Coronavirus India Update: ದೇಶದಲ್ಲಿ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ 2.95 ಲಕ್ಷ , ಕಳೆದ 24 ಗಂಟೆಗಳಲ್ಲಿ 2,203 ಮಂದಿ ಸಾವು
Covid 19 in India: ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಮಂಗಳವಾರ 2,95,041 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಕೊವಿಡ್ ರೋಗಿಗಳ ಸಂಖ್ಯೆ 1,56,16,130ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 24 1,67,457 ಮಂದಿ ಚೇತರಿಸಿಕೊಂಡಿದ್ದು ಈವರೆಗೆ 1,32,76,039 ಮಂದಿ ಗುಣಮುಖರಾಗಿದ್ದಾರೆ.
ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿಡ್ನಿಂದ 2,203 ಮಂದಿ ಸಾವಿಗೀಡಾಗಿದ್ದಾರೆ . ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಮಂಗಳವಾರ 2,95,041 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಕೊವಿಡ್ ರೋಗಿಗಳ ಸಂಖ್ಯೆ 1,56,16,130ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 24 1,67,457 ಮಂದಿ ಚೇತರಿಸಿಕೊಂಡಿದ್ದು ಈವರೆಗೆ 1,32,76,039 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಕೊವಿಡ್ನಿಂದ ಮೃತಪಟ್ಟವರ ಸಂಖ್ಯೆ 1,82,553 ಆಗಿದ್ದು ,ದೇಶದಲ್ಲಿ 21,57,538 ಸಕ್ರಿಯ ಪ್ರಕರಣಗಳಿವೆ. 13,01,19,310 ಮಂದಿ ಲಸಿಕೆ ಪಡೆದಿದ್ದಾರೆ.
ಮಂಗಳವಾರ ಅತೀ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಸಾವಿನ ಸಂಖ್ಯೆಯೂ ಗರಿಷ್ಠ ಆಗಿದೆ. ಭಾರತದಲ್ಲಿ ಕೊವಿಡ್ ಎರಡನೇ ಅಲೆಯ ಪರಿಣಾಮ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಯುವ ಜನರು ಮತ್ತು ಮಕ್ಕಳಿಗೂ ಸೋಂಕು ತಗಲುತ್ತಿದೆ. ಮಂಗಳವಾರ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಮುಂದೆ ದೊಡ್ಡ ಸವಾಲು ಇದೆ. ಇದನ್ನು ನಾವು ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದ್ದಾರೆ.
India reports 2,95,041 new #COVID19 cases, 2,023 deaths and 1,67,457 discharges in the last 24 hours, as per Union Health Ministry
Total cases: 1,56,16,130 Total recoveries: 1,32,76,039 Death toll: 1,82,553 Active cases: 21,57,538
Total vaccination: 13,01,19,310 pic.twitter.com/YrLu5MVdbl
— ANI (@ANI) April 21, 2021
ಕೇರಳದಲ್ಲಿ ಮಂಗಳವಾರ ಕೊವಿಡ್ ಸೋಂಕಿತರ ಸಂಖ್ಯೆ 12,72,645ಕ್ಕೇರಿದೆ. ರಾಜ್ಯದಲ್ಲಿ 1,18,673 ಸಕ್ರಿಯ ಪ್ರಕರಣಗಳಿದ್ದು 11,48,671 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ 4,978 ಮಂದಿಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 19,577 ಹೊಸ ಪ್ರಕರಣಗಳು ಪತ್ತೆಯಾಗಿದಜ್ದು 28 ಮಂದಿ ಸಾವಿಗೀಡಾಗಿದ್ದಾರೆ, 3880 ಮಂದಿ ಗುಣಮುಖರಾಗಿದ್ದಾರೆ.
ತಮಿಳುನಾಡಿನಲ್ಲಿ 10,986 ಹೊ ಪ್ರಕರಣಗಳು ಪತ್ತೆಯಾಗಿದ್ದುಚೆನ್ನೈ ನಗರದಲ್ಲಿ 3,711 ಪ್ರಕರಣಗಳು ವರದಿ ಆಗಿವೆ. ಮಂಗಳವಾರದ ಅಂಕಿ ಅಂಶಗಳ ಪ್ರಕಾರ 79,804 ಸಕ್ರಿಯ ಪ್ರಕರಣಗಳಿದ್ದು 48 ಮಂದಿ ಸಾವಿಗೀಡಾಗಿದ್ದಾರೆ. 6,250 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿ ಒಟ್ಟು 10.13 ಲಕ್ಷ ಸೋಂಕಿತರಿದ್ದು ಸಾವಿನ ಸಂಖ್ಯೆ 13,205ಕ್ಕೇರಿದೆ.
ಆಂಧ್ರ ಪ್ರದೇಶದಲ್ಲಿ 8,987 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಸೆಪ್ಟಂಬರ್ 13ರ ನಂತರ ಗರಿಷ್ಠ ಪ್ರಕರಣಗಳು ವರದಿ ಆಗಿದೆ. 35 ಮಂದಿ ಸಾವಿಗೀಡಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 53,889 ಆಗಿದೆ. ಇಲ್ಲಿನ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಕೊವಿಡ್ ರೋಗಿಗಳ ಸಂಖ್ಯೆ9,76,987 ಆಗಿದ್ದು, 9,15,626 ಮಂದಿ ಚೇತರಿಸಿಕೊಂಡಿದ್ದಾರೆ. 7,472 ಮಂದಿ ಮೃತಪಟ್ಟಿದ್ದಾರೆ..
ಮಧ್ಯ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 12,897 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 79 ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 12,897 ಆಗಿದೆ.
ಗೋವಾದ ಮಾಜಿ ಸಚಿವ ಸೋಮನಾಥ್ ಜುವಾರ್ಕರ್ ಕೊವಿಡ್ನಿಂದ ನಿಧನ ಗೋವಾದ ಮಾಜಿ ಸಚಿವ ಸೋಮನಾಥ್ ಜುವಾರ್ಕರ್ ಕೊವಿಡ್ ನಿಂದ ಅಸು ನೀಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಬುಧವಾರ ತಿಳಿಸಿದ್ದಾರೆ. ಅವರಿಗೆ 74 ವಯಸ್ಸಾಗಿತ್ತು. ಕೊರೊನಾ ವೈರಸ್ ಸೋಂಕು ತಗಲಿ ಕಳೆದ ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತೆಲಂಗಾಣಗಲ್ಲಿ ಒಂದೇ ದಿನ ಗರಿಷ್ಠ ಪ್ರಕರಣ ದಾಖಲು ಕಳೆದ 24 ಗಂಟೆಗಳಲ್ಲಿ ತೆಲಂಗಾಣದಲ್ಲಿ 6,542 ಹೊಸ ಕೊವಿಡ್ ಪ್ರಕರಣ ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 3.67 ಲಕ್ಷಕ್ಕೇರಿದೆ. 20 ಮಂದಿಸಾವಿಗೀಡಾಗಿದ್ದು ಸಾವಿನ ಸಂಖ್ಯೆ 1876 ಆಗಿದೆ. ಕೊಲಿಡ್ ನಿಯಂತ್ರಣಕ್ಕಾಗಿ ಇಂದು ರಾತ್ರಿಯಿಂದಲೇ ಇಲ್ಲಿ ರಾತ್ರಿ ಕರ್ಫ್ಯೂ ಜಾರಿ ಆಗಲಿದೆ.
ಮಿಜೊರಾಂನಲ್ಲಿ 90 ಹೊಸ ಪ್ರಕರಣಗಳೊಂದಿಗೆ 5,000 ಗಡಿದಾಟಿದ ಸೋಂಕು ಪ್ರಕರಣ ಮಿಜೊರಾಂನಲ್ಲಿ 90 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಪ್ರಕರಣಗಳ ಸಂಖ್ಯೆ 5,000 ಗಡಿದಾಟಿದೆ. 9 ಸಿಆರ್ ಪಿಎಫ್ ಸಿಬ್ಬಂದಿಗಳಿಗೆ ಕೊವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಥಾಣೆ ಜಿಲ್ಲೆಯಲ್ಲಿ 4,599 ಹೊಸ ಕೊವಿಡ್ ಪ್ರಕರಣ ಪತ್ತೆ, 49 ಸಾವು 4,599 ಹೊಸ ಕೊರೊನಾವೈರಸ್ ಪ್ರಕರಣಗಳು ಸೇರ್ಪಡೆಯಾಗುವುದರೊಂದಿಗೆ, ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ 4,25,987 ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಕೊರೊನಾವೈರಸ್ ನಿಂದ 49 ರೋಗಿಗಳು ಸಾವಿಗೀಡಾಗಿದ್ದುಜಿಲ್ಲೆಯಲ್ಲಿ ಸಾವಿನ ಸಂಖ್ಯೆ 7,031 ಕ್ಕೆ ಏರಿದೆ. ಮರಣ ಪ್ರಮಾಣವು ಶೇಕಡಾ 1.65 ಆಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಗುಜರಾತ್ ನಲ್ಲಿ 12,206 ಹೊಸ ಪ್ರಕರಣ ಗುಜರಾತ್‌ನಲ್ಲಿ ಮಂಗಳವಾರ 12,206 ಹೊಸ ಕೊವಿಡ್ ಪ್ರಕರಣಗಳು ವರದಿಯಾಗಿದ್ದು 121 ರೋಗಿಗಳು ಸೋಂಕಿಗೆ ಬಲಿಯಾಗಿದ್ದಾರೆ. ಇದು ಒಂದು ದಿನದಲ್ಲಿ ಗರಿಷ್ಠ ಆಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಗುಜರಾತ್‌ನಲ್ಲಿ ಒಂದೇ ದಿನ 12,000 ದಾಟಿರುವುದು ಇದೇ ಮೊದಲು.
ಪಂಜಾಬ್ 61 ಸಾವು, 4,673 ಪ್ರಕರಣ ಪತ್ತೆ
4,673 ಹೊಸ ಪ್ರಕರಣಗಳೊಂದಿಗೆ ಪಂಜಾಬ್ನಲ್ಲಿ ಸೋಂಕಿತರ ಸಂಖ್ಯೆ 3,09,316ಕ್ಕೇರಿದೆ. ಅದೇ ವೇಳೆ ಸಾವಿನ ಸಂಖ್ಯೆ 8,045 ಕ್ಕೆ ಏರಿಕೆಯಾಗಿದೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ. ಪಟಿಯಾಲದಲ್ಲಿ ಏಳು ಸಾವುಗಳು ಸಂಭವಿಸಿದ್ದುರ ಅಮೃತಸರದಲ್ಲಿ ಆರು ಮತ್ತು ಲುಧಿಯಾನ, ಮೊಹಾಲಿ ಮತ್ತು ಎಸ್‌ಬಿಎಸ್ ನಗರಗಳಲ್ಲಿ ತಲಾ ಐದು ಸಾವುಗಳು ಸಂಭವಿಸಿವೆ.
ಇದನ್ನೂ ಓದಿ: PM Modi Announcement: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಲಾಕ್ಡೌನ್ ಎಂಬುದು ರಾಜ್ಯಗಳ ಕೊನೆ ಆಯ್ಕೆಯಾಗಲಿ: ಮೋದಿ
(Coronavirus India reports 2.95 lakh Covid-19 cases 2023 deaths on Tuesday)
Published On - 11:18 am, Wed, 21 April 21