Karnataka Lockdown; ಏರ್ ಪೋರ್ಟ್ ರಸ್ತೆಯ ಫ್ಲೈ ಓವರ್ಗಳು ಕ್ಲೋಸ್, ಸರ್ವಿಸ್ ರೋಡ್ ಮೂಲಕ ಏರ್ ಪೋರ್ಟ್ಗೆ ತೆರಳಲು ವ್ಯವಸ್ಥೆ

|

Updated on: May 11, 2021 | 9:25 AM

ಸದ್ಯ ರಾಜ್ಯದಲ್ಲಿ ಲಾಕ್ಡೌನ್ ಇದ್ದರೂ ಏರ್ ಪೋರ್ಟ್ ನತ್ತ ತೆರಳುತ್ತಿರುವ ಟ್ಯಾಕ್ಸಿ, ಕಾರು, ವಾಹನಗಳಿಗೆ ನಿರ್ಬಂಧ ಇಲ್ಲ. ಬೆಳಗ್ಗೆ 10 ಗಂಟೆ ನಂತರವೂ ಫ್ಲೈಟ್ ಟಿಕೆಟ್ ತೋರಿಸಿ ಸಂಚರಿಸಬಹುದು. ಇನ್ನು 13 ದಿನ ಏರ್ ಪೋರ್ಟ್ಗೆ ಸಂಪರ್ಕ ಕಲ್ಪಿಸೋ ಮೇಲ್ಸೇತುವೆಗಳು ಬಂದ್ ಆಗಿರಲಿವೆ.

Karnataka Lockdown; ಏರ್ ಪೋರ್ಟ್ ರಸ್ತೆಯ ಫ್ಲೈ ಓವರ್ಗಳು ಕ್ಲೋಸ್, ಸರ್ವಿಸ್ ರೋಡ್ ಮೂಲಕ ಏರ್ ಪೋರ್ಟ್ಗೆ ತೆರಳಲು ವ್ಯವಸ್ಥೆ
ಕೆಂಪೇಗೌಡ ವಿಮಾನ ನಿಲ್ದಾಣ
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆಗೆ ತತ್ತರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಲಾಕ್ಡೌನ್ ಹೇರಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ನಿಯಮಗಳು ಕಠಿಣವಾಗಿದ್ದು ನಿನ್ನೆಯಿಂದ ಲಾಠಿ ಹಿಡಿದು ಫೀಲ್ಡ್ಗೆ ಇಳಿದಿದ್ದ ಪೊಲೀಸರು ಮೊದಲ ದಿನದ ಲಾಕ್ಡೌನ್ನನ್ನು ಯಶಸ್ವಿಯಾಗಿಸಿದ್ದಾರೆ. ಇಂದ ಎರಡನೇ ದಿನದ ಲಾಕ್ಡೌನ್ ಆಗಿದ್ದು ಬೆಳಗ್ಗೆ 10ರ ನಂತರ ಕಠಿಣ ಕ್ರಮಗಳು ಜಾರಿಯಲ್ಲಿವೆ. ಈ ನಡುವೆ ಏರ್ ಪೋರ್ಟ್ ರಸ್ತೆಯ ಫ್ಲೈ ಓವರ್ಗಳು ಕ್ಲೋಸ್ ಆಗಿದ್ದು ಸರ್ವಿಸ್ ರೋಡ್ ಮೂಲಕ ಏರ್ ಪೋರ್ಟ್ಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ.

ಸದ್ಯ ರಾಜ್ಯದಲ್ಲಿ ಲಾಕ್ಡೌನ್ ಇದ್ದರೂ ಏರ್ ಪೋರ್ಟ್ ನತ್ತ ತೆರಳುತ್ತಿರುವ ಟ್ಯಾಕ್ಸಿ, ಕಾರು, ವಾಹನಗಳಿಗೆ ನಿರ್ಬಂಧ ಇಲ್ಲ. ಬೆಳಗ್ಗೆ 10 ಗಂಟೆ ನಂತರವೂ ಫ್ಲೈಟ್ ಟಿಕೆಟ್ ತೋರಿಸಿ ಸಂಚರಿಸಬಹುದು. ಇನ್ನು 13 ದಿನ ಏರ್ ಪೋರ್ಟ್ಗೆ ಸಂಪರ್ಕ ಕಲ್ಪಿಸೋ ಮೇಲ್ಸೇತುವೆಗಳು ಬಂದ್ ಆಗಿರಲಿವೆ. ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ಸಾಮಾಗ್ರಿಗಳ ಖರೀದಿಗೆ ಅವಕಾಶ ನೀಡಲಾಗಿದ್ದು ಸಾದಹಳ್ಳಿ ಗೇಟ್ ಬಳಿ ಎಂದಿನಂತೆ ವಾಹನ ಸಂಚಾರ ನಡೆಯುತ್ತಿದೆ.

ಕೊರೊನಾ ಕರ್ಫ್ಯೂ ವೇಳೆಯೂ ರದ್ದಾಗಿದ್ದ ವಿಮಾನಗಳ ಹಾರಾಟ
ಕೊರೊನಾ ಸೋಂಕನ್ನು ತಡೆಗಟ್ಟುವ ಹಿನ್ನೆಲೆ ರಾಜ್ಯ ಸರ್ಕಾರ ಏಪ್ರಿಲ್ 24 ರಿಂದ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿತ್ತು. ಈ ಕಾರಣ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ 15ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತ್ತು.

ಇನ್ನು ಮೇ 10 ರಂದು ಪ್ರಯಾಣಿಕರು ಇಲ್ಲದ ಕಾರಣ ವಿಮಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದವು. ಬೆಂಗಳೂರಿಗೆ ಬರಬೇಕಿದ್ದ ಮತ್ತು ಬೆಂಗಳೂರಿನಿಂದ ಹೊರಡಬೇಕಿದ್ದ ಸುಮಾರು ಒಟ್ಟು 53 ವಿಮಾನಗಳ ಹಾರಾಟವನ್ನು ವಿಮಾನ ಸಂಸ್ಥೆಗಳು ರದ್ದುಗೊಳಿಸಿದ್ದವು. ಕೊರೊನಾ ಲಾಕ್ಡೌನ್ ಭಯದಿಂದ ಜನರು ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುತ್ತಿಲ್ಲ. ಹೀಗಾಗಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು.

ಇದನ್ನೂ ಓದಿ: ಜೆಆರ್​ಡಿ ಟಾಟಾ ಸಹಾಯದಿಂದ ವಿದ್ಯಾಭ್ಯಾಸ ಪಡೆದ ಆ ಯುವಕ ಮುಂದೆ ಭಾರತದ ರಾಷ್ಟ್ರಪತಿ ಆದ ಅದ್ಭುತ ಸಂಗತಿ ಇಲ್ಲಿದೆ