ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆಯಾಗಿದೆ: ಸಚಿವ ಡಾ.ಸುಧಾಕರ್

|

Updated on: May 23, 2021 | 6:42 PM

Medical Facility in Karnataka: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ಒಗ್ಗಟ್ಟಿನ ಕಾರ್ಯನಿರ್ವಹಣೆಯಿಂದ ಫಲದಿಂದ ಕೊವಿಡ್ 2ನೇ ಅಲೆಯ ತೀವ್ರತೆ ಮಧ್ಯೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಮೇ 22ರವರೆಗೆ 2 ಕೋಟಿ 38 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ರಾಜ್ಯದಲ್ಲಿ ಶೇ.80ಕ್ಕಿಂತ ಹೆಚ್ಚು RTPCR ಪರೀಕ್ಷೆ ಮಾಡಿದ್ದೇವೆ. ರಾಜ್ಯಾದ್ಯಂತ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ದುಪ್ಪಟ್ಟಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆಯಾಗಿದೆ: ಸಚಿವ ಡಾ.ಸುಧಾಕರ್
ಡಾ.ಕೆ. ಸುಧಾಕರ್​
Follow us on

ಬೆಂಗಳೂರು: ಕೊವಿಡ್ ನಂತರ ಕರ್ನಾಟಕ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗಿದೆ. ಕಳೆದ 1 ವರ್ಷದಲ್ಲಿ ಆರೋಗ್ಯ ಮೂಲಸೌಕರ್ಯ ಚುರುಕುಗೊಂಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ರಾಜ್ಯಾದ್ಯಂತ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ದುಪ್ಪಟ್ಟಾಗಿದ್ದು, ಕೊವಿಡ್‌ ಸಂಕಷ್ಟದ ಬೆನ್ನಲ್ಲೇ ಆಕ್ಸಿಜನ್ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ನಿತ್ಯ ಸುಮಾರು 2 ಲಕ್ಷ ಕೊವಿಡ್ ಟೆಸ್ಟ್‌ ಮಾಡುವ ಸಾಮರ್ಥ್ಯ ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

1,015 ಮೆಟ್ರಿಕ್ ಟನ್ ಆಕ್ಸಿಜನ್ ಲಭ್ಯವಿದ್ದು, 22ಸಾವಿರಕ್ಕೂ ಹೆಚ್ಚು ಬೆಡ್​ಗಳನ್ನು ಅಭಿವೃದ್ಧಿಪಡಿಸಲಾಗಿದೆ.  ಕೊವಿಡ್ ಸಾಂಕ್ರಾಮಿಕ ರೋಗ ನಿರ್ವಹಣೆಗೆ ಸಮರ್ಪಕ ಔಷಧಗಳನ್ನು ಪೂರೈಸಲಾಗುತ್ತಿದೆ. ಆರೋಗ್ಯ ಮೂಲಸೌಕರ್ಯ ವೃದ್ಧಿಗೆ ರಾಜ್ಯ ಸರ್ಕಾರದ ಕ್ರಮ ಕೈಗೊಂಡಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ಒಗ್ಗಟ್ಟಿನ ಕಾರ್ಯನಿರ್ವಹಣೆಯಿಂದ ಫಲದಿಂದ ಕೊವಿಡ್ 2ನೇ ಅಲೆಯ ತೀವ್ರತೆ ಮಧ್ಯೆ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ. ಮೇ 22ರವರೆಗೆ 2 ಕೋಟಿ 38 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ರಾಜ್ಯದಲ್ಲಿ ಶೇ.80ಕ್ಕಿಂತ ಹೆಚ್ಚು RTPCR ಪರೀಕ್ಷೆ ಮಾಡಿದ್ದೇವೆ. ರಾಜ್ಯಾದ್ಯಂತ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ದುಪ್ಪಟ್ಟಾಗಿದೆ. ಕೊವಿಡ್‌ ಸಂಕಷ್ಟದ ಬೆನ್ನಲ್ಲೇ ಆಕ್ಸಿಜನ್ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಪ್ರತಿ ದಿನ ಸುಮಾರು 2 ಲಕ್ಷ ಕೊವಿಡ್ ಟೆಸ್ಟ್‌ ಮಾಡುವ ಸಾಮರ್ಥ್ಯ ಹೊಂದಿದೆ. 2020 ಫೆಬ್ರವರಿಯಲ್ಲಿ 2 ಲ್ಯಾಬ್ ಇತ್ತು. ಆದರೆ ಈಗ 241 ಲ್ಯಾಬ್ ಇವೆ. ಮೇ 22ರವರೆಗೆ 1 ಕೋಟಿ 20 ಲಕ್ಷ 14 ಸಾವಿರ 15 ಜನರಿಗೆ ಲಸಿಕೆ ನೀಡಲಾಗಿದೆ. ಆರ್ಥಿಕ ಸಂಕಷ್ಟದ ಮಧ್ಯೆಯೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯನ್ನು ಸರ್ಕಾರ ಕೈಗೊಂಡಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ಇರುವ ಮುಖ್ಯಾಂಶಗಳು
ವೈದ್ಯಕೀಯ ಆಮ್ಲಜನಕ
ರಾಜ್ಯದಲ್ಲಿ 815 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದ್ದು, ಕೇಂದ್ರ ಸರ್ಕಾರದಿಂದ 1,015 ಟನ್ ಹಂಚಿಕೆಯಾಗಿದೆ. ಯಾದಗಿರಿ, ಕೆಜಿಎಫ್ ನಲ್ಲಿ ಎರಡು ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಡಿಆರ್​ಡಿಒ ನೆರವಿನಲ್ಲಿ 1,000 ಎಲ್ ಪಿಎಂ ಸಾಮರ್ಥ್ಯದ ಮೂರು ಆಕ್ಸಿಜನ್ ಘಟಕಗಳನ್ನು ಸಿವಿ ರಾಮನ್ ಆಸ್ಪತ್ರೆ, ಕಲಬುರ್ಗಿ ಇಎಸ್‍ಐ ಮೆಡಿಕಲ್ ಕಾಲೇಜು, ಕೊಪ್ಪಳ ಮೆಡಿಕಲ್ ಸೈನ್ಸಸ್ ಸಂಸ್ಥೆಯಲ್ಲಿ ಆರಂಭಿಸಲಾಗುತ್ತಿದೆ. ಬಳ್ಳಾರಿಯಲ್ಲಿ 1,000 ಆಕ್ಸಿಜನ್ ಹಾಸಿಗೆಯುಳ್ಳ ಆಸ್ಪತ್ರೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರವು 600 ಎಲ್‍ಪಿಎಂ ಸಾಮರ್ಥ್ಯದ 6 ಪಿಎಸ್‍ಎ ಘಟಕ ಆರಂಭಕ್ಕೆ ಅನುಮೋದನೆ ನೀಡಿದೆ. 10 ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳಲ್ಲಿ ಸುಮಾರು 1000 ಮೆಟ್ರಿಕ್ ಟನ್ ಆಕ್ಸಿಜನ್ ರಾಜ್ಯಕ್ಕೆ ಪೂರೈಕೆಯಾಗಿದೆ.

ಆಕ್ಸಿಜನ್ ಯುಕ್ತ ಹಾಸಿಗೆ
2020 ರ ಮಾರ್ಚ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ 1,970 ಆಕ್ಸಿಜನ್ ಹಾಸಿಗೆಗಳಿದ್ದು, 22,001 ಹೊಸದಾಗಿ ಅಳವಡಿಸಲಾಗಿದೆ. ಇದರಿಂದ ಒಟ್ಟು ಆಕ್ಸಿಜನ್ ಹಾಸಿಗೆ ಸಂಖ್ಯೆ 23,971 ಕ್ಕೆ ಏರಿಕೆಯಾಗಿದೆ. 444 ಐಸಿಯು ಹಾಸಿಗೆ ಇದ್ದು, 701 ಹೊಸದಾಗಿ ಅಳವಡಿಸಲಾಗಿದೆ. ಇದರಿಂದ ಒಟ್ಟು ಐಸಿಯು ಹಾಸಿಗೆ ಸಂಖ್ಯೆ 1,145 ಕ್ಕೆ ಏರಿಕೆಯಾಗಿದೆ. 610 ವೆಂಟಿಲೇಟರ್ ಇದ್ದು, ಹೊಸದಾಗಿ 1,548 ಅಳವಡಿಸಿ ಒಟ್ಟು ಸಂಖ್ಯೆಯನ್ನು 2,158 ಕ್ಕೆ ಏರಿಸಲಾಗಿದೆ. ಹೊಸದಾಗಿ 1,248 ಎಚ್‍ಎಫ್‍ಎನ್ಸಿ ಹಾಸಿಗೆ ಅಳವಡಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯಡಿಯ ಆಸ್ಪತ್ರೆಗಳಲ್ಲಿ, 4,700 ಆಕ್ಸಿಜನ್ ಹಾಸಿಗೆಗಳಿದ್ದು, ಹೊಸದಾಗಿ 4,705 ಅಳವಡಿಸಲಾಗಿದೆ. ಇದರಿಂದ ಒಟ್ಟು ಆಕ್ಸಿಜನ್ ಹಾಸಿಗೆ ಸಂಖ್ಯೆ 9,405 ಕ್ಕೆ ಏರಿಕೆಯಾಗಿದೆ. 341 ವೆಂಟಿಲೇಟರ್ ಇದ್ದು, ಹೊಸದಾಗಿ 305 ಅಳವಡಿಸಿ ಒಟ್ಟು ಸಂಖ್ಯೆಯನ್ನು 646 ಕ್ಕೆ ಏರಿಸಲಾಗಿದೆ. 15 ಎಚ್‍ಎಫ್‍ಎನ್ಸಿ ಹಾಸಿಗೆ ಇದ್ದು, 555 ಹೊಸದಾಗಿ ಅಳವಡಿಸಿದ್ದರಿಂದ ಒಟ್ಟು ಸಂಖ್ಯೆ 570 ಕ್ಕೆ ಏರಿಕೆಯಾಗಿದೆ. 151 ಕೆಎಲ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸೌಲಭ್ಯವಿದ್ದು, 73 ಕೆಎಲ್ ಅಳವಡಿಸಿ, ಒಟ್ಟು ಸಾಮರ್ಥ್ಯವನ್ನು 224 ಕೆಎಲ್ ಗೆ ಏರಿಸಲಾಗಿದೆ.

ರೆಮ್ ಡಿಸಿವಿರ್
5 ಲಕ್ಷ ವಯಲ್ಸ್ ಖರೀದಿಗೆ ಜಾಗತಿಕ ಟೆಂಡರ್ ಕರೆಯಲಾಗಿದೆ. ಮೇ ನಲ್ಲಿ 51,360 ವೈಲ್ ಖರೀದಿಗೆ ಆದೇಶಿಸಿದ್ದು, 11,000 ದೊರೆತಿದೆ. ಸಿಎಸ್ಆರ್ ನಡಿ, 900 ವೈಲ್ ಪಡೆಯಲಾಗಿದೆ. ಕೇಂದ್ರ ಸರ್ಕಾರದಿಂದ 56,943 ವೈಲ್ ಪಡೆಯಲಾಗಿದೆ.

ಇದನ್ನೂ ಓದಿ: Karnataka PUC Exam 2021: ದ್ವಿತೀಯ ಪಿಯು ಪರೀಕ್ಷೆ ಅನಿವಾರ್ಯ,ಕೊವಿಡ್ ನಂತರ ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆ ಸಿದ್ಧವಿದೆ: ಸಚಿವ ಸುರೇಶ್ ಕುಮಾರ್

Bengaluru Air: ಲಾಕ್​ಡೌನ್ ಪರಿಣಾಮ: ಬೆಂಗಳೂರು ನಗರದಲ್ಲಿ ಗಾಳಿಯ ಶುದ್ಧತೆ ಹೆಚ್ಚಳ

(Karnataka Health Minister Dr K Sudhakar released press note says medical facilities are developed in state)

Published On - 6:33 pm, Sun, 23 May 21