Karnataka Rains: ಬೆಂಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 2 ದಿನ ಗುಡುಗು ಸಹಿತ ಭಾರಿ ಮಳೆಯ ಎಚ್ಚರಿಕೆ
ಬೆಂಗಳೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ ಭಾರಿ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ ಭಾರಿ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಮೋಡಕವಿದ ವಾತಾವರಣ ನಿರ್ಮಾಣವಾಗಲಿದ್ದು, ರಾತ್ರಿ ಹೊತ್ತು ಮಳೆ ಬರುವ ಸಾಧ್ಯತೆ ಇದೆ. ಎಚ್ಎಎಲ್ನಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 31.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಸಕಲೇಶಪುರ, ಹುಣಸೂರು, ಹರದನಹಳ್ಳಿ, ಹೊನ್ನಾವರ, ಗೋಕಾಕ್, ಕವಡಿಮಟ್ಟಿ, ಚನ್ನರಾಯಪಟ್ಟಣ, ಉತ್ತರಹಳ್ಳಿ, ಸರಗೂರು, ಕ್ಯಾಸಲ್ರಾಕ್, ಜಾಲಹಳ್ಳಿ,ಮುದಗಲ್, ಯಡ್ರಾಮಿ, ಚಿಕ್ಕೋಡಿ, ಶಾಹಪುರ, ಕಲಘಟಗಿ, ಇಂಡಿ, ಅಜ್ಜಂಪುರ, ಹಾಸನ, ಹರಪನಹಳ್ಳಿ, ಸುಬ್ರಹ್ಮಣ್ಯ, ಗೋಕರ್ಣ, ಶಿರಹಟ್ಟಿ, ರಾಣೆಬೆನ್ನೂರು, ಹನುಮನಹಟ್ಟಿ, ಸಂಕೇಶ್ವರ, ದೇವದುರ್ಗ, ಕುಷ್ಟಗಿ, ಬಂಡೀಪುರ, ಕೊಳ್ಳೇಗಾಲ, ಮಾಲೂರು, ಶ್ರೀರಂಗಪಟ್ಟಣ, ತರೀಕೆರೆ, ಸೋಮವಾರಪೇಟೆ, ನಾಪೋಕ್ಲು, ಮೂರ್ನಾಡು, ಶನಿವಾರಸಂತೆ, ಹಾರಂಗಿ, ಗೋಣಿಕೊಪ್ಪಲು, ಹೊನ್ನಾಳಿ, ಶ್ರವಣಬೆಳಗೊಳ, ಸೈದಾಪುರ, ಲೋಕಾಪುರ, ಬೆಳ್ಳಟ್ಟಿ, ಅರಕಲಗೂಡು, ಬಾಳೆಹೊನ್ನೂರು, ಸುಳ್ಯ, ಬೆಳ್ತಂಗಡಿ, ಉಪ್ಪಿನಂಗಡಿ, ಧರ್ಮಸ್ಥಳ, ಪುತ್ತೂರು, ಮಂಕಿ, ಮಂಚಿಕೆರೆ, ರೋಣ, ಲಕ್ಷ್ಮೇಶ್ವರ, ಬಾದಾಮಿ, ಕೆರೂರು, ನೆಲೋಗಿ, ಸಿಂಧನೂರು, ಬೆಳಗಾವಿ ನಗರ, ಅಥಣಿ, ಹಿಡಕಲ್ನಲ್ಲಿ ಮಳೆಯಾಗಿದೆ.
ಶಿರಾಲಿಯಲ್ಲಿ 36.2 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ರೂಪುಗೊಂಡ ಸೈಕ್ಲೋನ್ ಮೋಕಾ ಹಗಲಿನಲ್ಲಿ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದ ಮೇಲೆ ಹಾದುಹೋಗುತ್ತದೆ.
ಈ ಸಮಯದಲ್ಲಿ ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿರುತ್ತದೆ. ಜೊತೆಗೆ ಬಲವಾದ ಗಾಳಿ ಮತ್ತು ಮಳೆ ಬೀಳಬಹುದು. ಇಂದು ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಮತ್ತಷ್ಟು ಓದಿ: Karnataka Rains: ಬೆಂಗಳೂರು, ಕರಾವಳಿಯ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ
ಈ ಚಂಡಮಾರುತವು ಮೇ 12 ರ ನಂತರ ಬಾಂಗ್ಲಾದೇಶದ ಕಡೆಗೆ ಈಶಾನ್ಯಕ್ಕೆ ಚಲಿಸುತ್ತದೆ. ಆದರೆ ಕಳೆದ 15 ವರ್ಷಗಳಿಂದ ಮ್ಯಾನ್ಮಾರ್ ನಲ್ಲಿ ಮೇ ತಿಂಗಳಲ್ಲಿ ಸೈಕ್ಲೋನ್ ಭೀತಿ ಇರಲಿಲ್ಲ. ಮೇ 02, 2008 ರಂದು, ದಕ್ಷಿಣ ಮ್ಯಾನ್ಮಾರ್‌ಗೆ ಅಪ್ಪಳಿಸಿದ ಕೊನೆಯ ಚಂಡಮಾರುತವೆಂದರೆ ಅದು ನರ್ಗೀಸ್.
ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್, ಲಡಾಖ್ ಮತ್ತು ಹಿಮಾಚಲ ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಹಿಮಪಾತ ಸಂಭವಿಸಿದೆ. ಉತ್ತರಾಖಂಡದಲ್ಲೂ ಒಂದೋ ಎರಡೋ ಕಡೆ ತುಂತುರು ಮಳೆಯೊಂದಿಗೆ ಲಘು ಹಿಮಪಾತವಾಗಿದೆ. ಅಸ್ಸಾಂ, ಛತ್ತೀಸ್‌ಗಢ, ಪೂರ್ವ ಮಧ್ಯಪ್ರದೇಶ, ವಿದರ್ಭ, ಮರಾಠವಾಡ ಮತ್ತು ಹರಿಯಾಣ, ಉತ್ತರ ಪ್ರದೇಶ ಮತ್ತು ರಾಯಲಸೀಮಾ ಭಾಗಗಳಲ್ಲಿ ಲಘು ಮಳೆಯಾಗಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ