನೆಗೂ ನನಸಾಗಿದೆ. ರಾಜ್ಯ ಸರ್ಕಾರ ಕೂಡ ತಡವಾದರೂ ಒಳ್ಳೆಯ ಮನೆಗಳನ್ನು ನೀಡಿದೆ. ಕೊರೊನಾ ಸಂಕಷ್ಟದ ಮಧ್ಯೆಯೂ ಸಂತ್ರಸ್ತರು ಖುಷಿ ಖುಷಿಯಾಗಿಯೇ ಹೊಸ ಮನೆಗೆ ಪ್ರವೇಶಿಸಿದ್ದಾರೆ.

ನೂರಾರು ಮನೆಗಳು ನೆಲಸಮವಾಗಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಬದುಕಲು ಸ್ವಂತ ಮನೆಗಳಿಲ್ಲದೆ ಕಂಡ ಕಂಡವರ ಮನೆಗಳಲ್ಲಿ ಉಳಿದುಕೊಂಡು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ರಾಜ್ಯ ಸರ್ಕಾರ ಕೊನೆಗೂ ಇವರ ಮೇಲೆ ಕರುಣೆ ತೋರಿದೆ. ಪ್ರವಾಹ ಸಂತ್ರಸ್ತರಿಗೆ ಮೂರನೇ ಹಂತದಲ್ಲಿ 189 ಮನೆಗಳನ್ನು ಹಸ್ತಾಂತರಿಸಿದೆ. ಮಡಿಕೇರಿ ತಾಲೂಕಿನ ಬಿಳಿಗಿರಿ ಗ್ರಾಮದಲ್ಲಿ 42 ಮನೆಗಳು ಮತ್ತು ಗಾಳಿಬೀಡು ಸಮೀಪ 140 ಮನೆಗಳನ್ನು ಹಸ್ತಾಂತರ ಮಾಡಿದೆ.

ಪ್ರತಿ ಮನೆಗೆ 9.85 ಲಕ್ಷ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿದೆ. ಪುಟ್ಟ ಮನೆಯಾದರೂ ಆಕರ್ಷಕವಾಗಿದೆ. ಪ್ರವಾಹ, ಭೂಕಂಪನದಂತಹ ವಿಕೋಪಗಳನ್ನ ಈ ಮನೆ ತಡೆದುಕೊಳ್ಳಲಿದೆ ಎಂಬುದು ತಜ್ಞರ ಹೇಳುತ್ತಿದ್ದಾರೆ. ಕಳೆದ ಮೂರು ವರ್ಷಗಳ ಕಾಲ ಮನೆಗಳಿಲ್ಲದೆ ಸಂತ್ರಸ್ತರು ಪರದಾಟ ಪಡುತ್ತಿದ್ದತು. ಮನೆ ನೀಡುವಲ್ಲಿ ಸರ್ಕಾರ ತಡ ಮಾಡಿದರೂ ಕೊನೆಗೂ ಮನೆಗಳನ್ನ ನೀಡಿತ್ತಲ್ಲಾ ಎನ್ನುವುದೇ ಸಂತ್ರಸ್ತರ ಖುಷಿ.

ಈ ಬಾರಿ 160 ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸುವುದರೊಂದಿಗೆ ಇದುವರೆಗೆ ಒಟ್ಟು 660 ಮನೆಗಳನ್ನು ನೀಡಿದಂತಾಗಿದೆ. ಆದರೆ ಇನ್ನೂ ನೂರಾರು ಮಂದಿ ಸಂತ್ರಸ್ತರು ಮನೆಗಳಿಗಾಗಿ ಕಾಯುತಿದ್ದು, ಇವರಿಗೂ ಕೂಡ ಆದಷ್ಟು ಬೇಗನೆ ಮನೆಗಳನ್ನು ನಿರ್ಮಿಸಿಕೊಡಬೇಕಾಗಿದೆ.

ಇದನ್ನೂ ಓದಿ

ಹಾಸನಕ್ಕೆ ರಾಷ್ಟ್ರ ಪ್ರಶಸ್ತಿ ಗರಿ; ಇನ್ನಷ್ಟು ಮಾದರಿ ಕೆಲಸಕ್ಕೆ ಪ್ರಧಾನಿ ಮೋದಿ ಕರೆ

ತೊದಲು ನುಡಿಯಲ್ಲೇ ಲೋಕಜ್ಞಾನ ತೆರೆದಿಡುವ ಮಗು; ಎರಡೂವರೆ ವರ್ಷದ ಬಾಲಕಿ ಜ್ಞಾಪಕ ಶಕ್ತಿಗೆ ಬೆರಗಾದ ಬಾಗಲಕೋಟೆ ಮಂದಿ

(Karnataka government given home to Kodagu people who lost their homes in the natural disaster)