Covid Warriors: ಕೊವಿಡ್ ಸೇನಾನಿಗಳಿಗೆ ಪ್ರೋತ್ಸಾಹ ಧನ 6 ತಿಂಗಳವರೆಗೂ ವಿಸ್ತರಣೆ ಮಾಡುವಂತೆ ಆದೇಶ

|

Updated on: May 27, 2021 | 8:03 PM

Covid Warriors Karnataka: ಆರೋಗ್ಯ ಇಲಾಖೆ ಹಾಗೂ ಎನ್‌ಹೆಚ್‌ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ತಜ್ಞರು, ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್‌ಗಳು, ಡಿ-ಗ್ರೂಪ್ ನೌಕರರಿಗೆ ನೀಡಲ್ಪಡುವ ವಿಶೇಷ ಭತ್ಯೆ ಮುಂದುವರೆಸಲಾಗಿದೆ.

Covid Warriors: ಕೊವಿಡ್ ಸೇನಾನಿಗಳಿಗೆ ಪ್ರೋತ್ಸಾಹ ಧನ 6 ತಿಂಗಳವರೆಗೂ ವಿಸ್ತರಣೆ ಮಾಡುವಂತೆ ಆದೇಶ
ಕೊವಿಡ್ ವಾರಿಯರ್ಸ್​
Follow us on

ಬೆಂಗಳೂರು: ಕೊರೊನಾ ಸೇನಾನಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಏಪ್ರಿಲ್ 1ರಿಂದ ಅನ್ವಯವಾಗುವಂತೆ 6 ತಿಂಗಳವರೆಗೆ ವಿಸ್ತರಿಸಿ ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಇಲಾಖೆ ಹಾಗೂ ಎನ್‌ಹೆಚ್‌ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ತಜ್ಞರು, ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್‌ಗಳು, ಡಿ-ಗ್ರೂಪ್ ನೌಕರರಿಗೆ ನೀಡಲ್ಪಡುವ ವಿಶೇಷ ಭತ್ಯೆಯನ್ನು ಇನ್ನೂ 6 ತಿಂಗಳ ಕಾಲ ಮುಂದುವರೆಸಲು ಆದೇಶ ನೀಡಲಾಗಿದೆ.

ಈ ಕುರಿತು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಕೊವಿಡ್ ವಾರಿಯರ್ ಅಥವಾ ಸೇನಾನಿಗಳಿಗೆ ನೀಡುತ್ತಿರುವ ವಿಶೇಷ ಭತ್ಯೆಯನ್ನು ಇನ್ನೂ 6 ತಿಂಗಳ ಕಾಲ ಮುಂದುವರೆಸುವುದಾಗಿ ಅವರು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಜತೆಗೆ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಘೋಷಿತ ಲಾಕ್ ಡೌನ್ ಆರ್ಥಿಕ ಪ್ಯಾಕೇಜ್​ನಲ್ಲಿಸಹಾಯ ಧನ ನೀಡಲು ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹಣ ಬಿಡುಗಡೆ ಮಾಡುವಂತೆ ಆದೇಶಿಸಲಾಗಿದೆ. ತಲಾ 3000 ರೂ. ಬಿಡುಗಡೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಸೋಮವಾರದೊಳಗೆ ಕಟ್ಟಡ ಕಾರ್ಮಿಕರಿಗೆ ತಲುಪಲಿದೆ ಕೊವಿಡ್ ಪ್ಯಾಕೇಜ್: ಸಚಿವ ಶಿವರಾಮ್ ಹೆಬ್ಬಾರ್

ಕೊವಿಡ್​ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ; ನೇಮಕಾತಿ ಪತ್ರ ನೀಡಿದ ಸಚಿವ ಸುರೇಶ್ ಕುಮಾರ್

(Karnataka Govt Orders to extend the incentives for Covid Warriors to 6 months)

Published On - 7:56 pm, Thu, 27 May 21