ಕೋರೊನಾ ಸೋಂಕಿತರ ಹೋಂ ಐಸೋಲೇಶನ್​ಗೆ ಹೊಸ ಮಾರ್ಗಸೂಚಿ ಬಿಡುಗಡೆ..

ಮನೆಯಲ್ಲಿ ಐಸೋಲೇಟ್ ಆಗುವವರು ಟೆಲಿಮಾನಿಟರಿಂಗ್ ಟೀಂಗೆ ಮಾಹಿತಿ ನೀಡಬೇಕಾಗಿದೆ. ಹೆರಿಗೆಗೆ 2ವಾರ ಮಾತ್ರ ಇರುವ ಗರ್ಭಿಣಿಯರಿಗೆ ಸೋಂಕು ತಗುಲಿದ್ದರೆ ಅವರು ಮನೆಯಲ್ಲಿ ಐಸೋಲೇಟ್ ಆಗುವಂತಿಲ್ಲ.

ಕೋರೊನಾ ಸೋಂಕಿತರ ಹೋಂ ಐಸೋಲೇಶನ್​ಗೆ ಹೊಸ ಮಾರ್ಗಸೂಚಿ ಬಿಡುಗಡೆ..
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕೊರೊನಾ ವೈರಸ್ ಎರಡನೇ ಅಲೆ ಹೆಚ್ಚಾದ ಬೆನ್ನಲ್ಲೇ ರಾಜ್ಯ ಸರ್ಕಾರ ಇಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ನೈಟ್​ ಕರ್ಫ್ಯೂ ವಿಸ್ತರಣೆ ಮತ್ತು ವೀಕೆಂಡ್​ ಕರ್ಫ್ಯೂ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಕೊವಿಡ್​ ಸೋಂಕಿತರ ಹೋಂ ಐಸೋಲೇಶನ್​ಗೆ ಸಂಬಂಧಪಟ್ಟ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಹೋಂ ಐಸೋಲೇಶನ್​ (ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುವುದು)ಗೆ ಸಂಬಂಧಪಟ್ಟಂತೆ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಅನ್ವಯ ರೋಗ ಲಕ್ಷಣ ಇಲ್ಲದವರು, ಸಾಧಾರಣ ಲಕ್ಷಣ ಇರುವವರು ಮನೆಯಲ್ಲಿದ್ದು, ವೈದ್ಯರ ಸೂಚನೆಯ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳಬೇಕು. ದೂರವಾಣಿ ಮೂಲಕ ವೈದ್ಯಕೀಯ ಸಿಬ್ಬಂದಿಯೊಂದಿಗೆ ಚರ್ಚಿಸಬೇಕು. ಇನ್ನು ಹೋಂ ಐಸೋಲೇಶನ್​ಗೆ ಮನೆಯಲ್ಲಿ ಪ್ರತ್ಯೇಕ ಕೊಠಡಿ, ಪ್ರತ್ಯೇಕ ಶೌಚಗೃಹ ಇರುವುದು ಕಡ್ಡಾಯವಾಗಿದೆ.

ಮನೆಯಲ್ಲಿ ಐಸೋಲೇಟ್ ಆಗುವವರು ಟೆಲಿಮಾನಿಟರಿಂಗ್ ಟೀಂಗೆ ಮಾಹಿತಿ ನೀಡಬೇಕಾಗಿದೆ. ಹೆರಿಗೆಗೆ 2ವಾರ ಮಾತ್ರ ಇರುವ ಗರ್ಭಿಣಿಯರಿಗೆ ಸೋಂಕು ತಗುಲಿದ್ದರೆ ಅವರು ಮನೆಯಲ್ಲಿ ಐಸೋಲೇಟ್ ಆಗುವಂತಿಲ್ಲ. ಬಾಣಂತಿಯರಿಗೆ ವೈದ್ಯರು ಸೂಚಿಸಿದರೆ ಮಾತ್ರ ಹೋಂ ಐಸೋಲೇಶನ್​ಗೆ ಅವಕಾಶ ಇರುತ್ತದೆ.

ಇನ್ನುಳಿದಂತೆ ಜ್ವರದ ತೀವ್ರತೆ ಹೆಚ್ಚಿದ್ದವರು, ಉಸಿರಾಟ ಸಮಸ್ಯೆಯಿದ್ದವರು ಆಸ್ಪತ್ರೆಗೆ ದಾಖಲಾಗಲೇಬೇಕಾಗಿದೆ. ಸದ್ಯ ರಾಜ್ಯದ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆಯೂ ಎದುರಾಗಿದ್ದು, ಗಂಭೀರ ಸ್ಥಿತಿಯ ಹೊರತಾಗಿ ಆಸ್ಪತ್ರೆಗೆ ದಾಖಲಾಗುವುದು ಬೇಡ ಎಂದು ಈಗಾಗಲೇ ಸರ್ಕಾರ ಮನವಿ ಮಾಡಿದೆ.

ಇದನ್ನೂ ಓದಿ:  ರಾಜ್ಯದಲ್ಲಿಂದು 21,794 ಕೊರೊನಾ ಕೇಸ್​ಗಳು ದಾಖಲು; 149 ಮಂದಿ ಸೋಂಕಿನಿಂದ ಸಾವು

Karnataka Weekend Curfew: ರಾಜ್ಯದಲ್ಲಿ ನಾಳೆಯಿಂದಲೇ ಹೊಸ ನಿಯಮ ಜಾರಿ; ಏನಿರತ್ತೆ? ಏನೆಲ್ಲ ಇರಲ್ಲ.. ಇಲ್ಲಿದೆ ನೋಡಿ ಮಾಹಿತಿ

Published On - 11:53 pm, Tue, 20 April 21

Click on your DTH Provider to Add TV9 Kannada