Karnataka Weekend Curfew: ರಾಜ್ಯದಲ್ಲಿ ನಾಳೆಯಿಂದಲೇ ಹೊಸ ನಿಯಮ ಜಾರಿ; ಏನಿರತ್ತೆ? ಏನೆಲ್ಲ ಇರಲ್ಲ.. ಇಲ್ಲಿದೆ ನೋಡಿ ಮಾಹಿತಿ

|

Updated on: Apr 20, 2021 | 10:40 PM

ನಾಳೆ ಅಂದರೆ ಏಪ್ರಿಲ್​ 21ರಿಂದ ಮೇ 14ರವರೆಗೆ ರಾಜ್ಯದಲ್ಲಿ ಈ ಹೊಸ ನಿಯಮಗಳು ಜಾರಿಯಲ್ಲಿರಲಿದೆ. ಈ 14ದಿನ ರಾಜ್ಯದಲ್ಲಿ ಏನೆಲ್ಲ ಬಂದ್​ ಇರುತ್ತವೆ? ಏನೇನು ಓಪನ್​ ಇರುತ್ತದೆ ಎಂಬ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.

Karnataka Weekend Curfew: ರಾಜ್ಯದಲ್ಲಿ ನಾಳೆಯಿಂದಲೇ ಹೊಸ ನಿಯಮ ಜಾರಿ; ಏನಿರತ್ತೆ? ಏನೆಲ್ಲ ಇರಲ್ಲ.. ಇಲ್ಲಿದೆ ನೋಡಿ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇಂದು ಸರ್ವಪಕ್ಷಗಳ ಸಭೆಯ ಬಳಿಕ ರಾಜ್ಯದಲ್ಲಿ ರಾತ್ರಿ 9ಗಂಟೆಯಿಂದ ಬೆಳಗ್ಗೆ 6ರವರೆಗೆ ನೈಟ್​ ಕರ್ಫ್ಯೂ, ಮತ್ತು ವೀಕೆಂಡ್​ನಲ್ಲಿ ಕರ್ಫ್ಯೂ (ಶುಕ್ರವಾರ ಸಂಜೆ 9ಗಂಟೆಯಿಂದ ಶನಿವಾರ ಬೆಳಗ್ಗೆ 6ರವರೆಗೆ) ಜಾರಿಯಲ್ಲಿರುತ್ತದೆ. ನಾಳೆ ಅಂದರೆ ಏಪ್ರಿಲ್​ 21ರಿಂದ ಮೇ 14ರವರೆಗೆ ರಾಜ್ಯದಲ್ಲಿ ಈ ಹೊಸ ನಿಯಮಗಳು ಜಾರಿಯಲ್ಲಿರಲಿದೆ. ಈ 14ದಿನ ರಾಜ್ಯದಲ್ಲಿ ಏನೆಲ್ಲ ಬಂದ್​ ಇರುತ್ತವೆ? ಏನೇನು ಓಪನ್ ಇರುತ್ತವೆ? ಇಲ್ಲಿದೆ ನೋಡಿ ಮಾಹಿತಿ:

ಏನೆಲ್ಲ ಬಂದ್​?

  • ಶಾಲಾ-ಕಾಲೇಜು ಸೇರಿ ಎಲ್ಲ ಶಿಕ್ಷಣಸಂಸ್ಥೆಗಳು
  • ಬಾರ್​ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್​ಗಳು, ವೈನ್​ ಸ್ಟೋರ್​ಗಳು (ಪಾರ್ಸೆಲ್ ನೀಡಲು ಮಾತ್ರ ಅವಕಾಶ)
  • ಸಿನಿಮಾ ಥಿಯೇಟರ್​ಗಳು, ಮನರಂಜನಾ ಸ್ಥಳಗಳು, ಪಾರ್ಕ್​ಗಳು, ಸ್ವಿಮ್ಮಿಂಗ್ ಫೂಲ್​, ಜಿಮ್, ಶಾಪಿಂಗ್ ಮಾಲ್​, ಕ್ರೀಡಾಂಗಣಗಳು
  • ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸೇರಿ ಯಾವುದೇ ರೀತಿಯ ಕಾರ್ಯಕ್ರಮಗಳಿಗೆ ನಿಷೇಧ
  • ದೇಗುಲಗಳು, ಚರ್ಚ್​, ಮಸೀದಿಗಳಿಗೆ ಭಕ್ತರು ಭೇಟಿ ನೀಡುವಂತಿಲ್ಲ (ಅರ್ಚಕರು ಪೂಜೆ ಮಾಡಬಹುದು)
  • ನೈಟ್​ ಕರ್ಫ್ಯೂ ಜಾರಿಯಾದ ಮೇಲೆ ಸುಮ್ಮನೆ ಅಡ್ಡಾಡಿದರೆ ಕ್ರಮ
  • ಖಾಸಗಿ ಕಂಪನಿಗಳಿಗೆ ವರ್ಕ್ ಫ್ರಂ ಹೋಂ ನೀಡಲು ಸೂಚನೆ

ಏನೆಲ್ಲ ಇರುತ್ತವೆ?

  • ಬ್ಯಾಂಕ್​, ಎಟಿಎಂ ಸೇವೆಗಳು ಲಭ್ಯ
  • ಬ್ಯೂಟಿಪಾರ್ಲರ್​, ಸಲೂನ್​ಗಳು ತೆರೆದಿರುತ್ತವೆ
    ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಜನರು ಮಾತ್ರ ಡ್ಯೂಟಿ ಮಾಡಲು ಅವಕಾಶ
  • ಆಹಾರ-ಧಾನ್ಯ, ಅಗತ್ಯವಸ್ತುಗಳು, ಔಷಧ, ವೈದ್ಯಕೀಯ ಸೇವೆಗಳು ಲಭ್ಯ
  • ರಾಜ್ಯದ ಒಳಗೆ ಪ್ರಯಾಣ ಮಾಡಬಹುದು
  • ಮದುವೆಗೆ 50 ಜನರು, ಅಂತ್ಯ ಸಂಸ್ಕಾರಕ್ಕೆ 20 ಮಂದಿಗೆ ಅವಕಾಶ
  • ನಿರ್ಮಾಣ ಕಾಮಗಾರಿಗೆ ಅಡೆತಡೆಯಿಲ್ಲ
  • ನೈಟ್ ಬಸ್​, ರೈಲು ಪ್ರಯಾಣ ಮಾಡಬಹುದು.. ಹಾಗೇ ರಾತ್ರಿ ಪಾಳಿಯವರು ಐಡಿ ತೋರಿಸಬೇಕಾಗುತ್ತದೆ

ಇದರ ಹೊರತಾಗಿ ವೀಕೆಂಡ್ ಕರ್ಫ್ಯೂ ದಿನಗಳಲ್ಲಿ ಬೆಳಗ್ಗೆ 6ರಿಂದ 10ಗಂಟೆ ಒಳಗೆ ಹಾಲು, ತರಕಾರಿ, ಹಣ್ಣು ಸೇರಿ ಅಗತ್ಯ ವಸ್ತುಗಳನ್ನು ಜನ ಖರೀದಿಸಬೇಕಾಗುತ್ತದೆ. ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸದವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Karnataka Weekend Curfew: ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ವೀಕೆಂಡ್​ ಕರ್ಫ್ಯೂ ಘೋಷಿಸಿದ ಸರ್ಕಾರ, ಶಾಲಾ-ಕಾಲೇಜುಗಳು ಕ್ಲೋಸ್​

PM Modi Announcement: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಲಾಕ್​ಡೌನ್ ಎಂಬುದು ರಾಜ್ಯಗಳ ಕೊನೆ ಆಯ್ಕೆಯಾಗಲಿ: ಮೋದಿ

Karnataka imposes night curfew in the state here is what’s available and what’s not available details in Kannada