ಅನಾಥ ಮಕ್ಕಳಿಗೂ ಮೀಸಲಾತಿ, ವರದಿ ಮೂಲಕ ಸರ್ಕಾರಕ್ಕೆ ಶಿಫಾರಸು ಮಾಡಿದ ಹಿಂದುಳಿದ ವರ್ಗಗಳ ಆಯೋಗ

ಕರ್ನಾಟಕದಲ್ಲಿರುವ ಅನಾಥ ಮಕ್ಕಳ ಮೀಸಲಾತಿ ಕುರಿತು ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಪ್ರವರ್ಗ-1 ಅಡಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗಿದೆ.

ಅನಾಥ ಮಕ್ಕಳಿಗೂ ಮೀಸಲಾತಿ, ವರದಿ ಮೂಲಕ ಸರ್ಕಾರಕ್ಕೆ ಶಿಫಾರಸು ಮಾಡಿದ ಹಿಂದುಳಿದ ವರ್ಗಗಳ ಆಯೋಗ
ಹಿಂದುಳಿದ ವರ್ಗಗಳ ಆಯೋಗ
Updated By: ರಮೇಶ್ ಬಿ. ಜವಳಗೇರಾ

Updated on: Aug 02, 2023 | 3:09 PM

ಬೆಂಗಳೂರು, (ಆಗಸ್ಟ್ 02): ಕರ್ನಾಟಕದಲ್ಲಿರುವ (Karnataka) ಅನಾಥ ಮಕ್ಕಳ(orphans Children) ಮೀಸಲಾತಿ(reservation) ಕುರಿತು ಹಿಂದುಳಿದ ವರ್ಗಗಳ ಆಯೋಗವು(Karnataka OBC Commission) ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ವರದಿ ಸಲ್ಲಿಸಿದ್ದು. ರಾಜ್ಯದಲ್ಲಿರುವ ಅನಾಥ ಮಕ್ಕಳನ್ನ ಅತೀ ಹಿಂದುಳಿದ ವರ್ಗ ಎಂದು ಪರಿಗಣಿಸುವಂತೆ ವರದಿಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಪ್ರವರ್ಗ-1 ಅಡಿ ಅನಾಥ ಮಕ್ಕಳಿಗೆ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿದ್ದಾರೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.1 ರಷ್ಟು ಮೀಸಲಾತಿ ನೀಡುವುದರ ಜೊತೆಗೆ ಅನಾಥ ಮಕ್ಕಳಿಗೆ “ಅನಾಥ ಮಕ್ಕಳು ಪ್ರಮಾಣ ಪತ್ರ” ನೀಡಬೇಕು. ಇದೇ ಪ್ರಮಾಣ ಪತ್ರವನ್ನ ಮೀಸಲಾತಿ ನೀಡುವ ವೇಳೆ ಪರಿಗಣಿಸವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್​​ ಅಳವಡಿಕೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್​

ಈವರೆಗೆ ಯಾವುದೇ ಜಾತಿ ಇಲ್ಲದ ಮಕ್ಕಳು ಸಾಮಾನ್ಯ ವರ್ಗದಲ್ಲಿ ಸ್ಪರ್ಧೆ ಮಾಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಅನಾಥ ಮಕ್ಕಳಿಗೆ ಪ್ರವರ್ಗ-1 ರ ಅಡಿಯಲ್ಲಿ ತರಲು ವರದಿ ನೀಡಲಾಗಿದೆ. ಈಗಾಗಲೇ ಸರ್ಕಾರ ಈ ವರದಿ ಒಪ್ಪಿಕೊಂಡಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ 30 ಜಿಲ್ಲೆಗಳಿಂದ 150 ನೋಂದಾಯಿತ ಅನಾಥ ‌ಮಕ್ಕಳ ಸಂಸ್ಥೆಗಳಿವೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 5280 ಅನಾಥ ಮಕ್ಕಳಿದ್ದಾರೆ. ತಂದೆ ತಾಯಿ ಪೋಷಕರಿಲ್ಲದ 635 ಮಕ್ಕಳಿದ್ದಾರೆ. ಇದರಲ್ಲಿ 120 ಮಕ್ಕಳು ಯಾವ ಜಾತಿಗೆ ಸೇರಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ವರದಿಯಲ್ಲಿ ತಿಳಿಸಿದ್ದು, ಯಾವ ಜಾತಿಯೂ ಇಲ್ಲದ ಇಂತಹ ಮಕ್ಕಳನ್ನ ಅತೀ ಹಿಂದುಳಿದ ವರ್ಗಕ್ಕೆ ಸೇರಿಸಬೇಕು. ಇನ್ನು ಈಗಾಗಲೇ ಜಾತಿ ಇರುವ ಅನಾಥ ಮಕ್ಕಳಿಗೆ ಅದೇ ಜಾತಿಯಲ್ಲಿ ಮುಂದುವರೆಸಲು ಮನವಿ ಮಾಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ