Karnataka Assembly Session 2021: ಸೆಪ್ಟೆಂಬರ್ 13ರರಿಂದ ವಿಧಾನಸಭಾ ಅಧಿವೇಶನ ಆರಂಭ

| Updated By: guruganesh bhat

Updated on: Aug 26, 2021 | 8:09 PM

ಬಸವರಾಜ ಬೊಮ್ಮಶಾಯಿ ಮುಖ್ಯಮಂತ್ರಿಯಾಗಿ ನೇಮಕಗೊಂಡ ನಂತರ ನಡೆಯಲಿರುವ ಮೊದಲ ಅಧಿವೇಶನ ಇದಾಗಲಿದೆ.

Karnataka Assembly Session 2021: ಸೆಪ್ಟೆಂಬರ್ 13ರರಿಂದ ವಿಧಾನಸಭಾ ಅಧಿವೇಶನ ಆರಂಭ
ವಿಧಾನಸೌಧ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದ ದಿನಾಂಕ ಮತ್ತು ಸಮಯ ಪ್ರಕಟಗೊಂಡಿದೆ. ಸೆಪ್ಟೆಂಬರ್ 13 ರ ಬೆಳಗ್ಗೆ 11 ಗಂಟೆಗೆ ವಿಧಾನಸಭಾ ಅಧಿವೇಶನ ಆರಂಭಗೊಳ್ಳಲಿದೆ.ಸೆಪ್ಟೆಂಬರ್ ತಿಂಗಳಲ್ಲಿ ವಿಧಾನಸಭಾ ಅಧಿವೇಶನ ನಡೆಸುತ್ತೇವೆ ಎಂದು ಈಮುನ್ನವೇ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ನೇಮಕಗೊಂಡ ನಂತರ ನಡೆಯಲಿರುವ ಮೊದಲ ಅಧಿವೇಶನ ಇದಾಗಲಿದ್ದು, ವಿಪಕ್ಷಗಳು ಸರ್ಕಾರವನ್ನು ಹಣಿಯಲು ಯೋಜನೆ ರೂಪಿಸುವುದನ್ನು ಸಹ ಸದ್ಯದ ರಾಜಕೀಯ ಬೆಳವಣಿಗೆಗಳು ಸೂಚಿಸುತ್ತಿವೆ.  

ರಾಜ್ಯದಲ್ಲಿ ಜಲಜೀವನ್ ಮಿಷನ್ ಅನುಷ್ಠಾನ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮೀತಿ ರಚನೆ ಮಾಡಲಾಗಿದೆ. ಜಲಜೀವನ್ ಮಿಷನ್ ಅನುಷ್ಠಾನಕ್ಕೆ ಸಂಬಂಧಿಸಿ ಪ್ರಗತಿ ಪರಿಶೀಲನೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರು, ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸದಸ್ಯರು ಸಮಿತಿಯ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: 

ಕೋಲಾರ: ಚಿನ್ನದ ನಾಡಿನಲ್ಲಿವೆ ಅಪರೂಪದ ಕೃಷ್ಣಮೃಗಗಳು!; ಬೇಕಿದೆ ಜವಾಬ್ದಾರಿಯುತ ರಕ್ಷಣೆಯ ಹೊಣೆ

(Karnataka Legislative Assembly Session 2021 starts from September 13)

Published On - 7:15 pm, Thu, 26 August 21