Happy birthday Mukesh Ambani: ಮುಕೇಶ್ ಅಂಬಾನಿ ಜನ್ಮದಿನದಂದು 5 ಆಸಕ್ತಿಕರ ಮಾಹಿತಿಗಳು

ಇಂದು (ಏಪ್ರಿಲ್ 19) ಭಾರತದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ಜನ್ಮದಿನ. 64 ವರ್ಷ ಪೂರ್ತಿಗೊಳಿಸಿದ ಶತಕೋಟ್ಯಧಿಪತಿ ಮುಕೇಶ್ ಅಂಬಾನಿ ಬಗ್ಗೆ 5 ಆಸಕ್ತಿಕರ ಸಂಗತಿಗಳು ಇಲ್ಲಿವೆ.

Happy birthday Mukesh Ambani: ಮುಕೇಶ್ ಅಂಬಾನಿ ಜನ್ಮದಿನದಂದು 5 ಆಸಕ್ತಿಕರ ಮಾಹಿತಿಗಳು
ಮುಕೇಶ್​ ಅಂಬಾನಿ (ಸಂಗ್ರಹ ಚಿತ್ರ)
Follow us
Srinivas Mata
|

Updated on: Apr 19, 2021 | 4:33 PM

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಜನ್ಮದಿನ ಇಂದು (ಏಪ್ರಿಲ್ 19). ಈ ದಿನ 64ನೇ ಜನ್ಮದಿನವನ್ನು ಮುಕೇಶ್ ಸಂಭ್ರಮಿಸುತ್ತಿದ್ದಾರೆ. ಬ್ಲೂಮ್​ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಭಾರತದ ಅತ್ಯಂತ ಶ್ರೀಮಂತರಾದ ಅವರ ಆಸ್ತಿ ಮೌಲ್ಯ 7400 ಕೋಟಿ ಅಮೆರಿಕನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ 5.50 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಮೂರ್ನಾಲ್ಕು ಪುಟ್ಟ ರಾಜ್ಯಗಳ ಒಂದು ವರ್ಷದ ಒಟ್ಟು ಬಜೆಟ್ ಸೇರಿದರೆ ಮುಕೇಶ್ ಅಂಬಾನಿಯ ಆಸ್ತಿ ಮೌಲ್ಯವಾಗುತ್ತದೆ. ಅಂದಹಾಗೆ ಕೋವಿಡ್​ನಿಂದ ಸಂಕಷ್ಟಕ್ಕೆ ಈಡಾಗಿರುವ ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಗೆ ರಿಲಯನ್ಸ್ ಇಂಡಸ್ಟ್ರಿಯಿಂದ ಜೀವರಕ್ಷಕ ಆಮ್ಲಜನಕ ಒದಗಿಸಲಾಗುತ್ತಿದೆ.

ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರಮೋದಿ ಅವರ PM- CARES ಫಂಡ್​ಗೆ ಮುಕೇಶ್ ಅಂಬಾನಿ ಹೆಚ್ಚುವರಿಯಾಗಿ 500 ಕೋಟಿ ದೇಣಿಗೆ ಘೋಷಣೆ ಮಾಡಿದ್ದರು. ಏಪ್ರಿಲ್ 19, 1957ರಂದು ಯೆಮೆನ್​ನ ಆಡೆನ್​ನಲ್ಲಿ ಜನಿಸಿದವರು ಮುಕೇಶ್ ಅಂಬಾನಿ. ಅವರ ತಂದೆ ಧೀರೂಭಾಯಿ ಅಂಬಾನಿ 1966ರಲ್ಲಿ (ಆಗ ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಷನ್) ಸಣ್ಣ ಟೆಕ್ಸ್​ಟೈಲ್ ಕಂಪೆನಿ ಆರಂಭಿಸಿದರು. ಮುಕೇಶ್ ಅಂಬಾನಿ ಬಾಂಬೆ ವಿಶ್ವವಿದ್ಯಾನಿಲಯದಿಂದ ಕೆಮಿಕಲ್ ಎಂಜಿನಿಯರಿಂಗ್ ಪೂರೈಸಿ, 1981ರಲ್ಲಿ ತಮ್ಮ ಕುಟುಂಬದ ಉದ್ಯಮಕ್ಕೆ ಸೇರ್ಪಡೆಯಾದರು.

ಮುಕೇಶ್ ಅಂಬಾನಿ ಬಗ್ಗೆ 5 ಆಸಕ್ತಿಕರ ಮಾಹಿತಿಗಳು ಇಲ್ಲಿವೆ: 1) ಹ್ಯುರನ್ ಗ್ಲೋಬಲ್ ಶ್ರೀಮಂತರ ಪಟ್ಟಿ 2021ರ ಪ್ರಕಾರ, ಮುಕೇಶ್ ಅಂಬಾನಿ ಅತ್ಯಂತ ಶ್ರೀಮಂತ ಭಾರತೀಯ ಹಾಗೂ ವಿಶ್ವದ ಎಂಟನೇ ಶ್ರೀಮಂತ. ಹ್ಯುರನ್ ಜಾಗತಿಕ ಶ್ರೀಮಂತರ ಪಟ್ಟಿ 2021ರ 10ನೇ ಅವತರಣಿಯಲ್ಲಿ ಅಂಬಾನಿ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದರು.

2) ವಿಶ್ವದ ಅತ್ಯಂತ ದುಬಾರಿ ವಸತಿ ಆಸ್ತಿಯನ್ನು ಮುಕೇಶ್ ಅಂಬಾನಿ ಹೊಂದಿದ್ದಾರೆ. ದಕ್ಷಿಣ ಮುಂಬೈನಲ್ಲಿ ಇರುವ ಈ ಆಂಟಿಲಿಯಾ (Antilia) 27 ಅಂತಸ್ತು ಇದ್ದು, 3 ಹೆಲಿಪ್ಯಾಡ್, 6 ಅಂತಸ್ತು ಕಾರಿನ ಪಾರ್ಕಿಂಗ್​ಗಾಗಿ ಮೀಸಲಾಗಿದೆ. 600ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸುತ್ತಾರೆ.

3) 4 ವರ್ಷದ ಹಿಂದೆ ಮುಕೇಶ್ ಅಂಬಾನಿ ಆರಂಭಿಸಿದ ರಿಲಯನ್ಸ್ ಜಿಯೋ ವಿಶ್ವದ ಐದನೇ ಬಲಿಷ್ಠ ಬ್ರ್ಯಾಂಡ್ ಎಂಬ ಸ್ಥಾನ ಪಡೆದುಕೊಂಡಿದೆ. ಆ ಮೂಲಕ ಫೆರಾರಿ, ಕೊಕಾ-ಕೋಲಾದಂಥ ಬ್ರ್ಯಾಂಡ್​ಗಳ ಸಾಲಿನಲ್ಲಿದೆ. ಬ್ರ್ಯಾಂಡ್ ಫೈನಾನ್ಸ್ ಗ್ಲೋಬಲ್ 500 Ranking ಪ್ರಕಾರ, ಭಾರತದಲ್ಲಿ ಬಹಳ ವೇಗವಾಗಿ ಜಿಯೋ ಅತಿದೊಡ್ಡ ಮೊಬೈಲ್ ನೆಟ್​ವರ್ಕ್ ಆಪರೇಟರ್ ಆಗಿ ಬೆಳೆದಿದೆ. 40 ಕೋಟಿ ಚಂದಾದಾರನ್ನು ಹೊಂದುವ ಮೂಲಕ ವಿಶ್ವದ ಮೂರನೇ ಅತಿದೊಡ್ಡ ನೆಟ್​ವರ್ಕ್ ಆಪರೇಟರ್ ಆಗಿದೆ.

4) ವೇತನ ಮಟ್ಟದ ನಿಗದಿಯಲ್ಲಿ ಇತರರಿಗೆ ಮಾದರಿಯಾಗಿ ಮುಕೇಶ್ ನಿಂತಿದ್ದಾರೆ. ಮಾರ್ಚ್ 31, 2020ರ ಕೊನೆಗೆ ಸತತ ಹನ್ನೆರಡನೇ ವರ್ಷ ತಮ್ಮ ವೇತನವನ್ನು 15 ಕೋಟಿ ರೂಪಾಯಿ ವಾರ್ಷಿಕ ವೇತನಕ್ಕೆ ಮಿತಿ ಹಾಕಿಕೊಂಡಿದ್ದರು. ಮತ್ತು ಕೋವಿಡ್- 19 ಆರ್ಥಿಕ ಸಸವಾಲಿನ ಹಿನ್ನೆಲೆಯಲ್ಲಿ ತಮ್ಮ ಸಂಪೂರ್ಣ ವೇತನವನ್ನು ಬಿಟ್ಟುಕೊಡುವುದಾಗಿ ಘೋಷಿಸಿದರು.

5) ಮುಕೇಶ್ ಅಂಬಾನಿ ಅವರ ಬಳಿ ವಿಶ್ವದಲ್ಲೇ ಅಪರೂಪದ ಮತ್ತು ಅತ್ಯುತ್ತಮ ಕಾರುಗಳಿವೆ. ಮರ್ಸಿಡೀಸ್ ಮೆಬೆಕ್ 660 ಗಾರ್ಡ್, ಮರ್ಸಿಡಿಸ್ ಮೆಬೆಕ್ 62, ಬಿಎಂಡಬ್ಲ್ಯು 760 ಎಲ್​ಐ, ಬೆಂಟ್ಲೆ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್, ಬೆಂಟ್ಲಿ ಬೆಂಟೆಯ್ಗಾ, ರೋಲ್ಸ್ ರಾಯ್ಸ್ ಫ್ಯಾಂಟಮ್, ಆ್ಯಸ್ಟನ್ ಮಾರ್ಟಿನ್ Rapid, ಮತ್ತು ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರೋಫೆಡ್ ಕೂಪ್ ಕಾರುಗಳ ಸಂಗ್ರಹ ಇವೆ.

ಇದನ್ನೂ ಓದಿ: ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?

ಇದನ್ನೂ ಓದಿ: ಭಾರತದ 10 ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ ಪೋರ್ಬ್ಸ್​; ನಂ.1 ಸ್ಥಾನದಲ್ಲಿ ಮುಕೇಶ್ ಅಂಬಾನಿ.. ಇನ್ನುಳಿದಂತೆ ಯಾರೆಲ್ಲ ಇದ್ದಾರೆ ನೋಡಿ..

(Today (April 19) India’s richest person Mukesh Ambani birthday. Here are the 5 interesting facts about him)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್