Stock market: ದಿನದ ಕನಿಷ್ಠ ಮಟ್ಟದಿಂದ 400 ಪಾಯಿಂಟ್ ಚೇತರಿಕೆ ಕಂಡ ಸೆನ್ಸೆಕ್ಸ್; ಈಗಲೂ 1000 ಪಾಯಿಂಟ್ ಕುಸಿತ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರದಂದು (ಏಪ್ರಿಲ್ 19, 2021) ಭಾರೀ ಇಳಿಕೆ ಕಂಡಿವೆ. ಏರುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಪ್ರಭಾವ ಮಾರುಕಟ್ಟೆ ಮೇಲೆ ಆಗಿದೆ.

Stock market: ದಿನದ ಕನಿಷ್ಠ ಮಟ್ಟದಿಂದ 400 ಪಾಯಿಂಟ್ ಚೇತರಿಕೆ ಕಂಡ ಸೆನ್ಸೆಕ್ಸ್; ಈಗಲೂ 1000 ಪಾಯಿಂಟ್ ಕುಸಿತ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:Apr 19, 2021 | 1:51 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ (ಏಪ್ರಿಲ್ 19, 2021) ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿವೆ. ಸೆನ್ಸೆಕ್ಸ್ ಸೂಚ್ಯಂಕವು ಮಧ್ಯಾಹ್ನ 1.10ರ ಹೊತ್ತಿಗೆ 1022 ಪಾಯಿಂಟ್ ಕುಸಿದು, 47,809 ಪಾಯಿಂಟ್​ನೊಂದಿಗೆ ವಹಿವಾಟು ನಡೆಸುತ್ತಿತ್ತು. ಆ ಮೂಲಕ ದಿನದ ಕನಿಷ್ಠ ಮಟ್ಟವಾಗಿ 1450ಕ್ಕೂ ಹೆಚ್ಚು ಪಾಯಿಂಟ್ ಕುಸಿದಿದ್ದ ಸೆನ್ಸೆಕ್ಸ್, 400ಕ್ಕೂ ಹೆಚ್ಚು ಪಾಯಿಂಟ್ ಏರಿಕೆ ಕಂಡಿದೆ. ಇನ್ನು ಎನ್​ಎಸ್​ಇ ನಿಫ್ಟಿ ಸೂಚ್ಯಂಕವು ಮಧ್ಯಾಹ್ನ 1.15ರ ಹೊತ್ತಿಗೆ 306 ಪಾಯಿಂಟ್ ಕುಸಿದು 14,311.65 ಪಾಯಿಂಟ್​ನೊಂದಿಗೆ ವ್ಯವಹಾರ ನಡೆಸುತ್ತಿತ್ತು. ಅಂದ ಹಾಗೆ ನಿಫ್ಟಿ- 50 ದಿನದ ಕನಿಷ್ಠ ಮಟ್ಟವಾದ 14,191.40 ಪಾಯಿಂಟ್ ತಲುಪಿ ಅಲ್ಲಿಂದ ಚೇತರಿಕೆ ಕಂಡಿದೆ.

ನಿಫ್ಟಿ ಪಿಎಸ್​ಯು ಬ್ಯಾಂಕ್, ವಾಹನ, ಮೂಲಸೌಕರ್ಯ ಮತ್ತು ಎನರ್ಜಿ ಸೂಚ್ಯಂಕಗಳು ಶೇ 2ರಿಂದ 5ರಷ್ಟು ಕುಸಿತ ಕಂಡವು. ಇನ್ನು ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ತಲಾ 2 ಪರ್ಸೆಂಟ್ ಇಳಿಕೆ ಕಂಡವು. ಹೆಚ್ಚುತ್ತಿರುವ ಕೊರೊನಾ ಸೋಂಕಿನ ಪ್ರಕರಣದ ಹಿನ್ನೆಲೆಯಲ್ಲಿ ಹೂಡಿಕೆದಾರರು ಆತಂಕಕ್ಕೆ ಈಡಾಗಿದ್ದಾರೆ. ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯದ ಕುಸಿತವು ಮುಂದುವರಿದಿದೆ. ಈ ಲೇಖನ ಸಿದ್ಧವಾಗುವ ಹೊತ್ತಿಗೆ ಷೇರು ಮಾರ್ಕೆಟ್​ನಲ್ಲಿ ಏರಿಕೆ ಹಾಗೂ ಇಳಿಕೆ ಕಂಡಿದ್ದ ಪ್ರಮುಖ ಷೇರುಗಳ ವಿವರ ಹೀಗಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ 5 ಷೇರುಗಳು ಡಾ ರೆಡ್ಡೀಸ್ ಲ್ಯಾಬ್ಸ್ ಇನ್ಫೋಸಿಸ್ ಸಿಪ್ಲಾ ಎಚ್​ಸಿಎಲ್ ಟೆಕ್ ವಿಪ್ರೋ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ 5 ಷೇರುಗಳು ಆಕ್ಸಿಸ್ ಬ್ಯಾಂಕ್ ಇಂಡಸ್​ಇಂಡ್ ಬ್ಯಾಂಕ್ ಒಎನ್​ಜಿಸಿ ಅದಾನಿ ಪೋರ್ಟ್ಸ್ ಅಲ್ಟ್ರಾಟೆಕ್ ಸಿಮೆಂಟ್

ಇದನ್ನೂ ಓದಿ: ಷೇರು ಮಾರ್ಕೆಟ್​ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್

(Indian stock market index Sensex tank more than 1000 points on April 19, 2021 at 1 PM. Here is the top gainers and losers)

Published On - 1:39 pm, Mon, 19 April 21