ಬೆಂಗಳೂರು: ವಿಶೇಷ ಚೇತನರೊಬ್ಬರಿಗೆ ಸೈಟ್ ಸ್ವಾಧೀನ ನೀಡದ ಆರೋಪಕ್ಕೆ ಸಂಬಂಧಿಸಿ ಬಿಬಿಎಂಪಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಲಾಗಿದೆ. ಬಿಬಿಎಂಪಿ ಕಾರ್ಯವೈಖರಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. 2011ರಲ್ಲೇ ನಿವೇಶನ ಮಂಜೂರಾದರೂ ಸ್ವಾಧೀನ ನೀಡಿಲ್ಲ. ಹೈಕೋರ್ಟ್ ಆದೇಶ ನೀಡಿ 3 ವರ್ಷವಾದರೂ ಪಾಲಿಸಿಲ್ಲ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠದಿಂದ ಅಸಮಾಧಾನ ವ್ಯಕ್ತವಾಗಿದೆ. ನ್ಯಾ. ಬಿ. ವೀರಪ್ಪ, ನ್ಯಾ. ಇ.ಎಸ್. ಇಂದಿರೇಶ್‌ರವರಿದ್ದ ಪೀಠ ಅಸಮಾಧಾನ ತೋರಿದೆ.
ವಿಳಂಬಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಕ್ಷಮೆ ಕೋರಿದ್ದಾರೆ. ಶೀಘ್ರ ನಿವೇಶನ ನೀಡುವುದಾಗಿ ಗೌರವ್ ಗುಪ್ತ ಭರವಸೆ ನೀಡಿದ್ದಾರೆ. ಈ ಸಂಬಂಧ ಅರ್ಜುನ್ ಸಾ ಎಂಬವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ವಿಶೇಷ ಚೇತನರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಯಾಗಿತ್ತು. ನಿವೇಶನ ಹಂಚಿಕೆಯಾಗಿದ್ದರೂ ಸ್ವಾಧೀನ ನೀಡಿರಲಿಲ್ಲ.
ಶಿರೂರು ಮಠಕ್ಕೆ ಬಾಲ ಸನ್ಯಾಸಿ ನೇಮಕ ವಿಚಾರ; ಅಮಿಕಸ್ ಕ್ಯೂರಿ ಆಗಿ ಎಸ್. ನಾಗಾನಂದ್ ನೇಮಕ
ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಕ್ಕೆ ಪೀಠಾಧಿಪತಿಯಾಗಿ ಅಪ್ರಾಪ್ತರ ನೇಮಕ ವಿಚಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ಹಿರಿಯ ವಕೀಲ ಎಸ್. ನಾಗಾನಂದ್ ಅವರನ್ನು ಹೈಕೋರ್ಟ್ ನೇಮಿಸಿದೆ. ಬಾಲಸನ್ಯಾಸಿ ನೇಮಕ ಮಕ್ಕಳ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಅರ್ಜಿದಾರರ ಪರ ವಕೀಲ ಡಿ.ಆರ್. ರವಿಶಂಕರ್ ವಾದ ಮಂಡಿಸಿದ್ದರು.
ಮಧ್ವಾಚಾರ್ಯ, ಶಂಕರಾಚಾರ್ಯ ಬಾಲಸನ್ಯಾಸಿಗಳು. ಅಷ್ಟಮಠಗಳಲ್ಲೂ ಬಾಲ ಸನ್ಯಾಸಿಗಳ ಪರಂಪರೆಯಿದೆ. ಧರ್ಮ ಶಾಸ್ತ್ರ, ವೇದ, ಉಪನಿಷತ್ ಬೋಧಿಸಲಾಗಿದೆ ಎಂದು ಶಿರೂರು ಮಠದ ಪರ ವಕೀಲರು ವಾದಮಂಡಿಸಿದ್ದಾರೆ. 21 ವರ್ಷವಾಗುವವರೆಗೆ ವಿವಾಹಕ್ಕೆ ಕಾನೂನು ಅನುಮತಿಸಲ್ಲ ಮತ್ತು ಐಹಿಕ ಸುಖಭೋಗಗಳಿಂದ ದೂರವಿಡುವ ಆರೋಪ ಸರಿಯಲ್ಲ ಎಂದು ಶಿರೂರು ಮಠದ ಪರ ವಕೀಲರಿಂದ ವಾದಮಂಡನೆ ಮಾಡಿದ್ದಾರೆ. ಸೆಪ್ಟೆಂಬರ್ 23ರ ಒಳಗೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚನೆ ನೀಡಲಾಗಿದೆ.
ಶಿರೂರು ಈ ಮೊದಲಿನ ಸ್ವಾಮೀಜಿ ಲಕ್ಷ್ಮೀವರತೀರ್ಥರ ನಿಧನದ ಬಳಿಕ ಮಠಕ್ಕೆ ನೂತನ ಸನ್ಯಾಸಿಯ ನೇಮಕ ಮಾಡಲಾಗಿತ್ತು. ನೂತನ ಮಠಾಧೀಶರಾಗಿ ಅನಿರುದ್ಧ ಸರಳತ್ತಾಯರನ್ನು ನೇಮಕ ಮಾಡಲಾಗಿತ್ತು. ಸೋದೆ ವಾದಿರಾಜ ಮಠದಿಂದ ಪೀಠಾಧಿಪತಿ ನೇಮಕವಾಗಿತ್ತು. ಈ ಬಗ್ಗೆ ವಿರೋಧಿಸಿ ಶಿರೂರು ಮಠದ ಭಕ್ತರ ಸಮಿತಿ ಪಿಐಎಲ್ ಸಲ್ಲಿಸಿತ್ತು.
ಇದನ್ನೂ ಓದಿ: ಮಾನಹಾನಿ ಪ್ರಕರಣ ವಿಚಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ಗೆ ಸುಪ್ರೀಂ ಕೋರ್ಟ್ನಿಂದ ನೋಟಿಸ್ ಜಾರಿ
ಇದನ್ನೂ ಓದಿ: ’ದೇಶಾದ್ಯಂತ ದೇವಸ್ಥಾನಗಳಲ್ಲಿ ತಮಿಳು ಸ್ತೋತ್ರಗಳನ್ನೂ ಪಠಿಸುವಂತಾಗಬೇಕು‘-ಮದ್ರಾಸ್ ಹೈಕೋರ್ಟ್