ದಿನಕ್ಕೆ 700 ಟನ್ ಆಮ್ಲಜನಕ ಪೂರೈಸುವ ರಿಲಯನ್ಸ್​ನಿಂದ 70 ಸಾವಿರಕ್ಕೂ ಹೆಚ್ಚು ಜೀವ ರಕ್ಷಣೆ

ಕೊರೊನಾ ಎರಡನೇ ಅಲೆಯಿಂದ ದೇಶದಾದ್ಯಂತ ವೈದ್ಯಕೀಯ ಆಮ್ಲಜನಕಕ್ಕೆ ಭಾರೀ ಕೊರತೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರಿಯಿಂದ 700 ಟನ್ ಆಮ್ಲಜನಕ ಒದಗಿಸಲಾಗುತ್ತಿದೆ.

ದಿನಕ್ಕೆ 700 ಟನ್ ಆಮ್ಲಜನಕ ಪೂರೈಸುವ ರಿಲಯನ್ಸ್​ನಿಂದ 70 ಸಾವಿರಕ್ಕೂ ಹೆಚ್ಚು ಜೀವ ರಕ್ಷಣೆ
ಮುಕೇಶ್ ಅಂಬಾನಿ
Follow us
Srinivas Mata
|

Updated on: Apr 20, 2021 | 10:09 PM

ನವದೆಹಲಿ: ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಜಾಮ್‌ನಗರ್​ನ ತೈಲ ಸಂಸ್ಕರಣಾಗಾರದಲ್ಲಿ ದಿನಕ್ಕೆ 700 ಟನ್‌ಗಿಂತ ಹೆಚ್ಚು ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸುತ್ತಿದೆ. ಕೋವಿಡ್ -19 ನಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳಿಗೆ ಈ ಆಮ್ಲಜನಕವನ್ನು ಉಚಿತವಾಗಿ ನೀಡಲಾಗುತ್ತಿದೆ ಕೊರೊನಾದ ಕಾರಣದಿಂದಾಗಿ ದೇಶದಲ್ಲಿ ಅಧಿಕ ಪ್ರಮಾಣದ ಆಮ್ಲಜನಕದ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚು ಆಮ್ಲಜನಕವನ್ನು ಉತ್ಪಾದಿಸಲು ರಿಲಯನ್ಸ್ ನಿರ್ಧರಿಸಿದೆ.

ಇದಕ್ಕಾಗಿ, ರಿಲಯನ್ಸ್ ತನ್ನ ಉತ್ಪಾದನಾ ವಿಧಾನಗಳನ್ನು ಸಹ ಬದಲಿಸಿಕೊಂಡಿದೆ. ಗುಜರಾತಿನಲ್ಲಿರುವ ಕಂಪೆನಿಯ ಜಾಮ್​ನಗರ್ ಸಂಸ್ಕರಣಾಗಾರವು ಆರಂಭದಲ್ಲಿ 100 ಟನ್ ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ಅದನ್ನು ತ್ವರಿತವಾಗಿ 700 ಟನ್‌ಗಳಿಗೆ ಹೆಚ್ಚಿಸಲಾಯಿತು.

ಕೊರೋನಾ ಸೋಂಕಿನಿಂದ ತತ್ತರಿಸಿರುವ ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಿಗೆ ಸರಬರಾಜು ಮಾಡುವುದರಿಂದ ಪ್ರತಿದಿನ 70,000 ಕ್ಕೂ ಹೆಚ್ಚು ಗಂಭೀರ ರೋಗಿಗಳು ಪರಿಹಾರ ಪಡೆಯುತ್ತಾರೆ. ಶೀಘ್ರದಲ್ಲೇ ಕಂಪೆನಿಯು ವೈದ್ಯಕೀಯ ದರ್ಜೆಯ ಆಮ್ಲಜನಕದ ಉತ್ಪಾದನಾ ಸಾಮರ್ಥ್ಯವನ್ನು 1,000 ಟನ್‌ಗಳಿಗೆ ಹೆಚ್ಚಿಸಲು ಯೋಜಿಸಿದೆ.

ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸುವಲ್ಲಿ ಯಶಸ್ವಿ ರಿಲಯನ್ಸ್‌ನ ಜಾಮ್‌ನಗರ್ ಸಂಸ್ಕರಣಾಗಾರದಲ್ಲಿ, ಕಚ್ಚಾ ತೈಲದಿಂದ ಡೀಸೆಲ್, ಪೆಟ್ರೋಲ್ ಮತ್ತು ಜೆಟ್ ಇಂಧನದಂತಹ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಅಲ್ಲಿ ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸಲಾಗುವುದಿಲ್ಲ. ಆದರೆ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದ್ದು, ಮತ್ತು ಆಮ್ಲಜನಕದ ಹೆಚ್ಚಿದ ಬೇಡಿಕೆಯ ದೃಷ್ಟಿಯಿಂದ, ರಿಲಯನ್ಸ್ ಯಂತ್ರೋಪಕರಣಗಳನ್ನು ಸ್ಥಾಪಿಸಿದ್ದು ಅದು ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗಿದೆ. ಕೈಗಾರಿಕಾ ಆಮ್ಲಜನಕವನ್ನು ಉತ್ಪಾದಿಸುವ ಸೌಲಭ್ಯಗಳನ್ನು ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸಲು ಬಳಸಲಾಗುತ್ತಿದೆ.

“ಭಾರತದ ರಾಜ್ಯಗಳಲ್ಲಿ ಪ್ರತಿದಿನ ಸುಮಾರು 700 ಟನ್ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಇದು ಪ್ರತಿದಿನ 70,000 ಕ್ಕೂ ಹೆಚ್ಚು ಗಂಭೀರ ರೋಗಿಗಳಿಗೆ ಪರಿಹಾರ ನೀಡುತ್ತದೆ.” ವಿಶೇಷ ಟ್ಯಾಂಕರ್‌ಗಳಲ್ಲಿ ಮೈನಸ್ 183 ° C ನಲ್ಲಿ ಆಮ್ಲಜನಕವನ್ನು ಸಾಗಿಸಲಾಗುತ್ತಿದೆ. ಮತ್ತು ಸಾರಿಗೆ ವೆಚ್ಚ ಸೇರಿದಂತೆ ರಾಜ್ಯ ಸರ್ಕಾರಗಳಿಗೆ ಯಾವುದೇ ವೆಚ್ಚವಿಲ್ಲದೆ ಆಮ್ಲಜನಕವನ್ನು ನೀಡಲಾಗುತ್ತಿದೆ. ಇದು ಕಂಪೆನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಒಂದು ಭಾಗವಾಗಿದೆ.

250 ಹಾಸಿಗೆಗಳ ದೊಡ್ಡ ಆಸ್ಪತ್ರೆ ಕೊರೊನಾ ಜತೆಗಿನ ಹೋರಾಟದಲ್ಲಿ ರಿಲಯನ್ಸ್‌ನ ಕೆಲಸದ ಪಟ್ಟಿ ಬಹಳ ಉದ್ದವಾಗಿದೆ. ರಿಲಯನ್ಸ್ ಫೌಂಡೇಷನ್, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸಹಯೋಗದೊಂದಿಗೆ ದೇಶದ ಮೊದಲ ಕೋವಿಡ್ ಆಸ್ಪತ್ರೆಯನ್ನು ಮುಂಬೈನಲ್ಲಿ ಸ್ಥಾಪಿಸಿತು. 100 ಹಾಸಿಗೆಗಳ ಆಸ್ಪತ್ರೆಯನ್ನು ಕೇವಲ ಎರಡು ವಾರಗಳಲ್ಲಿ ಸ್ಥಾಪಿಸಲಾಯಿತು, ಶೀಘ್ರದಲ್ಲೇ ಇದನ್ನು 250 ಹಾಸಿಗೆಗಳಿಗೆ ವಿಸ್ತರಿಸಲಾಯಿತು. ರಿಲಯನ್ಸ್ ಮಹಾರಾಷ್ಟ್ರದ ಲೋಧಿವಾಲಿಯಲ್ಲಿ ಸಂಪೂರ್ಣ ಸುಸಜ್ಜಿತ ಪ್ರತ್ಯೇಕ ಸೌಲಭ್ಯವನ್ನು ನಿರ್ಮಿಸಿ, ಅದನ್ನು ಜಿಲ್ಲಾ ಅಧಿಕಾರಿಗಳಿಗೆ ಹಸ್ತಾಂತರಿಸಿತು.

ಭಾರತದಲ್ಲಿ ಆರೋಗ್ಯ ಮತ್ತು ಮುಂಚೂಣಿ ಕಾರ್ಮಿಕರಿಗಾಗಿ ರಿಲಯನ್ಸ್ ದಿನಕ್ಕೆ 1,00,000 ಪಿಪಿಇ ಮತ್ತು ಫೇಸ್ ಮಾಸ್ಕ್​ಗಳನ್ನು ಉತ್ಪಾದಿಸುತ್ತದೆ. ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ತುರ್ತು ಸೇವೆಗಳನ್ನು ತಡೆರಹಿತವಾಗಿ ನೀಡಲು ರಿಲಯನ್ಸ್ 18 ರಾಜ್ಯಗಳ 249 ಜಿಲ್ಲೆಗಳಲ್ಲಿ 14,000 ಕ್ಕೂ ಹೆಚ್ಚು ಆಂಬುಲೆನ್ಸ್‌ಗಳಲ್ಲಿ 5.5 ಲಕ್ಷ ಲೀಟರ್ ಉಚಿತ ಇಂಧನವನ್ನು ಒದಗಿಸಿತ್ತು.

ಲಾಕ್ ಡೌನ್ ಸಮಯದಲ್ಲಿ ರಿಲಯನ್ಸ್ ಫೌಂಡೇಷನ್ ಮಿಷನ್ ಅನ್ನ ಸೇವೆಯನ್ನು ಪ್ರಾರಂಭಿಸಿತು. ಇದು ವಿಶ್ವದ ಎಲ್ಲೆಡೆಯೂ ಲೆಕ್ಕಕ್ಕೆ ತೆಗೆದುಕೊಂಡು ಹೇಳುವುದಾದರೂ ಕಾರ್ಪೊರೇಟ್​ವೊಂದು ಪ್ರಾರಂಭಿಸಿದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವಾಗಿತ್ತು. ಮಿಷನ್ ಅನ್ನ ಸೇವಾ ಅಡಿಯಲ್ಲಿ 18 ರಾಜ್ಯಗಳ 80 ಜಿಲ್ಲೆಗಳಲ್ಲಿ 5.5 ಕೋಟಿಗೂ ಹೆಚ್ಚು ಮಂದಿಗೆ ಊಟ ನೀಡಲಾಯಿತು.

ಇದನ್ನೂ ಓದಿ: ರಿಲಯನ್ಸ್ ಫೌಂಡೇಷನ್​ನಿಂದ ಮಹಿಳೆಯರಿಗಾಗಿ ಡಿಜಿಟಲ್ ವೇದಿಕೆ; ಹರ್ ಸರ್ಕಲ್​ನಲ್ಲಿ ಏನೇನಿದೆ?

ಇದನ್ನೂ ಓದಿ: Happy birthday Mukesh Ambani: ಮುಕೇಶ್ ಅಂಬಾನಿ ಜನ್ಮದಿನದಂದು 5 ಆಸಕ್ತಿಕರ ಮಾಹಿತಿಗಳು

(Reliance Industries supply 700 ton medical oxygen everyday to help covid patients)

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್