
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಾರಿ ಬಜೆಟ್ ಮಂಡನೆ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಇನ್ನು ರಾಜ್ಯದಲ್ಲಿ ಅಧಿಕ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಮಳೆಯಿಂದ ಖಾಲಿಯಾಗಿದ್ದ ಡ್ಯಾಂಗಳು ಭರ್ತಿಯಾಗುತ್ತಿವೆ. ಮೊತ್ತೊಂದಡೆ ತರಕಾರಿ, ಹಣ್ಣು ಮತ್ತು ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿವೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೆಟ್ಸ್..
ಅಮರನಾಥ ಯಾತ್ರೆಗೆ ತೆರಳಿದ್ದ ಗದಗ ಜಿಲ್ಲೆಯ ಭಕ್ತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹೆಚ್.ಕೆ.ಪಾಟೀಲ್ ಫೋನ್‌ನಲ್ಲಿ ಮಾತನಾಡಿದ್ದಾರೆ. ಸಂಕಷ್ಟದಲ್ಲಿರುವ ಯಾತ್ರಿಗಳಿಗೆ ಧೈರ್ಯ ತುಂಬಿದ್ದಾರೆ. ಅಮರನಾಥಯಾತ್ರೆ ಮಾರ್ಗ ಮಧ್ಯೆ ಗುಡ್ಡ ಕುಸಿದು ಜನರಿಗೆ ಸಂಕಷ್ಟ ಎದುರಾಗಿದೆ. ಸದ್ಯ ಪಂಚತರಣಿ ಕ್ಯಾಂಪ್ನಲ್ಲಿ ಭಕ್ತರು ಆಶ್ರಯ ಪಡೆದಿದ್ದಾರೆ. 4 ದಿನಗಳ ಹಿಂದೆ ಗದಗ ಜಿಲ್ಲೆಯ 23 ಭಕ್ತರು ಪ್ರಯಾಣ ಬೆಳೆಸಿದ್ದರು.
ಸಂಚಾರಿ ನಿಯಮ ಉಲ್ಲಂಘನೆ ದಂಡ ಕಟ್ಟಲು ವಿನಾಯಿತಿ ಹಿನ್ನೆಲೆ 3 ದಿನದಲ್ಲಿ 7234 ಪ್ರಕರಣದಲ್ಲಿ 22,34,300 ರೂ. ಮೊತ್ತ ಸಂಗ್ರಹವಾಗಿದೆ. 3 ದಿನಗಳಿಂದ 23,385 ಪ್ರಕರಣಗಳಲ್ಲಿ 75,44,550 ರೂ. ಪಾವತಿ ಮಾಡಲಾಗಿದೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಒಂದು ವಾರ ಅಲ್ಲ, ಹತ್ತು ದಿನ ತಡೆಯಿರಿ. ಅದಕ್ಕೆ ಎಲ್ಲದಕ್ಕೂ ಅಸೆಂಬ್ಲಿಯೊಳಗೇ ಉತ್ತರ ಕೊಡುತ್ತೇವೆ. ಹೌಸ್ನಲ್ಲಿ ಆಫೀಸರ್ ನೇಮಕ ಆಗಿದೆ ತನಿಖೆ ಮಾಡೋದಕ್ಕೆ. ಎಲ್ಲರಿಗೂ ಅಸೆಂಬ್ಲಿಯೊಳಗೆ ತೃಪ್ತಿದಾಯಕ ಉತ್ತರ ಕೊಟ್ಟಿದ್ದೇವೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಬೆಳಗಾವಿ ಜಿಲ್ಲಾ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಜೈನಮುನಿ ಹತ್ಯೆ ಪ್ರಕರಣದ ತನಿಖೆ ಪಾರದರ್ಶಕವಾಗಿ ಆಗುತ್ತಿಲ್ಲ. ಕೇವಲ ಒಬ್ಬ ಆರೋಪಿ ಮಾಳಿ ಹೆಸರು ಜಪ ಮಾಡುವ ಕೆಲಸ ಇಲಾಖೆ ಮಾಡುತ್ತಿದೆ. ಮತ್ತೋರ್ವನ ಹೆಸರು ಹೇಳುತ್ತಿಲ್ಲ, ಪ್ರಕರಣದಲ್ಲಿ ಬೇರೆ ಏನೋ ಇದೆ ಎಂಬ ಸಂಶಯವಿದೆ.
ಬೆಳಗಾವಿ: ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಕೇಸ್ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದ್ದು, ನಿಜವಾದ ಪ್ರಮುಖ ಆರೋಪಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಆರೋಪ ಮಾಡಿದ್ದಾರೆ. ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾರಾಯಣ ಮಾಳಿ ಪ್ರಕರಣದಲ್ಲಿ ಭಾಗಿಯಾಗಿರಬಹುದು ಆದರೆ, ಪ್ರಮುಖ ಆರೋಪಿಯ ಹೆಸರನ್ನು ಸರ್ಕಾರ ಅಥವಾ ಪೊಲೀಸರು ಹೇಳುತ್ತಿಲ್ಲ. ಇದು ಹಲವು ಸಂಶಯಕ್ಕೆ ಕಾರಣವಾಗುತ್ತಿದೆ ಎಂದಿದ್ದಾರೆ.
ಜೈನಮುನಿ ಹತ್ಯೆ ಕೇಸ್: ಪ್ರಮುಖ ಆರೋಪಿಯನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ: ಶಾಸಕ ಅಭಯ್ ಪಾಟೀಲ್ ಆರೋಪ
ಯಾವುದಾದರು ವಿರೋಧ ಪಕ್ಷ ಬಜೆಟ್ ಒಪ್ಪಿಕೊಂಡಿದ್ದು ಇದೆಯಾ ಎಂದು ಹಾಸನದಲ್ಲಿ ಕೃಷಿ ಇಲಾಖೆ ಸಚಿವ N.ಚಲುವರಾಯಸ್ವಾಮಿ ಪ್ರಶ್ನಿಸಿದರು. ಇಂತಹ ಬಜೆಟ್ ಯಾರೂ ಮಾಡಲು ಆಗಲ್ಲ. ಬಿಜೆಪಿ ಅಧಿಕಾರದಲ್ಲಿದ್ದರೆ ಯೋಜನೆ ಜಾರಿ ಮಾಡಲು ಆಗುತ್ತಿರಲಿಲ್ಲ. ಪ್ರಣಾಳಿಕೆಯಲ್ಲಿ ಕೊಟ್ಟ ಯೋಜನೆ ಜಾರಿಗೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
ಹಾಸನ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನಿಡಿದ್ದಾರೆ.
ಜೈನಮುನಿ ಹತ್ಯೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ: ಸಮಗ್ರ ತನಿಖೆ ಸೂಚನೆ
ಅಮರನಾಥ ಯಾತ್ರೆಗೆ ತೆರಳಿದ್ದ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂದು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ಕನ್ನಡಿಗರ ನೆರವಿಗಾಗಿ ಐಎಎಸ್ ಅಧಿಕಾರಿ ರಶ್ಮಿ ನಿಯೋಜಿಸಿದ್ದೇವೆ. ಮಳೆ ಹಿನ್ನೆಲೆ ಹೆಲಿಕಾಪ್ಟರ್, ವಿಮಾನ ಮೂಲಕ ಕರೆತರಲು ಆಗಲ್ಲ ಎಂದು ಹೇಳಿದರು.
ಸಿದ್ಧರಾಮಯ್ಯ ಇಡೀ ದೇಶದಲ್ಲಿಯೇ ಬೆಸ್ಟ್ ಬಜೆಟ್ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಅವರಿಗೆ ಏನು ಯೋಗ್ಯತೆ ಇದೆ ಕಾಂಗ್ರೆಸ್ ಬಗ್ಗೆ ಮಾತನಾಡುವುದಕ್ಕೆ. ಬರೀ ಕರ್ನಾಟಕದಲ್ಲಿ ಬೆಲೆ ಏರಿಕೆ ಆಗಿಲ್ಲ. ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಪ್ರಲ್ಹಾದ್ ಜೋಶಿ ಮಹಾನ್ ನಾಯಕರು ಅವರಿಗೆ ಉತ್ತರ ಹೇಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಐದು ಗ್ಯಾರಂಟಿಗಳ ಜೊತೆಗೆ ಎಲ್ಲಾ ಭರವಸೆಗಳನ್ನ ಈಡೇರಿಸುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು. ಗ್ಯಾರಂಟಿ ಜಾರಿ ಖಚಿತ, ಎಲ್ಲ ಭರವಸೆಗಳನ್ನೂ 5 ವರ್ಷದಲ್ಲಿ ಈಡೇರಿಸ್ತೇವೆ. ಈ ಹಿಂದೆ ಸಿಎಂ ಆಗಿದ್ದಾಗ 165 ಭರವಸೆ ಪೈಕಿ 158 ಭರವಸೆ ಈಡೇರಿಸಿದ್ದೆವು ಎಂದರು.
ಸಿಎಂ ಸಿದ್ಧರಾಮಯ್ಯ ಅವರು ಗಂಟಲು ನೋವು, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದಾರೆ. ಹಾಗಾಗಿ ಕಾರ್ಯಕ್ರಮದಲ್ಲೇ ಪದೇಪದೆ ಕೆಮ್ಮುತ್ತಿದ್ದರು. ಕಫಾ ಉಗುಳಲು ಸಿಎಂಗೆ ಸಿಬ್ಬಂದಿ ಖಾಲಿ ಚಹಾ ಕಪ್ ತಂದುಕೊಟ್ಟಿದ್ದಾರೆ. ಅನಾರೋಗ್ಯದ ನಡುವೆಯೂ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದಾರೆ.
ಸಮಾಜಕ್ಕೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನು ಮಾಡಬೇಕು. ನಾವು ಪ್ರಜಾಪ್ರಭುತ್ವ ಒಪ್ಪಿಕೊಂಡಿದ್ದೇವೆ, ಇಲ್ಲಿ ಪ್ರಜೆಗಳೇ ಮಾಲೀಕರು. ಯಾರು ಯಾರಿಗೆ ಮತ ನೀಡುತ್ತಾರೆ ಅವರೇ ಪ್ರಭುಗಳು. ಅವರು ಪ್ರಜೆಗಳಿಗೆಗಾಗಿ ಕೆಲಸ ಮಾಡಬೇಕು. ನಾವು ತೆಗೆದುಕೊಳ್ಳುವ ನಿರ್ಧಾರ ಸಮಾಜದ ಪರ ಇರಬೇಕು. ಅವರ ವಿರುದ್ಧವಾಗಿ ಮಾಡಿದ್ರೆ ಅದು ಸಮಾನ ವಿರೋಧಿ ಆಗುತ್ತೆ. ಸಂವಿಧಾನದ ವಿರುದ್ಧವಾಗಿ ಯಾರೂ ಕೂಡ ಇರಬಾರದು ಎಂದು ಹೇಳಿದ್ದಾರೆ.
ಸರ್ಕಾರ ಜನರಿಗಾಗಿ ಇರುತ್ತೇ, ಹೊರತು ಜನ ಸರ್ಕಾರಕ್ಕಾಗಿ ಇರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಮಾಜದಲ್ಲಿ ಇರುವ ವೈವಿಧ್ಯತೆಯನ್ನು ನಾವು ಹೋಗಲಾಡಿಸಬಹುದು. ಆರ್ಥಿಕ ಹಾಗೂ ಸಾಮಾಜಿಕವಾಗಿ ವೈವಿಧ್ಯತೆ ಇರಬಹುದು ಎಂದಿದ್ದಾರೆ.
ಬೆಂಗಳೂರಿನ ವಸಂತನಗರದ ಅರಸು ಭವನದಲ್ಲಿ ಆಯೋಜಿಸಿರುವ ಸಾಹಿತಿಗಳು, ಲೇಖಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ರಾಜ್ಯದಲ್ಲಿ ಸಾರ್ವಜನಿಕ ಹೂಡಿಕೆ ಪ್ರಮಾಣ ಕಡಿಮೆ ಆಗ್ತಿದೆ? ಈ ಬಗ್ಗೆ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ, ಸಾರ್ವಜನಿಕ ಹೂಡಿಕೆ ಜಾಸ್ತಿಯಾದ್ರೆ ಕೈಗಾರಿಕೆಗಳು ಬೆಳೆಯುತ್ತವೆ. ಆಗ ಜಿಡಿಪಿ ಸಹ ಹೆಚ್ಚಾಗುತ್ತೆ, ನಾಡಿನ ಅಭಿವೃದ್ಧಿ ಸಹ ಆಗಲಿದೆ. ಯಾವ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಇರುತ್ತೋ, ಅಂತಹ ದೇಶದಲ್ಲಿ ಹೂಡಿಕೆ ಜಾಸ್ತಿ ಆಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ದರ ಏರಿಕೆ ಎಂದರೆ ಎರಡು ರೀತಿ ಇದೆ. ಒಂದು ಹಾಲು ಉತ್ಪಾದಕರಿಗೆ ಹೆಚ್ಚಿನ ದರವನ್ನು ಕೊಡುವುದು. ಇನ್ನೊಂದು ಖರೀದಿ ಮಾಡುವವರಿಗೆ ದರ ಜಾಸ್ತಿ ಮಾಡುವುದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಎರಡು ದರ ಕಡಿಮೆ. ಹಾಲು ಉತ್ಪಾದಕರಿಗೆ ನಾವು ಸಹಾಯ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಯಾರಿಗೂ ಹೊರೆಯಾಗದಂತೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಗದಗ: ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಚಿಂತನೆ ಮಾಡಲಾಗುತ್ತಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು. 1 ಸಾವಿರ ಗ್ರಾಮ ನ್ಯಾಯಾಲಯ ಸ್ಥಾಪಿಸಲು ಚರ್ಚೆ ನಡೆದಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ಶಿವಮೊಗ್ಗ: ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಅವ್ಯವಸ್ಥೆಯ ಆಗರ. ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮದ ಸರಕಾರಿ ಪ್ರೌಢಶಾಲೆಯ ಕಟ್ಟಡ ಸೋರುತ್ತಿದೆ. ವಿದ್ಯಾರ್ಥಿಗಳು ಕೊಠಡಿಯೊಳಗೆ ಛತ್ರಿ ಹಿಡಿದು ಪಾಠ ಕೇಳುತ್ತಿದ್ದಾರೆ.
ಬೆಳಗಾವಿ: ಜೈನಮುನಿಗಳ ಕೊಲೆ ವಿಚಾರ ಗೊತ್ತಾಗಿ ನಿನ್ನೆ (ಜು.07) ರಂದು ಸದನದಲ್ಲಿ ಗೃಹಸಚಿವರ ಗಮನಕ್ಕೆ ತಂದಿದ್ದೆ. ಶ್ರೀಗಳದ್ದೇ ಈ ರೀತಿ ಕೊಲೆಯಾದರೇ ರಾಜ್ಯದ ಜನರ ಪರಿಸ್ಥಿತಿ ಏನು? ನಾಳೆ ಜನರಿಗೆ ಏನು ರಕ್ಷಣೆ ಕೊಡುತ್ತೀರಿ ನೀವು ಎಂದು ಗೃಹಸಚಿವರಿಗೆ ಕೇಳಿದ್ದೆ. ಆಗ ಇದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಪಡೆದು. ಸೋಮವಾರ ಹೇಳಿಕೆ ಕೊಡೋದಾಗಿ ಗೃಹಸಚಿವರು ಹೇಳಿದ್ದಾರೆ ಎಂದು ಹಿರೇಕೋಡಿ ನಂದಿಪರ್ವತ ಆಶ್ರಮದಲ್ಲಿ ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ.
ಬೆಂಗಳೂರು: ಸರ್ಕಾರದ ವಿರುದ್ಧ ಮಾಜಿ ಸಿದ್ದರಾಮಯ್ಯ ಹೆಚ್ಡಿ ಕುಮಾರಸ್ವಾಮಿಯವರು ಪೆನ್ಡ್ರೈವ್ ಅರೋಪ ವಿಚಾರವಾಗಿ ಹೆಚ್ಡಿ ಕುಮಾರಸ್ವಾಮಿಯವರು 2 ಬಾರಿ ಮುಖ್ಯಮಂತ್ರಿಗಳಾಗಿದ್ದರು. ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಪೆನ್ಡ್ರೈವ್ ತೋರಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಮೈಸೂರಿನಲ್ಲಿ ಹೆಚ್.ವಿಶ್ವನಾಥ್ ಹೇಳಿದರು.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸಹ ಸುಳ್ಳು ಭರವಸೆ ನೀಡಿದ್ದಾರೆ. ಘೋಷಣೆ ವೇಳೆ ಗ್ಯಾರಂಟಿ ಯೋಜನೆಗಳಿಗೆ ಷರತ್ತು ಹಾಕಿರಲಿಲ್ಲ. ಈಗ ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸಿದ್ದಾರೆ. ಬಿಜೆಪಿ ಸರ್ಕಾರದ 20ಕ್ಕೂ ಹೆಚ್ಚು ಯೋಜನೆ ಕೈಬಿಟ್ಟಿದ್ದಾರೆ. ಬಿಜೆಪಿ ಸರ್ಕಾರದ ಯೋಜನೆ ಕೈಬಿಟ್ಟಿದ್ದು ಜನರಿಗೆ ಮಾಡಿದ ಮೋಸ. ಒಂದು ಸಮುದಾಯದ ಓಲೈಕೆಯ ಬಜೆಟ್ ಎಂದು
ಬೆಳಗಾವಿಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಹುಬ್ಬಳ್ಳಿ: ಸಿದ್ದರಾಮಯ್ಯ ಬಜೆಟ್ ಮಂಡನೆಗಿಂತ ಬಿಜೆಪಿಗೆ ಬೈಯ್ದಿದ್ದೇ ಹೆಚ್ಚು. ದೇಶದಲ್ಲಿ ಕೊವಿಡ್ ವ್ಯಾಕ್ಸಿನ್ ತಯಾರಿಸಿ ಎಲ್ಲರಿಗೂ ನೀಡಿದ್ದೇವೆ. ವಿದೇಶಗಳಿಗೂ ಕೊಟ್ಟಿದ್ದನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡುತ್ತಾರೆ. ಸಿದ್ದರಾಮಯ್ಯ ಭಾರತ ದ್ವೇಷಿ ರಾಹುಲ್ ಗಾಂಧಿ ರೀತಿ ಮಾತನಾಡುತ್ತಿದ್ದಾರೆ. ಆಸ್ತಿ ದರ ಏರಿಕೆ ಮಾಡಿದ್ದಾರೆ, ಅಬಕಾರಿ ಟಾರ್ಗೆಟ್ ಕೊಟ್ಟಿದ್ದಾರೆ. ಎಲ್ಲರಿಗೂ ಮದ್ಯಪಾನ ಮಾಡಿಸಿ ಹಣ ತಂದುಕೊಡಿ ಅನ್ನುತ್ತಾರೆ. ಎನ್ಇಪಿಗೆ ಮೊದಲು ಕಾಂಗ್ರೆಸ್ ಒಪ್ಪಿಗೆ ನೀಡಿತ್ತು ಆದರೆ ಇವತ್ತು ಕೈ ಬಿಟ್ಟಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ.
ಚಿಕ್ಕಮಗಳೂರು: ಮಲೆನಾಡಿನಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಗಾಳಿ-ಮಳೆಯಾಗುತ್ತಿದ್ದು ಕೊಪ್ಪ ತಾಲೂಕಿನ ಹೆಗ್ಗಾರುಕುಡಿಗೆ ಗ್ರಾಮದಲ್ಲಿ ಮನೆ ಮೇಲೆ ಬಿದ್ದ ಮರ ಬಿದ್ದು ಮೇಲ್ಚಾವಣಿಗೆ ಹಾನಿಯಾಗಿದೆ. ಶೃಂಗೇರಿ ಕಳಸ ಮೂಡಿಗೆರೆಯಲ್ಲಿ ವರುಣನ ಆರ್ಭಟ ಜೋರಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ (ಜು.07) 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಇಂದು (ಜು.08) ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಇಂದಿನ ಬಹುತೇಕ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ.
ಹುಬ್ಬಳ್ಳಿ: ಕಳೆ ನಾಶಕ ಸಿಂಪಡಿಸಲು ಹೋಗಿ ಅರಣ್ಯಾಧಿಕಾರಿ ಪ್ರಾಣ ಕಳೆದುಕೊಂಡಿದ್ದಾರೆ. ಕುಮಟಾ ತಾಲೂಕಿನ ಬಾಡ ಗ್ರಾಮದ ನಿವಾಸಿ ಉಪವಲಯ ಅರಣ್ಯಾಧಿಕಾರಿ ಯೋಗೇಶ ನಾಯಕ್ ಮೃತ ದುರ್ದೈವಿ. ಯೋಗೇಶ ನಾಯಕ್ ಹಳಿಯಾಳ ವಿಭಾಗದ ಕುಳಗಿ ಶಾಖೆಯ ವಿರ್ನೋಲಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಾಂಡೇಲಿಯ ಹಲವೆಡೆ ಕಳೆದ 13 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಚಾಮರಾಜನಗರ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ಕಾನೂನು ಸೇವಾ ಪ್ರಾಧಿಕಾರದ ಮಕ್ಕಳ ಸ್ನೇಹಿ ನ್ಯಾಯಾಧೀಶರಾದ ಎ.ಸಿ.ನಿಶಾರಾಣಿ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಚಾಮರಾಜನಗರ ತಾಲೂಕಿನ ರಂಗಸ್ವಾಮಿ(21) ಶಿಕ್ಷೆಗೊಳಗಾದ ಅಪರಾಧಿ. 20 ವರ್ಷ ಕಠಿಣ ಶಿಕ್ಷೆ ಜೊತೆಗೆ 40 ಸಾವಿರ ರೂ. ದಂಡ ವಿಧಿಸಲಾಗಿದೆ. ಸಂತ್ರಸ್ತ ಬಾಲಕಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನಮುನಿಯವರ ಶವಕ್ಕಾಗಿ ಪೊಲೀಸರು ಖಟಕಬಾವಿ ಗ್ರಾಮದ ಹೊರವಲಯದ ಗದ್ದೆಗಳಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪೊಲೀಸರಿಗೆ ಜೈನಮುನಿಯನ್ನು ಕೊಲೆ ಮಾಡಿ ಕೊಳವೆಬಾವಿಗೆ ಎಸೆದಿರುವ ಮಾಹಿತಿ ದೊರೆತಿದೆ.
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನೆಲೆ ಕೆಆರ್ಎಸ್ ಜಲಾಶಯದ ಒಳ ಹರಿವಿನಲ್ಲಿ ಏರಿಕೆಯಾಗಿದೆ. 13,449 ಕ್ಯೂಸೆಕ್ ನೀರು ಒಳಹರಿವು ಇದೆ. ಈ ವರ್ಷದಲ್ಲಿ ಮೊದಲ ಬಾರಿಗೆ ಇಷ್ಟು ಪ್ರಮಾಣದ ಒಳ ಹರಿವು ಇದ್ದು, ಒಂದೇ ದಿನದಲ್ಲಿ 2 ಅಡಿ ನೀರು ಹರಿದು ಬಂದಿದೆ. ಡ್ಯಾಂ ನೀರಿನ ಮಟ್ಟ 82 ಅಡಿಗೆ ಏರಿಕೆಯಾಗಿದೆ.
353 ಕ್ಯೂಸೆಕ್ ಹೊರ ಹರಿವು ಇದ್ದು, ಡ್ಯಾಂನ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದೆ.
ಬೆಂಗಳೂರು: ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಟೊಮೆಟೊ ಬೆಲೆದಿನದಿಂದ ದಿನಕ್ಕೆ ದುಬಾರಿತಾಗುತ್ತಿದ್ದು, 15 ದಿನಗಳಿಂದ ಶತಕ ಮೀರಿದೆ. ಇಂದು ಕೂಡ ಟೊಮೆಟೊ ಬೆಲೆ 120 ರ ಗಡಿದಾಟಿದೆ.
ಟೊಮೆಟೊ – 112 ರಿಂದ 123 ರೂ., ಈರುಳ್ಳಿ- 26 ರಿಂದ 29 ರೂ., ಹಸಿರು ಮೆಣಸಿನಕಾಯಿ- 60 ರಿಂದ 66 ರೂ., ಬೀಟ್ರೂಟ್- 56 ರಿಂದ 62 ರೂ., ಆಲೂಗಡ್ಡೆ- 36 ರಿಂದ 39 ರೂ., ಬೇಬಿ ಕಾರ್ನ್ – 68 ರಿಂದ 75 ರೂ., ದಪ್ಪಮೆಣಸಿನಕಾಯಿ – 51 ರಿಂದ 56 ರೂ., ಹುರುಳಿಕಾಯಿ – 46 ರಿಂದ 51 ರೂ., ಕ್ಯಾರೆಟ್ – 59 ರಿಂದ 65 ರೂ., ಹೂ ಕೂಸು – 17 ರಿಂದ 19 ಒಂದಕ್ಕೆ ರೂ., ನುಗ್ಗೆಕಾಯಿ – 104 ರಿಂದ 114 ರೂ., ದಪ್ಪ ಬದನೆಕಾಯಿ- 26 ರಿಂದ 49 ರೂ., ಬೆಳ್ಳುಳ್ಳಿ- 133 ರಿಂದ 147 ರೂ., ಶುಂಠಿ – 86 ರಿಂದ 95 ರೂ., ಬಟಾಣಿ – 95 ರಿಂದ 105 ರೂ., ಬೆಂಡೆಕಾಯಿ- 44 ರಿಂದ 48 ರೂ., ಮೂಲಂಗಿ – 38 ರಿಂದ 42 ರೂ. ಆಗಿದೆ.
ಮೈಸೂರು: ರಾಜ್ಯ ಬಜೆಟ್‌ನಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಸ್ಪಷ್ಟನೆ ಇಲ್ಲ. ಪ್ರವಾಸೋದ್ಯಮ ಕ್ಷೇತ್ರವನ್ನು ಕಡೆಗಣಿಸಲಾಗಿದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2023–24 ಬಜೆಟ್‌ನಲ್ಲಿ ಯಾವುದೇ ಹೊಸ ತೆರಿಗೆಗಳು ಇಲ್ಲ. ಜನಸಾಮಾನ್ಯನಿಗೆ ಸೇರಿದಂತೆ ಯಾರಿಗೂ ಹೊರೆಯಾಗದ ನೂತನ ಬಜೆಟ್ ಸ್ವಾಗತಾರ್ಹ. ಆದರೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಏನೂ ಅನುದಾನ ನೀಡದೆ ಕಡೆಗಣಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
1. ಚಾಮುಂಡಿ ಬೆಟ್ಟ ಆಭಿವೃದ್ದಿ ಪ್ರಾಧಿಕಾರ ಅಂತ ಘೋಷಣೆ ಮಾಡಲಾಗಿದೆ ಹಣ ಮೀಸಲಿಟ್ಟಿಲ್ಲ
2. ಚಿತ್ರನಗರಿ ಇಮ್ಮಾವು ನಲ್ಲೇ ಮಾಡಲಾಗುವುದೆಂದು ಹೇಳಲಾಗಿದೆ ಹಣ ನೀಡಿಲ್ಲ
3. ದಸರಾ ವಸ್ತು ಪ್ರದರ್ಶನ ವನ್ನು ಮೇಲ್ದರ್ಜೆಗೆ ಏರಿಸಲಾವುದೆಂದು ಹೇಳಲಾಗಿದೆ ಹಣ ನೀಡಿಲ್ಲ
4. ಏರ್ ಪೋರ್ಟ್ ರನ್ ವೇ ವಿಸ್ತರಿಸಲಾಗುವುದೆಂದು ಹೇಳಿ ಹಣ ಮೀಸಲಿಟ್ಟಿಲ್ಲ
5. ದಸರಾ ಅಭಿವೃದ್ದಿ ಪ್ರಾದಿಕಾರ ನಿರೀಕ್ಷೆ ಇತ್ತು ಅದು ಹುಸಿಯಾಗಿದೆ
6. ಜಿಲ್ಲೆಗಳನ್ನೊಳಗೊಂಡ ಪ್ರವಾಸೋದ್ಯಮ ಪ್ರಾಧಿಕಾರ ರಚನೆ ಕೋರಲಾಗಿತ್ತು ಅದರ ಪ್ರಸ್ತಾಪವೇ ಇಲ್ಲ
7. ಜೂ ಹಿಂಬಾಗ ಅರ್ಧ ನಿರ್ಮಿಸಿ ನೆನಗುದಿಗೆ ಬಿದ್ದಿರುವ ಅಂತರರಾಷ್ಟ್ರೀಯ ಮಟ್ಟದ ಅಕ್ವೇರಿಯಮ್ ಬಗ್ಗೆ ಮಾಹಿತಿಯೇ ಇಲ್ಲ
8. ಹೋಟೆಲ್ ಉದ್ಯಮಕ್ಕೂ ಯಾವುದೇ ಪ್ರೊತ್ಸಾಹದ ಪ್ರಸ್ತಾಪವೇ ಇಲ್ಲ. ಒಟ್ಟಾರೆಯಾಗಿದೆ ಅಭಿವೃದ್ದಿಗೆ ಆದ್ಯತೆ ಇಲ್ಲವೇ ಇಲ್ಲಂತಾಗಿದೆ. ಯಥಾಸ್ಥಿತಿ ಆಯವ್ಯಯ ಕಾಪಾಡಲಾಗಿದೆ ಎಂದಿದ್ದಾರೆ.
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಜು.10ರಿಂದ ಆಗಸ್ಟ್ 9ರವರೆಗೆ ಅಂದರೆ ಬರೋಬ್ಬರಿ ಒಂದು ತಿಂಗಳು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಜು.10ರಿಂದ ಆ.9ರವರೆಗೆ ಪ್ರತಿದಿನ 2 ತಾಸು ಮೆಟ್ರೋ ಸಂಚಾರ ಬಂದ್ ಮಾಡಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪತ್ರಿಕೆ ಪ್ರಕಟಣೆ ಹೊರಡಿಸಿದೆ.
ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರುನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈನ ಮುನಿಗಳು ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.
Published On - 8:05 am, Sat, 8 July 23