ಮಹಾವೀರ ಜಯಂತಿ, ವೀಕೆಂಡ್ ಕರ್ಫ್ಯೂ ನಡುವೆ ಮಾಂಸ ಖರೀದಿಗೆ ಮುಗಿಬಿದ್ದ ಜನ, ಅಂಗಡಿ ಮುಚ್ಚಿಸಿ ಪೊಲೀಸರಿಂದ ವಾರ್ನಿಂಗ್

ಭಾನುವಾರದ ಬಾಡೂಟಕ್ಕೆ ಮಾಂಸದಂಗಡಿಗಳ ಮುಂದೆ ಜನ ಮುಗಿಬಿದ್ದಿದ್ದಾರೆ. 10 ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. 10 ಗಂಟೆಯ ಬಳಿಕ ಎಲ್ಲಾ ಅಂಗಡಿಗಳನ್ನು ಮುಚ್ಚಿಸಲಾಗುತ್ತೆ. ಬಳಿಕ ವೀಕೆಂಡ್ ಕರ್ಫ್ಯೂ ಇರುತ್ತೆ.

ಮಹಾವೀರ ಜಯಂತಿ, ವೀಕೆಂಡ್ ಕರ್ಫ್ಯೂ ನಡುವೆ ಮಾಂಸ ಖರೀದಿಗೆ ಮುಗಿಬಿದ್ದ ಜನ, ಅಂಗಡಿ ಮುಚ್ಚಿಸಿ ಪೊಲೀಸರಿಂದ ವಾರ್ನಿಂಗ್
ಮಾಂಸದ ಅಂಗಡಿ
Ayesha Banu

|

Apr 25, 2021 | 9:42 AM

ಬೆಂಗಳೂರು: ಇಂದು ಭಾನುವಾರ ಬಹುತೇಕ ಮಂದಿ ಮನೆಯಲ್ಲಿ ಮಾಂಸದೂಟ ಮಾಡಿ ಭರ್ಜರಿಯಾಗಿ ತಿನ್ನುವ ಆಸೆ ಹೊಂದಿರುತ್ತಾರೆ. ಆದರೆ ಮಹಾವೀರ ಜಯಂತಿ ಹಾಗೂ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬಹಳ ಕಡೆ ಮಾಂಸ ಮಾರಾಟ ನಿಷೇಧಿಸಲಾಗಿದೆ. ಕೆಲ ಕಡೆ ಮಾಂಸದ ಅಂಗಡಿಗಳ ಮುಂದೆ ಜನ ಜಂಗುಳಿಯೇ ಕಾಣಸಿಗುತ್ತಿದೆ. ಸಾಮಾಜಿಕ ಅಂತರ ಮರೆತು ಜನ ಮಾಂಸ ಖರೀದಿಗೆ ಮುಗಿಬಿದ್ದಿದ್ದಾರೆ.

ಭಾನುವಾರದ ಬಾಡೂಟಕ್ಕೆ ಮಾಂಸದಂಗಡಿಗಳ ಮುಂದೆ ಜನ ಮುಗಿಬಿದ್ದಿದ್ದಾರೆ. 10 ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. 10 ಗಂಟೆಯ ಬಳಿಕ ಎಲ್ಲಾ ಅಂಗಡಿಗಳನ್ನು ಮುಚ್ಚಿಸಲಾಗುತ್ತೆ. ಬಳಿಕ ವೀಕೆಂಡ್ ಕರ್ಫ್ಯೂ ಇರುತ್ತೆ. ಜನ ಓಡಾಡುವ ಹಾಗಿಲ್ಲ. ಹೀಗಾಗಿ ಮಾಂಸ ಪ್ರಿಯರು ತಮಗೆ ಇಷ್ಟವಾದ ಚಿಕನ್, ಮಟನ್, ಫಿಶ್ ಖರೀದಿಗಾಗಿ ಕೊರೊನಾ ನಿಯಮವನ್ನೇ ಮರೆತು ಮುಗಿಬಿದ್ದಿದ್ದಾರೆ. ರಾಜ್ಯದ ಬಹುತೇಕ ಮಾಂಸದಂಗಡಿಗಳ ಮುಂದೇ ಇದೇ ಸ್ಥಿತಿ ಕಂಡು ಬಂದಿದೆ. ಇನ್ನು ಕೆಲ ಕಡೆ ಕದ್ದುಮುಚ್ಚಿ ದುಪ್ಪಟ್ಟು ಬೆಲೆಗೆ ಮಾಂಸ ಮಾರಾಟ ಮಾಡಲಾಗುತ್ತಿದೆ.

ನಿಷೇಧದ ಮಧ್ಯೆ ಮಾಂಸ ಮಾರುತ್ತಿದ್ದ ಅಂಗಡಿ ಮೇಲೆ ದಾಳಿ ಮಹಾವೀರ ಜಯಂತಿ, ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ನಿಷೇಧದ ಮಧ್ಯೆ ಮಾಂಸ ಮಾರುತ್ತಿದ್ದ ಅಂಗಡಿ ಮೇಲೆ ದಾಳಿ ನಡೆದಿದೆ. ಗದಗ ನಗರದ ಸರಾಫ್ ಬಜಾರ್, ಜವಳಿ ಗಲ್ಲಿಯಲ್ಲಿ ರೇಡ್ ಆಗಿದ್ದು ಆದೇಶ ಉಲ್ಲಂಘಿಸಿ ಮಾರಾಟದಲ್ಲಿ ತೊಡಗಿದ್ದವರನ್ನು ಬಂಧಿಸಲಾಗಿದೆ. 9 ಮಾಂಸ ಮಾರಾಟಗಾರರನ್ನು ಗದಗ ಪೊಲೀಸರು ಬಂಧಿಸಿದ್ದಾರೆ. ನಗರಸಭೆ ಅಧಿಕಾರಿಗಳು ಮಾಂಸದ ಅಂಗಡಿ ಜಪ್ತಿ ಮಾಡಿದ್ದಾರೆ.

ನಿಷೇಧ ಉಲ್ಲಂಘಿಸಿ ದೇವನಹಳ್ಳಿಯಲ್ಲಿ ಮಾಂಸ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಅಕ್ರಮವಾಗಿ ಮಾಂಸ ಮಾರಾಟ ಮಾಡ್ತಿದ್ದ ಅಂಗಡಿಗಳಿಗೆ ಬೀಗ ಹಾಕಿ ಪುರಸಭೆ ಅಧಿಕಾರಿಗಳು ಮತ್ತು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದು ಕಡೆ ಸಾಮಾಜಿಕ ಅಂತರ, ಮಾಸ್ಕ್ ಮರೆತು ತರಕಾರಿ ಖರೀದಿ, ಮಾಂಸ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಜನರನ್ನ ನಿಯಂತ್ರತಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Meat Shop

ಮಾಂಸದ ಅಂಗಡಿ

ಇದನ್ನೂ ಓದಿ: ವೈದ್ಯಕೀಯ ಆಕ್ಸಿಜನ್ ಅಭಾವ; ಆಮ್ಲಜನಕವಿಲ್ಲದೆ ಜೀವ ಬಿಟ್ಟ ನವಜಾತ ಅವಳಿ ಶಿಶುಗಳು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada