ಕೊರೊನಾ ಟೆಸ್ಟ್ ರಿಪೋರ್ಟ್ ಬರುವ ಮುನ್ನವೇ ಸೋಂಕಿನ ಲಕ್ಷಣವಿದ್ದರೆ ಔಷಧಿಗಳ ಚೀಟಿ ನೀಡಲು ಆರೋಗ್ಯ ಇಲಾಖೆ ಸೂಚನೆ

|

Updated on: May 06, 2021 | 7:31 PM

Karnataka Health Department: ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ದರ ಹೆಚ್ಚಿದೆ. ಹೀಗಾಗಿ ಯಾರೇ ಆದರೂ ಕೊವಿಡ್ ಲಕ್ಷಣಗಳು ಕಂಡುಬಂದಲ್ಲಿ ಟೆಸ್ಟ್ ರಿಪೋರ್ಟ್​ಗೂ ಮುನ್ನವೇ ಔಷಧಗಳ ಚೀಟಿ ನೀಡಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರ ಸೂಚನೆ ಮೇರೆಗೆ ಆದೇಶಿಸಲಾಗಿದೆ.

ಕೊರೊನಾ ಟೆಸ್ಟ್ ರಿಪೋರ್ಟ್ ಬರುವ ಮುನ್ನವೇ ಸೋಂಕಿನ ಲಕ್ಷಣವಿದ್ದರೆ ಔಷಧಿಗಳ ಚೀಟಿ ನೀಡಲು ಆರೋಗ್ಯ ಇಲಾಖೆ ಸೂಚನೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಕೊವಿಡ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿರುವ ಕಾರಣ ಸಾರ್ವಜನಿಕರಲ್ಲಿ ಕೊವಿಡ್ ಸೋಂಕಿನ ಗುಣಲಕ್ಷಣಗಳು ಕಂಡುಬಂದ ತಕ್ಷಣ ಚಿಕಿತ್ಸೆಗೆ ಔಷಧಿಗಳ ಪ್ರಿಸ್ಕ್ರಿಪ್ಶನ್ ನೀಡುವಂತೆ ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳು, ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ದರ ಹೆಚ್ಚಿದೆ. ಹೀಗಾಗಿ ಯಾರೇ ಆದರೂ ಕೊವಿಡ್ ಲಕ್ಷಣಗಳು ಕಂಡುಬಂದಲ್ಲಿ ಟೆಸ್ಟ್ ರಿಪೋರ್ಟ್​ಗೂ ಮುನ್ನವೇ ಔಷಧಗಳ ಚೀಟಿ ನೀಡಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರ ಸೂಚನೆ ಮೇರೆಗೆ ಆದೇಶಿಸಲಾಗಿದೆ.

ಸರ್ಕಾರದ ವಿರುದ್ಧ ಫನಾ ಆಕ್ರೋಶ
ಆಸ್ಪತ್ರೆಗಳಲ್ಲಿ 3 ದಿನಕ್ಕಾಗುವಷ್ಟು ಆಕ್ಸಿಜನ್ ಇಲ್ಲದಿದ್ದರೆ ರೋಗಿಗಳನ್ನು ದಾಖಲು ಮಾಡಿಕೊಳ್ಳಬಾರದು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ವಿರುದ್ಧ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳ ಒಕ್ಕೂಟದ (ಫನಾ) ಅಧ್ಯಕ್ಷ ಡಾ.ಪ್ರಸನ್ನ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸರ್ಕಾರದ ಈ ಹೊರಡಿಸಿರುವ ಆದೇಶ ಪಾಲಿಸಲು ಮುಂದಾದರೆ ಕಷ್ಟವಾಗುತ್ತದೆ. ಈಗಿರುವ ಶೇಕಡಾ 40 ರಿಂದ70 ರೋಗಿಗಳನ್ನು ಹೊರ ಹಾಕಬೇಕಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಈ ನಿಯಮ ಪಾಲನೆ ಮಾಡಬಹುದು. 3 ದಿನಗಳಿಗಾಗುವಷ್ಟು ಆಕ್ಸಿಜನ್ ಸ್ಟೋರೇಜ್ ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿರುವ ಅವರು, ಈ ಆದೇಶದ ಪಾಲನೆಯಿಂದ ರೋಗಿಗಳ ಸಾವುನೋವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಇದನ್ನೂ ಓದಿ: ಲಸಿಕೆಯ ಶಕ್ತಿಯಿಂದಲೇ ಪೊಲೀಸರಿಗೆ ಕೊರೊನಾ ಸೋಂಕಿನ 2ನೇ ಅಲೆ ಎದುರಿಸಲು ಸಾಧ್ಯವಾಯ್ತು: ಪ್ರವೀಣ್ ಸೂದ್ 

ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕಾಗಿ ಮೇ 8ರಿಂದ 16ರವರೆಗೆ ಕೇರಳದಲ್ಲಿ ಸಂಪೂರ್ಣ ಲಾಕ್​ಡೌನ್

(Karnataka Health department instructs to issue a prescription if there is a symptom of an infection before the Corona Test Report arrives)