
ರಾಜ್ಯದಲ್ಲಿ ಈ ತಿಂಗಳು ಶಾಲಾ ಕಾಲೇಜುಗಳು ಶುರುವಾಗಹುದಾ ಎಂಬ ಪೋಷಕರ ಆತಂಕ ಮತ್ತು ಗೊಂದಲವನ್ನು ಟಿವಿ9 ದೂರ ಮಾಡುವ ಪ್ರಯತ್ನ ಮಾಡಿದೆ. ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಶಿಕ್ಷಣ ಸಚಿವರೊಂದಿಗೆ ಮಾತಾಡಿದ ಟಿವಿ9 ವರದಿಗಾರ ಸರ್ಕಾರದ ನಿಲುವಿನ ಬಗ್ಗೆ ಪಕ್ಕಾ ಮಾಹಿತಿ ಸಂಗ್ರಹಿಸಿದ್ದಾರೆ.
ಶಾಲೆಗಳನ್ನು ಆರಂಭಿಸುವ ಬಗ್ಗೆ ಯಾವುದೇ ಧಾವಂತ ಇಲ್ಲ ನಿನ್ನೆಯೇ ಹೇಳಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇವತ್ತೂ ಕೂಡಾ ಅದೇ ಮಾತನ್ನು ಪುನರಾವರ್ತಿಸಿದರಲ್ಲದೆ, ಆ ಹೇಳಿಕೆಗೆ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ ಅಕ್ಟೋಬರ್ 15 ರಿಂದ ಶಾಲೆ ಓಪನ್ ಮಾಡಿ ಅಂತ ಹೇಳಿದೆ ಆದರೆ ಶಾಲೆ ಓಪನ್ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಆದರೆ, ಸದ್ಯಕ್ಕೆ ರಾಜ್ಯದಲ್ಲಿ ಶಾಲೆ ಆರಂಭ ಮಾಡೋದಿಲ್ಲ ಅಂತ ಸಚಿವರು ಹೇಳಿದ್ದಾರೆ. ರಾಜ್ಯದಲ್ಲಿ ಶಾಲೆಗಳನ್ನು ಸದ್ಯಕ್ಕೆ ಆರಂಭಿಸದಿರಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಹಿಂದೆ ಕಾರಣವಿದೆ. ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ದಿನೇದಿನೆ ಹೆಚ್ಚಾಗುತ್ತಿದ್ದು ಸೋಂಕಿಗೆ ಬಲಿಯಾದವರ ಸಂಖ್ಯೆ 8 ಸಾವಿರ ದಾಟಿದ್ದರೆ ಇದುವರೆಗೆ ಸೋಂಕಿಗೀಡಾದವರು 6 ಲಕ್ಷಕ್ಕೂ ಹೆಚ್ಚು. ರಾಜಧಾನಿ ಬೆಂಗಳೂರು ಕೊವಿಡ್-19 ಪಾಸಿಟಿವ್ ಪ್ರಕರಣಗಳಿಗೂ ರಾಜಧಾನಿಯಾಗಿಬಿಟ್ಟಿದೆ. ಜಿಲ್ಲಾ ಕೇಂದ್ರಗಳಲ್ಲೂ ಸೋಂಕಿನ ಹಾವಳಿ ಅಧಿಕವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಮಕ್ಕಳು ಶಾಲೆಗಳಿಗೆ ಬಂದರೆ ಅಪಾಯ ತಪ್ಪಿದ್ದಲ್ಲ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ದಿನೇದಿನೆ ಹೆಚ್ಚಾಗುತ್ತಿದ್ದು ಸೋಂಕಿಗೆ ಬಲಿಯಾದವರ ಸಂಖ್ಯೆ 8 ಸಾವಿರ ದಾಟಿದ್ದರೆ ಇದುವರೆಗೆ ಸೋಂಕಿಗೀಡಾದವರು 6 ಲಕ್ಷಕ್ಕೂ ಹೆಚ್ಚು. ರಾಜಧಾನಿ ಬೆಂಗಳೂರು ಕೊವಿಡ್-19 ಪಾಸಿಟಿ
ಶಾಲೆಗಳನ್ನು ತೆರೆಯುವುದನ್ನು ಮುಂದೂಡುವುದಕ್ಕೆ ಮತ್ತೊಂದು ಕಾರಣವೆಂದರೆ ಅನ್ಲಾಕ್ 5.0ಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿನ ಒಂದು ಅಂಶ. ಶಾಲೆ ತೆರೆಯಲು ಅನುಮತಿ ನೀಡಿದರೂ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳೇ ಶಾಲೆಗಳ ಪುನರಾರಂಭ ಕುರಿತು ನಿರ್ಧರಿಸಬೇಕು. ಅಲ್ಲದೆ ಒಂದು ವೇಳೆ ಶಾಲೆ ಓಪನ್ ಮಾಡಿದರೂ ಆನ್ಲೈನ್ ಕ್ಲಾಸ್ ನಡೆಸುವುದನ್ನು ಮುಂದುವರಿಸಬಹುದೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಹಾಜರಾತಿ ಯಾವುದೇ ಕಾರಣಕ್ಕೂ ಕಡ್ಡಾಯ ಮಾಡಬಾರದು ಮತ್ತು ಪೋಷಕರ ಒಪ್ಪಿಗೆ ಇದ್ದಲ್ಲಿ ಮಾತ್ರ ಮಕ್ಕಳನ್ನ ಶಾಲೆಗೆ ಕಳುಹಿಸಬಹುದು ಅಂತಲೂ ಕೇಂದ್ರ ಹೇಳಿರುವುದರಿಂದ ಕರ್ನಾಟಕ ಸರ್ಕಾರ ಶಾಲೆಗಳನ್ನು ಪುನರಾರಂಭಿಸಲು ಧಾವಂತ ತೋರುತ್ತಿಲ್ಲ.
ಇದಲ್ಲದೆ ಶಾಲಾ ಕೊಠಡಿ ಮತ್ತು ಆವರಣ ಪ್ರತಿನಿತ್ಯ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು. ಮಕ್ಕಳಿಗೆ ಸೋಂಕು ಕಂಡು ಬಂದರೆ ತಕ್ಷಣವೇ ವೈದ್ಯರ ಸೇವೆ ಅಗತ್ಯ ನೀಡಬೇಕು. ಇದರ ಜೊತೆಗೆ ದೈಹಿಕ ಅಂತರ ಕಾಪಾಡಲು ಸಹಾಯವಾಗುವಂತೆ ಪಾಳಿ ಪದ್ಧತಿಯಲ್ಲಿ ತರಗತಿ ಸಾಧ್ಯವೇ ಎಂಬ ಯೋಚನೆಯೊಂದಿಗೆ ಪೋಷಕರು ಮಕ್ಕಳನ್ನ ಶಾಲೆಗೆ ಕಳಿಸಲು ಒಪ್ಪದೇ ಹೋದರೆ ಹೇಗೆ ಎಂಬ ಚಿಂತೆಯೂ ಸರ್ಕಾರಕ್ಕಿದೆ.