BPL ಕುಟುಂಬ ಆರೋಗ್ಯ ವಿಮೆಗಾಗಿ ಇಂಧನದ ಮೇಲೆ ಸೆಸ್ ವಿಧಿಸಲು ಕರ್ನಾಟಕ ಸರ್ಕಾರ ಚಿಂತನೆ

| Updated By: Rakesh Nayak Manchi

Updated on: Dec 09, 2023 | 10:40 PM

BPL ಕಾರ್ಡುದಾರರಿಗೆ ಸಾರ್ವತ್ರಿಕ ಆರೋಗ್ಯ ಯೋಜನೆಯನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಹಣ ಕ್ರೂಢೀಕರಿಸುವ ಉದ್ದೇಶವನ್ನು ಇಟ್ಟುಕೊಂಡು ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 50 ಪೈಸೆಯಿಂದ 1 ರೂಪಾಯಿವರೆಗೆ ಸೆಸ್ ವಿಧಿಸಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ.

BPL ಕುಟುಂಬ ಆರೋಗ್ಯ ವಿಮೆಗಾಗಿ ಇಂಧನದ ಮೇಲೆ ಸೆಸ್ ವಿಧಿಸಲು ಕರ್ನಾಟಕ ಸರ್ಕಾರ ಚಿಂತನೆ
BPL ಕುಟುಂಬ ಆರೋಗ್ಯ ವಿಮೆಗಾಗಿ ಇಂಧನದ ಮೇಲೆ ಸೆಸ್ ವಿಧಿಸಲು ಕರ್ನಾಟಕ ಸರ್ಕಾರ ಚಿಂತನೆ
Follow us on

ಬೆಂಗಳೂರು, ಡಿ.9: ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 50 ಪೈಸೆಯಿಂದ 1 ರೂಪಾಯಿವರೆಗೆ ಸೆಸ್ ವಿಧಿಸಲು ಕರ್ನಾಟಕ ಕಾಂಗ್ರೆಸ್ ಸರ್ಕಾರ (Karnataka Govt) ಚಿಂತನೆ ನಡೆಸಿದೆ. 1.8 ಕೋಟಿ ಬಡತನ ರೇಖೆಗಿಂತ ಕೆಳಗಿರುವ (BPL) ಕಾರ್ಡುದಾರರಿಗೆ ಸಾರ್ವತ್ರಿಕ ಆರೋಗ್ಯ ಯೋಜನೆಯನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಹಣ ಕ್ರೂಢೀಕರಿಸುವ ಉದ್ದೇಶವಾಗಿದೆ.

1.8 ಕೋಟಿ ಬಿಪಿಎಲ್ ಕಾರ್ಡುದಾರರನ್ನು ಒಳಗೊಳ್ಳುವ ಈ ಯೋಜನೆಯು ಪ್ರತಿ ವ್ಯಕ್ತಿಗೆ ಆರೋಗ್ಯ ಮತ್ತು ಅಪಘಾತದ ಕವರೇಜ್‌ನಲ್ಲಿ ಅಂದಾಜು 25 ಲಕ್ಷ ರೂ. ಒದಗಿಸುತ್ತದೆ. ಇದು ಗ್ರಾಹಕರ ಮೇಲೆ ಕನಿಷ್ಠ ಪರಿಣಾಮ ಬೀರಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾಗಿ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ವಾರದಲ್ಲಿ 70 ಗಂಟೆ ಕೆಲಸ ಹೇಳಿಕೆಗೆ ಬದ್ಧ, 40 ವರ್ಷ ನಾನೂ ಮಾಡಿದ್ದೇನೆ: ನಾರಾಯಣ ಮೂರ್ತಿ

ಕೇವಲ 50 ಪೈಸೆಯಿಂದ 1 ರೂಪಾಯಿಗೆ ಏರಿಕೆಯಾಗುವುದರಿಂದ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಪಘಾತ ಮತ್ತು ಆರೋಗ್ಯ ರಕ್ಷಣೆಯಲ್ಲಿ 25 ಲಕ್ಷ ರೂ. ಕವರೇಜ್ ಅನ್ನು ಮರಳಿ ಪಡೆಯಲು ಇದು ಸಹಾಯ ಮಾಡುತ್ತದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಪ್ರಾಥಮಿಕ ಇಲಾಖೆಯ ಅಂಕಿಅಂಶಗಳ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಪ್ರಸ್ತಾವಿತ ಸೆಸ್, ಆರೋಗ್ಯ ಯೋಜನೆಯ ಅನುಷ್ಠಾನಕ್ಕೆ ಅನುಕೂಲವಾಗಲು ಪ್ರತಿ ವರ್ಷ 1,200 ಕೋಟಿಯಿಂದ 1,500 ಕೋಟಿ ರೂಪಾಯಿಗಳನ್ನು ಕ್ರೂಢೀಕರಿಸುವ ನಿರೀಕ್ಷೆ ಹೊಂದಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ