ಬೆಂಗಳೂರು: ಮಹಾಮಾರಿ ಕೊರೊನಾ ಎರಡನೇ ಅಲೆ ಇಡೀ ಕರ್ನಾಟಕವನ್ನೇ ನಲುಗಾಡಿಸಿದೆ. ದೇಶದಲ್ಲಿ ಗರಿಷ್ಠ ಸಂಖ್ಯೆಯ ಕೋವಿಡ್ -19 ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ್ದು ಮಹಾರಾಷ್ಟ್ರವನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ.
ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕೊವಿಡ್ ಆ್ಯಕ್ಟಿವ್ ಕೇಸ್
ಕರ್ನಾಟಕ ಮಹಾರಾಷ್ಟ್ರವನ್ನು ಮೀರಿಸಿ ಅತಿ ಹೆಚ್ಚು ಆ್ಯಕ್ಟಿವ್ ಕೇಸ್ಗಳನ್ನು ಹೊಂದಿದೆ. ಕರ್ನಾಟಕದಲ್ಲಿ 6,05,494 ಆ್ಯಕ್ಟಿವ್ ಕೇಸ್ಗಳಿದ್ದು 21,434 ಜನ ಬಲಿಯಾಗಿದ್ದಾರೆ. ಹಾಗೂ ಮಹಾರಾಷ್ಟ್ರದಲ್ಲಿ 4,94,032 ಆ್ಯಕ್ಟಿವ್ ಕೇಸ್ಗಳಿದ್ದು 80,512 ಜನ ಬಲಿಯಾಗಿದ್ದಾರೆ. ಈ ರೀತಿ ಕೊರೊನಾ ಆ್ಯಕ್ಟಿವ್ ಕೇಸ್ಗಳಲ್ಲಿ ಕರ್ನಾಟಕ ದೇಶದ್ಲಲೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದೆ. ಹಾಗೂ ಕೊರೊನಾ ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದುಕೊಂಡಿದೆ.
ಎಲ್ಲೆಲ್ಲಿ ಎಷ್ಟು ಆ್ಯಕ್ಟಿವ್ ಕೇಸ್ಗಳು
ಕೇರಳ-4,45,334 ಆ್ಯಕ್ಟಿವ್ ಕೇಸ್, 6,339 ಜನ ಬಲಿ
ರಾಜಸ್ಥಾನ-2,08,688 ಆ್ಯಕ್ಟಿವ್ ಕೇಸ್, 6,621 ಜನ ಬಲಿ
ತಮಿಳುನಾಡು-2,07,789 ಆ್ಯಕ್ಟಿವ್ ಕೇಸ್, 17,359 ಜನ ಬಲಿ
ಆಂಧ್ರ-2,07,467 ಆ್ಯಕ್ಟಿವ್ ಕೇಸ್, 9,271 ಜನ ಬಲಿ
ಯುಪಿ-1,77,643 ಆ್ಯಕ್ಟಿವ್ ಕೇಸ್, 17,238 ಜನ ಬಲಿ
ಪ.ಬಂಗಾಳ-1,31,948 ಆ್ಯಕ್ಟಿವ್ ಕೇಸ್, 13,137 ಜನ ಬಲಿ
ಗುಜರಾತ್-1,11,263 ಆ್ಯಕ್ಟಿವ್ ಕೇಸ್, 9,039 ಜನ ಬಲಿ
ಇದನ್ನೂ ಓದಿ: ದೇಶದಲ್ಲಿ ಅತಿ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿದ ಜಿಲ್ಲೆ ಬೆಂಗಳೂರು ನಗರ