AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ 10 ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ ಪೋರ್ಬ್ಸ್​; ನಂ.1 ಸ್ಥಾನದಲ್ಲಿ ಮುಕೇಶ್ ಅಂಬಾನಿ.. ಇನ್ನುಳಿದಂತೆ ಯಾರೆಲ್ಲ ಇದ್ದಾರೆ ನೋಡಿ..

ಫೋರ್ಬ್ಸ್​ ನಿಯತಕಾಲಿಕ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಕೇಶ್​ ಅಂಬಾನಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಹಾಗೇ ಅದಾನಿ ಗ್ರೂಪ್​​ನ ಚೇರ್​​ಮನ್​ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ. ಪೋರ್ಬ್ಸ್​ ಪತ್ರಿಕೆ 2021ರ 10 ಜನ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 84.5 ಬಿಲಿಯನ್ ಡಾಲರ್​ ಮೌಲ್ಯದ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿ ಈ ವರ್ಷವೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅದಾನಿಯವರ ಆಸ್ತಿ ಮೌಲ್ಯ 50.5 ಬಿಲಿಯನ್ ಡಾಲರ್​. ಹಾಗೇ, ಮೂರನೇ ಸ್ಥಾನದಲ್ಲಿ […]

ಭಾರತದ 10 ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ ಪೋರ್ಬ್ಸ್​; ನಂ.1 ಸ್ಥಾನದಲ್ಲಿ ಮುಕೇಶ್ ಅಂಬಾನಿ.. ಇನ್ನುಳಿದಂತೆ ಯಾರೆಲ್ಲ ಇದ್ದಾರೆ ನೋಡಿ..
ಮುಕೇಶ್​ ಅಂಬಾನಿ (ಸಂಗ್ರಹ ಚಿತ್ರ)
Lakshmi Hegde
|

Updated on:Apr 07, 2021 | 6:00 PM

Share

ಫೋರ್ಬ್ಸ್​ ನಿಯತಕಾಲಿಕ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಕೇಶ್​ ಅಂಬಾನಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಹಾಗೇ ಅದಾನಿ ಗ್ರೂಪ್​​ನ ಚೇರ್​​ಮನ್​ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ. ಪೋರ್ಬ್ಸ್​ ಪತ್ರಿಕೆ 2021ರ 10 ಜನ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 84.5 ಬಿಲಿಯನ್ ಡಾಲರ್​ ಮೌಲ್ಯದ ಆಸ್ತಿ ಹೊಂದಿರುವ ಮುಕೇಶ್ ಅಂಬಾನಿ ಈ ವರ್ಷವೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅದಾನಿಯವರ ಆಸ್ತಿ ಮೌಲ್ಯ 50.5 ಬಿಲಿಯನ್ ಡಾಲರ್​. ಹಾಗೇ, ಮೂರನೇ ಸ್ಥಾನದಲ್ಲಿ ಎಚ್​ಸಿಎಲ್​ ಸಂಸ್ಥಾಪಕ ಶಿವ ನಾದರ್ ಇದ್ದಾರೆ.

ದೇಶದಲ್ಲಿ ಕೊರೊನಾ ಬಿಕ್ಕಟ್ಟಿದ್ದರೂ ಸ್ಟಾಕ್​ ಮಾರ್ಕೆಟ್​ನಲ್ಲಿ ಈ ಶ್ರೀಮಂತರ ಆಸ್ತಿ ಮೌಲ್ಯ ಊಹೆಗೂ ನಿಲುಕದಷ್ಟು ಏರಿಕೆಯಾಗಿದೆ. ಕಳೆದ ವರ್ಷ 102 ಇದ್ದ ಬಿಲಿಯನೇರ್​ಗಳ ಸಂಖ್ಯೆ ಈ ಬಾರಿ 140ಕ್ಕೆ ಏರಿದೆ ಎಂದು ಪೋರ್ಬ್ಸ್​ ತಿಳಿಸಿದೆ. ಇನ್ನು ಮುಕೇಶ್ ಅಂಬಾನಿ ಇಡೀ ಏಷ್ಯಾದಲ್ಲೇ ನಂ.1 ಶ್ರೀಮಂತ. ತೈಲೋದ್ಯಮದಿಂದ-ಟೆಲಿಕಾಂ ಕ್ಷೇತ್ರದವರೆಗೆ ಅವರ ಗಳಿಕೆ ಇದೆ. ಈ ಕಾರಣಕ್ಕೆ ಅವರು ಅನೇಕ ವರ್ಷಗಳಿಂದಲೂ ಶ್ರೀಮಂತರ ಪಟ್ಟಿಯಲ್ಲಿ ನಂಬರ್​ 1ರ ಸ್ಥಾನದಲ್ಲೇ ಇದ್ದಾರೆ. ಡಿ-ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣನ್​ ದಮಾನಿ ಈ ಹಿಂದೆ ಎರಡನೇ ಸ್ಥಾನದಲ್ಲಿದ್ದು, ಇದೀಗ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಎರಡನೇ ಸ್ಥಾನಕ್ಕೆ ಅದಾನಿ ಏರಿದ್ದಾರೆ. ಅದಾನಿಯವರ ಆಸ್ತಿ ಮೌಲ್ಯ ಒಂದೇ ವರ್ಷದಲ್ಲಿ 5ಪಟ್ಟು ಹೆಚ್ಚಾಗಿದೆ ಎಂದು ಪೋರ್ಬ್ಸ್​ ತಿಳಿಸಿದೆ.

ಇಲ್ಲಿದೆ ನೋಡಿ ಪೋರ್ಬ್ಸ್ ಪಟ್ಟಿ ಮಾಡಿದ ಭಾರತದ 10 ಜನ ಶ್ರೀಮಂತರ ಹೆಸರು ಮತ್ತು ಅವರ ಆಸ್ತಿ ಮೌಲ್ಯ: ಮುಕೇಶ್ ಅಂಬಾನಿ (ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ): 84.5 ಬಿಲಿಯನ್ ಡಾಲರ್ ಗೌತಮ್ ಅದಾನಿ (ಅದಾನಿ ಗ್ರೂಪ್ ಚೇರ್​ಮೆನ್​)-50.5 ಬಿಲಿಯನ್ ಡಾಲರ್ ಶಿವ್ ನಾದರ್ (ಎಚ್​ಸಿಎಲ್​ ಟೆಕ್ನಾಲಜೀಸ್​​ನ ಸಂಸ್ಥಾಪಕ, ಚೇರ್​ಮೆನ್​)-23.5 ಬಿಲಿಯನ್ ಡಾಲರ್ ರಾಧಾಕೃಷ್ಣನ್​ ದಮಾನಿ (ಡಿ-ಮಾರ್ಟ್ ಸಂಸ್ಥಾಪಕ)-16.5 ಬಿಲಿಯನ್ ಡಾಲರ್ ಉದಯ್​ ಕೋಟಾಕ್​ ( ಕೋಟಾಕ್ ಮಹೀಂದ್ರಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ)- 15.9 ಬಿಲಿಯನ್ ಡಾಲರ್ ಲಕ್ಷ್ಮೀ ಮಿತ್ತಲ್​(ವಿಶ್ವದ ಅತಿದೊಡ್ಡ ಉಕ್ಕುತಯಾರಿಕಾ ಕಂಪನಿ ಆರ್ಸೆಲರ್​ ಮಿತ್ತಲ್​ನ ಅಧ್ಯಕ್ಷ, ಸಿಇಒ)- 14.9 ಬಿಲಿಯನ್ ಡಾಲರ್ ಕುಮಾರ್ ಬಿರ್ಲಾ( ಆದಿತ್ಯ ಬಿರ್ಲಾ ಚೇರ್​ಮೆನ್​)-12.8 ಬಿಲಿಯನ್ ಡಾಲರ್ ಸೈರಸ್ ಪೂನವಾಲಾ (ಪೂನಾವಾಲಾ ಗ್ರೂಪ್​ನ ಅಧ್ಯಕ್ಷ)-12.7 ಬಿಲಿಯನ್ ಡಾಲರ್ ದಿಲೀಪ್​ ಸಾಂಘ್ವಿ (ಸನ್ ಫಾರ್ಮಾಸ್ಯುಟಿಕಲ್ಸ್ ಸ್ಥಾಪಕ)-10.9 ಬಿಲಿಯನ್ ಡಾಲರ್ ಸುನೀಲ್ ಮಿತ್ತಲ್​ ಮತ್ತು ಕುಟುಂಬ (ಭಾರತಿ ಎಂಟರ್​ಪ್ರೈಸಸ್​ ಸ್ಥಾಪಕ-ಚೇರ್​ಮೆನ್​)-10.5 ಬಿಲಿಯನ್ ಡಾಲರ್

ಇದನ್ನೂ ಓದಿ: KSRTC BMTC Strike: ಮಾರ್ಚ್​ ತಿಂಗಳ ಸಂಬಳ ರಿಲೀಸ್ ಆಗುತ್ತೆ.. ಆದ್ರೆ, ಸ್ವಲ್ಪ ತಡವಾಗುತ್ತೆ: ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ

ಮುಂಬೈ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣ: ಘಟನೆಯ ಸೂತ್ರಧಾರ ಸಚಿನ್ ವಾಜೆ ಎಂದು ಶಂಕೆ, ಸಿಸಿಟಿವಿ ಚಿತ್ರಣಗಳು ಏನು ಹೇಳುತ್ತಿವೆ?

(Mukesh Ambani Indias richest Person according to Forbes list)

Published On - 1:37 pm, Wed, 7 April 21

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ