ಶಾಲಾ ಮಕ್ಕಳಿಗೆ 20 ದಿನಗಳಲ್ಲಿ ಎಲ್ಲಾ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುವುದು: ಹೈಕೋರ್ಟ್​ಗೆ ಸರ್ಕಾರದ ಹೇಳಿಕೆ

| Updated By: ganapathi bhat

Updated on: Aug 30, 2021 | 7:33 PM

Karnataka HC: 20 ದಿನಗಳಲ್ಲಿ ಎಲ್ಲ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುವುದು ಎಂದು ಸರ್ಕಾರಿ ವಕೀಲರು ಹೈಕೋರ್ಟ್​​ಗೆ ಹೇಳಿಕೆ ನೀಡಿದ್ದಾರೆ. ಸರ್ಕಾರದ ಹೇಳಿಕೆ ದಾಖಲಿಸಿಕೊಂಡು ಹೈಕೋರ್ಟ್ ಸಮಯ ನೀಡಿದೆ.

ಶಾಲಾ ಮಕ್ಕಳಿಗೆ 20 ದಿನಗಳಲ್ಲಿ ಎಲ್ಲಾ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುವುದು: ಹೈಕೋರ್ಟ್​ಗೆ ಸರ್ಕಾರದ ಹೇಳಿಕೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಪೂರೈಕೆ ವಿಚಾರವಾಗಿ ಸರ್ಕಾರಿ ವಕೀಲರು ಹೈಕೋರ್ಟ್​ಗೆ ಹೇಳಿಕೆ ನೀಡಿದ್ದಾರೆ. ಈವರೆಗೆ ಶೇಕಡಾ 54.74 ರಷ್ಟು ಪಠ್ಯ ಪುಸ್ತಕ ಒದಗಿಸಲಾಗಿದೆ. ಉಳಿದ ಪಠ್ಯ ಪುಸ್ತಕಗಳ ಪ್ರಿಂಟಿಂಗ್ ಪ್ರಗತಿಯಲ್ಲಿದೆ. 20 ದಿನಗಳಲ್ಲಿ ಎಲ್ಲ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುವುದು ಎಂದು ಸರ್ಕಾರಿ ವಕೀಲರು ಹೈಕೋರ್ಟ್​​ಗೆ ಹೇಳಿಕೆ ನೀಡಿದ್ದಾರೆ. ಸರ್ಕಾರದ ಹೇಳಿಕೆ ದಾಖಲಿಸಿಕೊಂಡು ಹೈಕೋರ್ಟ್ ಸಮಯ ನೀಡಿದೆ. ಹೈಕೋರ್ಟ್ ಸರ್ಕಾರಕ್ಕೆ 20 ದಿನ ಸಮಯ ನೀಡಿದೆ.

ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆ ಅಗಲೀಕರಣ ವಿಚಾರವಾಗಿ ಸಮರ್ಪಣಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಲಾಗಿದೆ. ಅರಮನೆ ಮೈದಾನ ಮಾಲೀಕತ್ವ ವಿವಾದ ಸುಪ್ರೀಂ ಕೋರ್ಟ್​ನಲ್ಲಿದೆ. ಟಿಡಿಆರ್ ವಿಚಾರದಲ್ಲಿ ಸ್ಪಷ್ಟನೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ. ಹೀಗಾಗಿ, ಟಿಡಿಆರ್ ಗೊಂದಲ ಬಗೆಹರಿದ ನಂತರ ಅಗಲೀಕರಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಹೇಳಿದೆ. ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ರಸ್ತೆಯಲ್ಲಿ ವಿಐಪಿ ಸಂಚಾರ ಹೆಚ್ಚಿರುವುದರಿಂದ‌ ಸಮಸ್ಯೆ ಆಗುತ್ತಿದೆ. ಜನಸಾಮಾನ್ಯರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವಂತಾಗಿದೆ. ಈ ಸಮಸ್ಯೆಯನ್ನು ಸ್ವತಃ ಅನುಭವಿಸಿದ್ದೇವೆ. ಹೀಗಾಗಿ ಶೀಘ್ರ ಕ್ರಮ‌ಕೈಗೊಳ್ಳಲು ಹೈಕೋರ್ಟ್ ಸೂಚನೆ ನೀಡಿದೆ.

ದಾವಣಗೆರೆ: ಪರಿಹಾರ ನೀಡಲು ಕೆಎಸ್​ಆರ್​ಟಿಸಿ ಹಿಂದೇಟು; ಬಸ್ ಸೀಜ್
ಅಪಘಾತವೊಂದಕ್ಕೆ ಪರಿಹಾರ ನೀಡಲು ಕೆಎಸ್ಆರ್​ಟಿಸಿ ಹಿಂದೇಟು ಹಾಕಿದ ಕಾರಣಕ್ಕೆ ಕೋರ್ಟ್ ಸಿಬ್ಬಂದಿ, ಕೆಎಸ್‌ಆರ್‌ಟಿಸಿ ಬಸ್ಸನ್ನು ಸೀಜ್ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಬಸ್ ನಿಲ್ದಾಣದಲ್ಲಿ ನಡೆದಿದೆ. ಹುಬ್ಬಳ್ಳಿ ವಿಭಾಗದ KA 63 F 0082 ನೋಂದಣಿ ಬಸ್ ಜಪ್ತಿಗೊಳಗಾದದ್ದು.  13 ಸೆಪ್ಟಂಬರ್‌ 2017 ರಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಕ್ರಾಸ್‌ ಬಳಿ ಬೈಕ್‌ ಹಾಗೂ ಕೆಎಎಸ್ಆರ್​ಟಿಸಿ ಬೈಕ್‌ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಹೊಸಳ್ಳಿ ಗ್ರಾಮದ ನಿವಾಸಿಗಳಾದ ಮಂಜುನಾಥ (26), ಬಸವರಾಜ್‌ (28) ಎಂಬ ಇಬ್ಬರು ಯುವಕರು ಮೃತಪಟ್ಟಿದ್ದರು. ಮಂಜುನಾಥ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದರು. ಬಸವರಾಜ್‌ ಕೃಷಿಕರಾಗಿದ್ದರು. ಪರಿಹಾರ ಕೋರಿ ಮೃತರ ತಂದೆ ಚಂದ್ರಪ್ಪ ಪ್ರಕರಣ ದಾಖಲಿಸಿದ್ದರು. ಹರಿಹರದ ನ್ಯಾಯಾಲಯ ಪ್ರಕರಣದಲ್ಲಿ 18.17 ಲಕ್ಷ ಪರಿಹಾರ ನೀಡಲು ಆದೇಶಿಸಿತ್ತು.

ನಂತರ ಹೆಚ್ಚುವರಿ ಪರಿಹಾರಕ್ಕಾಗಿ ಹೈಕೋರ್ಟ್‌ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ ₹ 47.84 ಲಕ್ಷ ಪರಿಹಾರ ಜತೆ ಶೇ.ಕಡಾ 6ರಷ್ಟು ಬಡ್ಡಿಯನ್ನು ಪರಿಹಾರ ರೂಪದಲ್ಲಿ ಮೃತರ ಪೋಷಕರಿಗೆ ನೀಡುವಂತೆ ಕೆಎಸ್ಆರ್​ಟಿಸಿಗೆ ಆದೇಶಿಸಿತ್ತು. ಕೋರ್ಟ್ ಆದೇಶವನ್ನು ಕೆಎಸ್ಆರ್​ಟಿಸಿ ಪಾಲಿಸದ ಕಾರಣ ಕೋರ್ಟ್ ಸಿಬ್ಬಂದಿ ಇಂದು ದಾವಣಗೆರೆ ಜಿಲ್ಲೆಯ ಹರಿಹರ ಬಸ್ ನಿಲ್ದಾಣದಲ್ಲಿ ಬಸ್ಸನ್ನು ಜಪ್ತಿ ಮಾಡಿದ್ದಾರೆ. ಸಂತ್ರಸ್ತರ ಪರ ವಕೀಲ ಕಿತ್ತೂರು ಶೇಖ್‌ ಇಬ್ರಾಹಿಂ ವಾದ ಮಂಡಿಸಿದ್ದರು.

ಇದನ್ನೂ ಓದಿ: ರಾಜ್ಯಸಭೆ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದ ರಂಜನ್ ಗೊಗೊಯಿ ನಾಮನಿರ್ದೇಶನ ಪ್ರಶ್ನಿಸಿ ಸುಪ್ರೀಂಕೋರ್ಟ್​​ಗೆ ಅರ್ಜಿ

ವಿಚಾರಣೆ ವೇಳೆ ಕೋರ್ಟ್​ನಲ್ಲೇ ಅತ್ತ ಶಾಲಿನಿ ತಲ್ವಾರ್​; ಹನಿ ಸಿಂಗ್​ ಬಗ್ಗೆ ಅಸಮಾಧಾನ ಹೊರ ಹಾಕಿದ ಕೋರ್ಟ್​

Published On - 7:30 pm, Mon, 30 August 21