ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?

ಕೊರೊನಾ ಮಹಾಮಾರಿ ಕಾಡುತ್ತಿರುವಾಗ ಮುಕೇಶ್​ ಅಂಬಾನಿ ಕುಂಟುಂಬಸ್ತರು ಸೈಲೆಂಟಾಗಿ, ಯಾವುದೇ ಪ್ರಚಾರವಿಲ್ಲದೆ ಕೊರೊನಾದಿಂದ ದೂರವಾಗಿ ಉಳಿಯಲು ಗುಜರಾತ್​ನ ಜಾಮ್​ನಗರದಲ್ಲಿರುವ ತಮ್ಮದೇ ರಿಲಯನ್ಸ್​ ನಗರ ಸುರಕ್ಷಿತ ಪ್ರದೇಶ ಎಂದು ಅಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ ಹಾವಳಿ ಕಡಿಮೆಯಾದ ಮೇಲೆ 2-3 ತಿಂಗಳ ಬಳಿಕ ಆಂಟಿಲಾಗೆ ವಾಪಸು ರುವ ಆಲೋಚನೆ ಮಾಡಿದ್ದಾರೆ ಮುಕೇಶ್​ ಅಂಬಾನಿ ಎಂದು ತಿಳಿದುಬಂದಿದೆ.

ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದುಕೊಂಡಿರುವುದು ಎಲ್ಲಿ?
ಕೊರೊನಾ ಮಾರಿಗೆ ಹೆದರಿ ಮುಂಬೈ ತೊರೆದ ಮುಕೇಶ್​ ಅಂಬಾನಿ ಕುಟುಂಬ ಉಳಿದಿಕೊಂಡಿರುವುದು ಎಲ್ಲಿ?
Follow us
ಸಾಧು ಶ್ರೀನಾಥ್​
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 15, 2021 | 7:15 PM

ದಶಕದ ಹಿಂದೆ ಆಂಟಿಲಾ ಎಂಬ ಬೆಟ್ಟದೆತ್ತರದ ಬಂಗಲೆ ಪ್ರವೇಶಿಸಿದ್ದ ಏಷ್ಯಾದ ಆಗರ್ಭ ಶ್ರೀಮಂತ ಮುಕೇಶ್ ಅಭಮಾನಿ ಕುಟುಂಬಸ್ಥರು ಈಗ ಎಲ್ಲಿದ್ದಾರೆ? ಎಂಬುದು ಕುತೂಹಲಕಾರಿಯಾಗಿದೆ. ಜಸ್ಟ್​ ವಾಜೆ ಎಂಬ ಪೊಲೀಸ್​ ಅಧಿಕಾರಿ ತನ್ನ ಆಂಟಿಲಾ ಎದುರಿನಲ್ಲಿಯೇ ಆರ್​ಡಿಎಕ್ಸ್​ಗಳನ್ನು ಇಟ್ಟುಬಿಟ್ಟ ಎಂಬ ಕಹಿ ಸುದ್ದಿ ಕಿವಿಗೆ ಬಿದ್ದಿದ್ದೇ ಮುಕೇಶ್​ ಅಂಬಾನಿ ಕುಟುಂಬಸ್ತರು ಕನಲಿಹೋಗಿದ್ದರು. ಅಂಥಾದ್ದರಲ್ಲಿ ಮಹಾರಾಷ್ಟ್ರದಲ್ಲಿ ಈಗ ಅತಿ ದೊಡ್ಡ ಭಯೋತ್ಪಾದಕ ಎಂದ್ರೆ ಕೊರೊನಾ ಮಹಾಮಾರಿ ಎಂಬಂತಾಗಿದೆ. ಇಂತಹ ಕೊರೊನಾ ಮಾರಿಗೆ ಹೆದರಿ ಮುಕೇಶ್​ ಅಂಬಾನಿಯ ಇಡೀ ಕುಟುಂಬ ಇದೀಗ ಮುಂಬೈ ಮಹಾನಗರವನ್ನು ತೊರೆದಿದೆ ಎಂದು ತಿಳಿದುಬಂದಿದೆ.

ಹೌದು ಮಹಾರಾಷ್ಟ್ರದಲ್ಲಿ ಕೊರೊನಾ ಕಾಟ ಮಿತಿಮೀರಿದೆ. ಅದು ಎತ್ತರದ ಆಂಟಿಲಾದಲ್ಲಿದ್ದರೂ ಬಿಡುವಂತಹುದ್ದಲ್ಲ; ಹಾಗಿದೆ ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ. ಪರಿಸ್ಥಿತಿ ಹೀಗಿರುವಾಗ ಮುಕೇಶ್​ ಅಂಬಾನಿ ಯಾವ ಧೈರ್ಯದ ಮೇಲೆ ಆಂಟಿಲಾದಲ್ಲಿ ಉಳಿದುಕೊಂಡಾರು? ಹಾಗೆಂದೇ ಅವರ ಇಡೀ ಪರಿವಾರ ಮುಂಬೈ ತೊರೆದು ಹೋಗಿದೆ.

ಕೊಲಾಬದಲ್ಲಿ ಕೂಡುಕುಟುಂಬಸ್ಥರಾಗಿ ತಂಗಿದ್ದ ಅಂಬಾನಿಗಳು..

Sea Wind is a residential project in Cuffe Parade

ಕೊಲಾಬದಲ್ಲಿ ಕೂಡುಕುಟುಂಬಸ್ಥರಾಗಿ ತಂಗಿದ್ದ ಅಂಬಾನಿಗಳು..

2011ರಲ್ಲಿ 24 ಅಂತಸ್ತಿನ ಇದೇ ಆಂಟಿಲಾ ಗೃಹಪ್ರವೇಶ ಮಾಡುವುದಕ್ಕೂ ಮುನ್ನ ಮುಕೇಶ್​ ಅಂಬಾನಿ ಕುಟುಂಬಸ್ತರು ಮುಂಬೈನ ಆಗಿನ ಪ್ರತಿಷ್ಠಿತ ಪ್ರದೇಶವಾದ ಕೊಲಾಬದಲ್ಲಿ ಕೂಡುಕುಟುಂಬವಾಗಿ ತಂಗಿದ್ದರು. ಅರಬ್ಬೀ ಸಮುದ್ರದ ಸಮ್ಮುಖದಲ್ಲಿ ಅಲ್ಲಿ ಕಫ್​ ಪರೇಡ್​ನಲ್ಲಿ ಸೀ ವಿಂಡ್​ ಎಂಬ ವಸತಿ ಸಮುಚ್ಚಯದಲ್ಲಿ 14 ಅಂತಸ್ತಿನ ಭವ್ಯ ಬಂಗ್ಲೆಯಲ್ಲಿ ನೆಲೆಸಿದ್ದರು. ಧೀರೂಭಾಯಿ ಅಂಬಾನಿ ಕಾಲಾಂತರವಾದ ಮೇಲೆ ಒಡಹುಟ್ಟಿದ ಅನಿಲ್ ಅಂಬಾನಿ ಹಿರಿಯ ಸೋದರ ಮುಕೇಶ್​ ಜೊತೆ ಕ್ಯಾತೆ ತೆಗೆದಾಗ ತಾಯಿ ಕೋಕಿಲಾಬೆನ್​ ಅನಿವಾರ್ಯವಾಗಿ ಸೀ ವಿಂಡ್​ ಮನೆಯನ್ನು ತೊರೆದಿದ್ದರು.

Mukesh Ambani 27 story home Antilia which has three helipads

ಬೆಟ್ಟದೆತ್ತರದ ಆಂಟಿಲಾ ಬಂಗಲೆ ಬಿಟ್ಟು ಜಾಂ​ನಗರಕ್ಕೆ ತೆರಳಿದ ಮುಕೇಶ್​ ಅಂಬಾನಿ ಕುಟುಂಬ

ಈಗ ಕೊರೊನಾ ಮಹಾಮಾರಿ ಕಾಡುತ್ತಿರುವಾಗ ಮುಕೇಶ್​ ಅಂಬಾನಿ ಕುಂಟುಂಬಸ್ತರು ಸೈಲೆಂಟಾಗಿ, ಯಾವುದೇ ಪ್ರಚಾರವಿಲ್ಲದೆ ಕೊರೊನಾದಿಂದ ದೂರವಾಗಿ ಉಳಿಯಲು ಗುಜರಾತ್​ನ ಜಾಮ್​ನಗರದಲ್ಲಿರುವ ತಮ್ಮದೇ ರಿಲಯನ್ಸ್​ ನಗರ ಸುರಕ್ಷಿತ ಪ್ರದೇಶ ಎಂದು ಅಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ ಹಾವಳಿ ಕಡಿಮೆಯಾದ ಮೇಲೆ 2-3 ತಿಂಗಳ ಬಳಿಕ ಆಂಟಿಲಾಗೆ ವಾಪಸು ಬರುವ ಆಲೋಚನೆ ಮಾಡಿದ್ದಾರೆ ಮುಕೇಶ್​ ಅಂಬಾನಿ ಎಂದು ತಿಳಿದುಬಂದಿದೆ.

Published On - 5:06 pm, Thu, 15 April 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್