RBI Monetary Policy Highlights: ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ ಹಣಕಾಸು ನೀತಿಯ ಪ್ರಮುಖಾಂಶಗಳು

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬುಧವಾರ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡಿದೆ. ಗವರ್ನರ್ ಶಕ್ತಿಕಾಂತ ದಾಸ್ ಘೋಷಣೆಯ ಪ್ರಮುಖಾಂಶಗಳು ಇಲ್ಲಿವೆ.

RBI Monetary Policy Highlights: ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ ಹಣಕಾಸು ನೀತಿಯ ಪ್ರಮುಖಾಂಶಗಳು
ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ (ಸಾಂದರ್ಭಿಕ ಚಿತ್ರ)
Follow us
Srinivas Mata
|

Updated on:Apr 07, 2021 | 12:22 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಹಣಕಾಸು ನೀತಿ ದರ ಬುಧವಾರ ಘೋಷಣೆ ಮಾಡಲಾಗಿದ್ದು, ರೆಪೋ ದರವನ್ನು ಯಥಾಸ್ಥಿತಿ ಕಾಯ್ದುಕೊಂಡು, ಶೇ 4ರಲ್ಲೇ ಮುಂದುವರಿಸಲು ಸರ್ವಸಮ್ಮತವಾಗಿ ಒಪ್ಪಿಗೆ ಸೂಚಿಸಲಾಗಿದೆ. ರಿವರ್ಸ್ ರೆಪೋ ದರ ಕೂಡ ಶೇಕಡಾ 3.5ರಲ್ಲೇ ಮುಂದುವರಿಸುವುದಕ್ಕೆ ತೀರ್ಮಾನಿಸಲಾಗಿದೆ. ಬ್ಯಾಂಕ್ ದರವನ್ನು ಶೇ 4.25ರಲ್ಲೇ ಉಳಿಸಿಕೊಳ್ಳಲಾಗಿದೆ. ಕೋವಿಡ್- 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಥಾ ಸ್ಥಿತಿ ಮುಂದುವರಿಸಬಹುದು ಎಂದು ಹಲವು ತಜ್ಞರು ಅಭಿಪ್ರಾಯ ಪಟ್ಟಿದ್ದರು. ಪ್ರತಿ ಎರಡು ತಿಂಗಳಿಗೆ ಒಮ್ಮೆ ಹಣಕಾಸು ನೀತಿಯನ್ನು ಪ್ರಕಟಿಸುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸತತ ಐದನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

ಹಣಕಾಸು ನೀತಿ ಘೋಷಣೆ ವೇಳೆಯಲ್ಲಿ ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ಪ್ರಸ್ತಾವ ಮಾಡಿದ ಪ್ರಮುಖಾಂಶಗಳು ಹೀಗಿವೆ: – ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಪರೋಕ್ಷವಾಗಿ ನಗದು ಲಭ್ಯತೆ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರವು 22 ಲಕ್ಷ ಕೋಟಿ ರೂಪಾಯಿ ಪಡೆದುಕೊಂಡಿರುವುದನ್ನು ನಗದು ನಿರ್ವಹಣೆ ಖಾತ್ರಿ ಪಡಿಸಿದೆ. – ದಾಸ್ – ಸೆಕೆಂಡರಿ ಮಾರುಕಟ್ಟೆಯಿಂದ ಸರ್ಕಾರಿ ಸೆಕ್ಯೂರಿಟೀಸ್​ಗಳನ್ನು ರೂ. 1 ಲಕ್ಷ ಕೋಟಿಗೆ ಖರೀದಿ. – ನಬಾರ್ಡ್, ಎನ್​​ಎಚ್​ಬಿ ಹಾಗೂ ಎಸ್​ಐಡಿಬಿಐಗೆ 50,000 ಕೋಟಿ ರೂಪಾಯಿ ನಗದು ಬೆಂಬಲ. – TLTRO ಯೋಜನೆ ಯೋಜನೆ ಇನ್ನೂ 6 ತಿಂಗಳು, ಸೆಪ್ಟೆಂಬರ್ 30, 2021ರ ತನಕ ವಿಸ್ತರಣೆ. – ಅಸೆಟ್ ರೀಕನ್​ಸ್ಟ್ರಕ್ಷನ್ ಕಂಪೆನಿಗಳ ಕಾರ್ಯ ನಿರ್ವಹಣೆ ಪರಿಶೀಲನೆಗೆ ಸಮಿತಿ ರಚನೆ. – ಆದ್ಯತಾ ವಲಯದ ಅಡಿಯಲ್ಲಿ ಕೃಷಿ ವಲಯಕ್ಕೆ ನೀಡುವ ಸಾಲ ಮಿತಿ 50 ಲಕ್ಷ ರೂಪಾಯಿಯಿಂದ 60 ಲಕ್ಷ ರೂ.ಗೆ ಏರಿಕೆ. – ಕೇಂದ್ರೀಯ ಪಾವತಿ ವ್ಯವಸ್ಥೆಗಳಾದ NEFT, RTGS ಬ್ಯಾಂಕ್​ಗಳ ಆಚೆಗೂ ವಿಸ್ತರಣೆ. ಪೂರ್ಣ ಪ್ರಮಾಣದಲ್ಲಿ ಕೆವೈಸಿ- ಪಿಪಿಐ ಕಡ್ಡಾಯ ಮಾಡಲಾಗಿದೆ. ಬ್ಯಾಂಕೇತರ ಬಳಕೆದಾರರಾಗಿದ್ದು, ಪೂರ್ಣ ಪ್ರಮಾಣದಲ್ಲಿ ಕೆವೈಸಿ ಪಿಪಿಐಗೆ ನಗದು ವಿಥ್​ಡ್ರಾಗೆ ಅವಕಾಶ ಇದೆ. – ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಚಿಲ್ಲರೆ ಹಣದುಬ್ಬರ ದರದ ಅಂದಾಜು ಶೇ 5.2 ಎಂದುಕೊಳ್ಳಲಾಗಿದೆ. ಇನ್ನು ಮಾರ್ಚ್ ತ್ರೈಮಾಸಿಕದ ಅಂತ್ಯಕ್ಕೆ ಶೇಕಡಾ 5 ಎಂದುಕೊಳ್ಳಲಾಗಿದೆ. – ಇನ್ನು ಮುಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬ್ಯಾಂಕೇತರ ಪೇಮೆಂಟ್ ವ್ಯವಸ್ಥೆ ಆಪರೇಟರ್​ಗಳ ಮೂಲಕ ಆರ್​ಟಿಜಿಎಸ್ ಮತ್ತು ಎನ್​ಇಎಫ್​​ಟಿಗೆ ಅವಕಾಶ ನೀಡುತ್ತದೆ. ಇದರಿಂದ ಪೇಟಿಎಂ, ಫೋನ್​ಪೇ ಮತ್ತಿತರ ಪೇಮೆಂಟ್ ವ್ಯಾಲೆಟ್​ಗಳ ಬಳಕೆದಾರರಿಗೆ ಅನುಕೂಲ ಆಗುತ್ತದೆ. ಇದರ ಜತೆಗೆ ಆರ್​ಬಿಐನಿಂದ ಪ್ರೀಪೇಯ್ಡ್ ಪೇಮೆಂಟ್ ಇನ್​ಸ್ಟ್ರುಮೆಂಟ್ ಖಾತೆ ಮಿತಿಯನ್ನು ವೈಯಕ್ತಿಕವಾಗಿ ಈ ಹಿಂದೆ ಇದ್ದ 1 ಲಕ್ಷ ರೂಪಾಯಿ ಮಿತಿಯಿಂದ 2 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಇದರಿಂದ ತೀರುವಳಿ ಅಪಾಯವು ಕಡಿಮೆ ಆಗುತ್ತದೆ ಹಾಗೂ ಡಿಜಿಟಲ್ ಹಣಕಾಸು ಸೇವೆ ಎಲ್ಲ ಬಳಕೆದಾರರಿಗೆ ತಲುಪಲು ಸಾಧ್ಯವಾಗುತ್ತದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. – ಹಣಕಾಸು ವರ್ಷ 2021- 22ಕ್ಕೆ ರಿಯಲ್ ಜಿಡಿಪಿ ಬೆಳವಣಿಗೆ ದರವನ್ನು ಶೇ 10.5ರಲ್ಲೇ ಮತ್ತೆ ಅಂದಾಜಿಸಲಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವಾಣಿಜ್ಯ ಬ್ಯಾಂಕ್​ಗಳಿಗೆ ನೀಡುವ ಸಾಲಕ್ಕೆ ಪಡೆಯುವ ಬಡ್ಡಿ ದರವನ್ನು ರೆಪೋ ದರ ಎನ್ನಲಾಗುತ್ತದೆ. ಇನ್ನು ವಾಣಿಜ್ಯ ಬ್ಯಾಂಕ್​ಗಳು ಆರ್​ಬಿಐ ಬಳಿ ಇಡುವ ಹಣಕ್ಕೆ ನೀಡುವ ಬಡ್ಡಿ ದರವನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡಿಮೆ ಇದ್ದರೆ ವಾಣಿಜ್ಯ ಬ್ಯಾಂಕ್​ಗಳಿಂದ ಕಡಿಮೆ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ. ಅದೇ ವೇಳೆ ಠೇವಣಿ ಮೇಲಿನ ಬಡ್ಡಿ ದರ ಕೂಡ ಕಡಿಮೆ ಇರುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಸಾಲದ ಮೇಲೆ ಬಡ್ಡಿ ದರ ಕಡಿಮೆ ಇದೆ. ಅದೇ ವೇಳೆ ಠೇವಣಿ ಮೇಲೆ ಸಿಗುವ ಬಡ್ಡಿ ಸಹ ಕಡಿಮೆ ಆಗಿದೆ.

ಇದನ್ನೂ ಓದಿ: SBI home loan: ಗೃಹ ಸಾಲ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐನಿಂದ ಪ್ರೊಸೆಸಿಂಗ್ ಶುಲ್ಕ ಮನ್ನಾ ಕೂಡ ಇಲ್ಲ

(Reserve Bank Of India continues repo rate with 4% and reverse repo with 3.5% on April 2021 MPC meeting. Here are the key highlight points of RBI governor Shaktikanta Das’s announcements.)

Published On - 12:21 pm, Wed, 7 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ