Petrol Diesel Price: ಬೆಂಗಳೂರು ಸೇರಿದಂತೆ ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಹೀಗಿದೆ!

Petrol Rate Today: ಏಪ್ರಿಲ್ ತಿಂಗಳ ಪ್ರಾರಂಭದ 15 ದಿನಗಳ ನಂತರ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಅದಾದ ನಂತರ ಆರು ದಿನಗಳಾದರೂ ಪೆಟ್ರೋಲ್​, ಡೀಸೆಲ್​ ದರ ಇಳಿಕೆಯತ್ತ ಸಾಗುವಂತೆ ಕಾಣುತ್ತಿಲ್ಲ.

Petrol Diesel Price: ಬೆಂಗಳೂರು ಸೇರಿದಂತೆ ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್​, ಡೀಸೆಲ್​ ದರ ಹೀಗಿದೆ!
ಸಾಂದರ್ಭಿಕ ಚಿತ್ರ

ದೆಹಲಿ: ಸತತವಾಗಿ ಆರನೇ ದಿನವೂ ಪೆಟ್ರೋಲ್​, ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಏಪ್ರಿಲ್​ ತಿಂಗಳ ಪ್ರಾರಂಭದ 15 ದಿನಗಳ ನಂತರ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಅದಾದ ನಂತರ ಆರು ದಿನಗಳಾದರೂ ಪೆಟ್ರೋಲ್​, ಡೀಸೆಲ್​ ದರ ಇಳಿಕೆಯತ್ತ ಸಾಗುವಂತೆ ಕಾಣುತ್ತಿಲ್ಲ. ಮಾರ್ಚ್​ ತಿಂಗಳಲ್ಲಿ ಸತತವಾಗಿ ಮೂರು ಬಾರಿ ಪೆಟ್ರೋಲ್​, ಡೀಸೆಲ್​ ದರವನ್ನು ಇಳಿಕೆ ಮಾಡಲಾಯಿತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಪ್ರತಿ ಬ್ಯಾರೆಲ್​ಗೆ 67 ಡಾಲರ್​ ದಾಟಿದೆ. ಕಳೆದ ಮಾರ್ಚ್​ ತಿಂಗಳಿನ 30ನೇ ತಾರೀಕಿನಂದು ಪೆಟ್ರೋಲ್​, ಡೀಸೆಲ್​ ದರವನ್ನು ಕಡಿತಗೊಳಿಸಲಾಯಿತು. ಪೆಟ್ರೋಲ್​, ಡೀಸೆಲ್​ ದರ ಗರಿಷ್ಟ ಮಟ್ಟದಲ್ಲಿಯೇ ಇದ್ದು, ರಾಜಸ್ಥಾನದ ಶ್ರೀಗಂಗನಗರದಲ್ಲಿ ಪ್ರತಿ ಲಿಟರ್​ ಪೆಟ್ರೋಲ್​ ದರ 100 ರೂಪಾಯಿ ದಾಟಿದೆ.

ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾದಾಗ ಪೆಟ್ರೋಲ್​, ಡೀಸೆಲ್​ ದರ ಸ್ಥಿರವಾಗಿ ಉಳಿದಿತ್ತು. ಇನ್ನೇನು ಚುನಾವಣೆ ಹತ್ತಿರದಲ್ಲಿದ್ದಾಗ ಕೊಂಚವೇ ಇಳಿಕೆ ಕಂಡಿತ್ತು. ಆದರೂ ಮೊದಲಿಗೆ ಹೋಲಿಸಿದರೆ ಗರಿಷ್ಠ ಮಟ್ಟದಲ್ಲಿಯೇ ಪೆಟ್ರೋಲ್​, ಡೀಸೆಲ್​ ದರವಿದೆ. ದರ ಪರಿಷ್ಕರಣೆಯ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆ ಏರಿದ್ದರ ಪರಿಣಾಮವಾಗಿ ಭಾರತವು ನಷ್ಟ ಅನುಭವಿಸಿದೆ. ಅದನ್ನು ಸರಿದೂಗಿಸಿಕೊಂಡು ಸಾಗುವ ನಿಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆ ಅಂದರೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ದರ ಏರಿಕೆ ನಿರೀಕ್ಷಿಸಬಹುದು ಎಂದು ತೈಲ ಕಂಪನಿ ಮೂಲಗಳು ಹೇಳುತ್ತಿವೆ.

ಸದ್ಯದ ಪರಿಸ್ಥಿತಿಯಲ್ಲಿ ನಷ್ಟ ತುಂಬಿಸಿಕೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ. ಚುನಾವಣಾ ಅವಧಿಯಲ್ಲಿ ಲಾಭದ ಪ್ರಮಾಣ ಕಡಿಮೆ ಮಾಡಿದ್ದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸರಿದೂಗಿಸಿಕೊಳ್ಳಲು ಚಿಂತನೆ ನಡೆಸುತ್ತಿದ್ದಂತಿದೆ. ಇನ್ನೇನು ಪಂಚ ರಾಜ್ಯಗಳ ಚುನಾವಣೆ ಕೊನೆಯ ಹಂತದಲ್ಲಿದೆ. ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಪೆಟ್ರೋಲ್​, ಡೀಸೆಲ್ ದರ​ ಪರಿಷ್ಕರಿಸಿ ಏರಿಕೆ ಮಾಡುವ ಸಾಧ್ಯತೆ ಇದೆ.

ಮೆಟ್ರೋ ನಗರಗಳಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ ದೆಹಲಿಯಲ್ಲಿ ಇಂದು ಪ್ರತಿ ಲೀಟರ್​ ಪೆಟ್ರೋಲ್​ ದರ 90 ರೂಪಾಯಿ 40 ಪೈಸೆ ಇದೆ. ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 96 ರೂಪಾಯಿ 83 ಪೈಸೆ ಇದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90 ರೂಪಾಯಿ 62 ಪೈಸೆ ಇದೆ. ಹಾಗೆಯೇ ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 92.43 ರೂಪಾಯಿ ಇದೆ.

ಪ್ರತಿ ಲೀಟರ್​ ಡೀಸೆಲ್​ ದರ ದೆಹಲಿಯಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 80 ರೂಪಾಯಿ 73 ಪೈಸೆ ಇದೆ. ಮುಂಬೈನಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 87.81 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 83.61 ರೂಪಾಯಿ ಇದೆ. ಹಾಗೂ ಚೆನ್ನೈನಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 85 ರೂಪಾಯಿ 75 ಪೈಸೆ ಇದೆ.

ವಿವಿಧ ನಗರದ ಪೆಟ್ರೋಲ್​ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ:

https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: 

https://tv9kannada.com/business/diesel-price-today.html

Click on your DTH Provider to Add TV9 Kannada