ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ(Karnataka Congress Government) ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಧಿಕಾರಿಗಳು ವರ್ಗಾವಣೆ(Transfers) ಜೋರಾಗಿದೆ. ಅದರಲ್ಲೂ ಮುಖ್ಯವಾಗಿ ಹೆಚ್ಚಾಗಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡುತ್ತಿದೆ. ಅದರಂತೆ ಇಂದು (ಜೂನ್ 20) ಬರೋಬ್ಬರಿ 15 IPS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟ ಸರ್ಕಾರ ಆದೇಶ ಹೊರಡಿಸಿದೆ. ಐಪಿಎಸ್ ರವಿ ಡಿ ಚನ್ನಣ್ಣನವರ್(Ravi D Channannavar) ತಮ್ಮ ವರ್ಗಾವಣೆಗೆ ತಡೆ ತಂದಿದ್ದರಿಂದ ಮುಖಭಂಗಕ್ಕೀಡಾಗಿದ್ದ ಸರ್ಕಾರ, ಯಾವುದೇ ಐಪಿಎಸ್ ಅಧಿಕಾರಿಗಳನ್ನು ಟ್ರಾನ್ಸ್ಫರ್ ಮಾಡದಿರಲು ತಾತ್ಕಾಲಿಕವಾಗಿ ತಡೆ ಹಿಡಿದಿತ್ತು. ಅಂದು ತಡೆ ಹಿಡಿಯಲಾಗಿದ್ದ ಐಪಿಎಸ್ ಅಧಿಕಾರಿಗಳನ್ನು ಇಂದು ವರ್ಗಾವಣೆ ಮಾಡಿದೆ. ವರ್ಗಾವಣೆಗೊಂಡ 15 ಐಪಿಎಸ್ ಅಧಿಕಾರಿಗಳು ಯಾರ್ಯಾರು ಎನ್ನುವ ಪಟ್ಟಿ ಈ ಕೆಳಗಿನಂತಿದೆ.
ಇದನ್ನೂ ಓದಿ: ಮುಜುಗರ ತಂದಿಟ್ಟ ಐಪಿಎಸ್ ವರ್ಗಾವಣೆ, 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕೈ ಬಿಟ್ಟ ರಾಜ್ಯ ಸರ್ಕಾರ
ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ವರ್ಗಾವಣೆಗೆ ತಡೆ ತಂದಿರುವ ಹಿನ್ನಲೆಯಲ್ಲಿ ಮುಜುಗರಕ್ಕೀಡಾಗಿದ್ದ ಸರ್ಕಾರ, ಐಪಿಎಸ್ ಅಧಿಕಾರಿಗಳ ವರ್ಗಾವಣೆ ನಿರ್ಧಾರ ಬದಲಾವಣೆ ಮಾಡಿಕೊಂಡಿತ್ತು. ಬೆಂಗಳೂರಿನ ಕೇಂದ್ರ ವಿಭಾಗ, ಪಶ್ಚಿಮ, ಪೂರ್ವ, ಉತ್ತರ ಸೇರಿದಂತೆ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ಸಿಎಂ ಸಿದ್ದರಾಮಯ್ಯನವರ ಬಳಿ ಇತ್ತು. ಆದ್ರೆ, ರವಿ ಡಿ ಚೆನ್ನಣ್ಣನವರ್ ಕೊಟ್ಟ ಶಾಕ್ನಿಂದಾಗಿ ಸಿಎಂ, ಅಧಿಕಾರಿಗಳ ವರ್ಗಾವಣೆ ಕೈಬಿಟ್ಟಿತ್ತು. ಆದ್ರೆ, ಇದೀಗ ಮತ್ತೆ ವರ್ಗಾವಣೆ ಸರ್ಕಾರ ಆದೇಶ ಹೊರಡಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 2:14 pm, Tue, 20 June 23