ರಾಜ್ಯದಲ್ಲಿಂದು 21,794 ಕೊರೊನಾ ಕೇಸ್ಗಳು ದಾಖಲು; 149 ಮಂದಿ ಸೋಂಕಿನಿಂದ ಸಾವು
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಸೋಂಕಿನ ನಾಗಾಲೋಟ ಮುಂದುವರಿದಿದೆ. ಇಂದು ಒಂದೇ ದಿನ 13,782 ಕೇಸ್ಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,70,035ಕ್ಕೆ ಏರಿಕೆಯಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಇಂದು 21,794 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 11,98,644ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಮಾರ್ಚ್ ಮೊದಲವಾರದಿಂದಲೂ ಒಂದು ದಿನದಲ್ಲಿ ದಾಖಲಾಗುವ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ನಿಯಂತ್ರಣಕ್ಕೆ ಬರುತ್ತಿಲ್ಲ.
ಕೊವಿಡ್ -19 ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯೂ ಮಿತಿಮೀರಿದ್ದು ಇಂದು ಒಂದೇ ದಿನ 149 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 13,646ಕ್ಕೆ ಏರಿಕೆಯಾಗಿದೆ. ಇದುವರೆಗೆ 10,25,821 ಮಂದಿ ಕೊರೊನಾದಿಂದ ಚೇತರಿಕೆ ಕಂಡಿದ್ದು, ಉಳಿದ 1,59,158 ಮಂದಿಗೆ ನಿಗದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಲ್ಲಿ ಕೊರೊನಾಸ್ಫೋಟ
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಸೋಂಕಿನ ನಾಗಾಲೋಟ ಮುಂದುವರಿದಿದೆ. ಇಂದು ಒಂದೇ ದಿನ 13,782 ಕೇಸ್ಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,70,035ಕ್ಕೆ ಏರಿಕೆಯಾಗಿದೆ. ಹಾಗೇ 92 ಮಂದಿ ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ ಕೊರೊನಾಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 5312ಕ್ಕೆ ಏರಿಕೆಯಾಗಿದೆ. ನಗರದಲ್ಲಿ 5,70,035 ಸೋಂಕಿತರ ಪೈಕಿ 4,49,889 ಜನರು ಗುಣಮುಖರಾಗಿದ್ದು, 1,14,833 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಾಳೆಯಿಂದ ಕಠಿಣ ನಿಯಮ ಜಾರಿ ರಾಜ್ಯದಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ನಿಯಮಗಳು ಜಾರಿಯಾಗಲಿವೆ. ಕೊರೊನಾ ನಿಯಂತ್ರಣ ಕ್ರಮ ಚರ್ಚಿಸಲು ಇಂದು ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಅದಾದ ಬಳಿಕ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ನಾಳೆಯಿಂದ ಏನಿರತ್ತೆ? ಏನಿರಲ್ಲ? ಎಂಬುದನ್ನು ಇಲ್ಲಿ ಚೆಕ್ ಮಾಡಿ.
ಇದನ್ನೂ ಓದಿ: ದಿನಕ್ಕೆ 700 ಟನ್ ಆಮ್ಲಜನಕ ಪೂರೈಸುವ ರಿಲಯನ್ಸ್ನಿಂದ 70 ಸಾವಿರಕ್ಕೂ ಹೆಚ್ಚು ಜೀವ ರಕ್ಷಣೆ
ಏರ್ ಶೋ ಸಮಯದಲ್ಲಿ ನೀರಿಗಿಳಿದ ವಿಮಾನ; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ