ಬೆಂಗಳೂರು: ಕೊರೊನಾದಿಂದ ಅತಂತ್ರವಾಗಿರುವ ಈ ವೇಳೆ ಜನರ ಸಂಕಷ್ಟಗಳಿಗೆ ನೆರವಾಗಬೇಕಿದ್ದ ಆಹಾರ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಜನರಿಗೆ ಸಿಗಬೇಕಿದ್ದ ಪಡಿತರ ಚೀಟಿಗಳು ಆಹಾರ ಇಲಾಖೆಯಲ್ಲಿಯೇ ಕೊಳೆಯುತ್ತ ಬಿದ್ದಿವೆ. 4 ವರ್ಷಗಳಿಂದ ರೇಷನ್ ಕಾರ್ಡ್ ಇಲ್ಲದೇ ಬರೋಬ್ಬರಿ 4,05,216 ಜನರು ಪರದಾಡುತ್ತಿದ್ದಾರೆ. ಹೊಸ ಬಿಪಿಎಲ್ ಕಾರ್ಡ್ಗಳನ್ನು ನೀಡಲು 2017 ರಿಂದ 2021ರವರೆಗೆ ರಾಜ್ಯದಾದ್ಯಂತ 39,02, 745 ರಷ್ಟು ಜನರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 34,97, 529 ರಷ್ಟು ಅರ್ಜಿಗಳ ವಿಲೇವಾರಿಯಾಗಿದ್ದರೆ 4,05, 216 ಅರ್ಜಿಗಳು ಬಾಕಿ ಉಳಿದಿವೆಯಂತೆ. ಹೀಗಾಗಿ ಜನರು ಸರ್ಕಾರದಿಂದ ಸಿಗುವ ಮೂಲ ಸೌಕರ್ಯಗಳನ್ನ ಪಡೆದುಕೊಳ್ಳಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಡ್ಗಳು ಬಾಕಿ ಉಳಿಯಲು ಕಾರಣವೇನು ಅಂತ ಆಹಾರ ಇಲಾಖೆಯ ಆಯುಕ್ತೆ ಶಮ್ಲಾ ಇಕ್ಬಾಲ್, ಕೊರೊನಾದಿಂದಾಗಿ ಕಾರ್ಡ್ಗಳು ಬಾಕಿ ಉಳಿದಿವೆ. ಸದ್ಯ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವ ಸರ್ಕಾರ ಹಲವು ನಿಯಾಮವಳಿ ಬಂದಿವೆ. ಅದರಲ್ಲಿ ಮನೆಯ ಆದಾಯ, ದಾಖಲೆಗಳನ್ನು ಸಂಪೂರ್ಣವಾಗಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಸದ್ಯದಲ್ಲೆ ರೇಷನ್ ಕಾರ್ಡ್ಗಳು ಜನರಿಗೆ ಸಿಗುವಂತೆ ವ್ಯವಸ್ಥೆ ಕಲ್ಪಿಸಿಕೊಡಲು ಕ್ರಮತೆಗೆದುಕೊಳ್ಳುತ್ತೇವೆ. ಸದ್ಯ ನಗರದಲ್ಲಿ 80 ಸಾವಿರದಷ್ಟು ಕಾರ್ಡ್ಗಳು ಬಾಕಿ ಉಳಿದಿವೆ ಎಂದರು.
ಸಾಮಾನ್ಯವಾಗಿ ರೇಷನ್ ಪಡೆದುಕೊಳ್ಳಲು ಜಿಲ್ಲೆಗಳಲ್ಲಿ ಗ್ರಾಮಪಂಚಾತ್ಗಳಲ್ಲಿ ಅರ್ಜಿ ಹಾಕಬೇಕು. ನಗರ ಪ್ರದೇಶದಲ್ಲಿ ಬೆಂಗಳೂರು ಒನ್ ಆಫೀಸ್ ಗಳಲ್ಲಿ ಅರ್ಜಿಹಾಕಬೇಕು. ಅರ್ಜಿಗೆ ಲಗತ್ತಿಸಿರುವ ದಾಖಲೆಗಳಯ ಎಲ್ಲ ಸರಿ ಇದ್ದದ್ದೇ ಆದಲ್ಲಿ 15 – 20 ದಿನಗಳಲ್ಲಿ ರೇಷನ್ ಕಾರ್ಡ್ ಜನರ ಕೈ ಸೇರುತ್ತವೆ. ಆದರೆ ಆಹಾರ ಇಲಾಖೆ ನಾಲ್ಕು ವರ್ಷಗಳಿಂದ ರೇಷನ್ ಕಾರ್ಡ್ಗಳನ್ನು ನೀಡದೆ ಬಾಕಿ ಉಳಿಸಿಕೊಂಡಿರುವುದಿಂದ ಸರ್ಕಾರದಿಂದ ಸಿಗುವ ಆಸ್ಪತ್ರೆ ಸೌಕರ್ಯ, ಪಡಿತರ ಸೌಕರ್ಯ, ಮನೆ ಸೌಕರ್ಯ ಸೇರಿದಂತೆ ಹಲವು ಸೌಲಭ್ಯಗಳಿಂದ ಜನರು ವಂಚಿತರಾಗುತ್ತಿದ್ದಾರೆ.
ವರದಿ: ಪೂರ್ಣಿಮಾ ನಾಗರಾಜ್
ಟಿವಿ 9 ಬೆಂಗಳೂರು
ಇದನ್ನೂ ಓದಿ:
ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್; ಬಿಎಂಟಿಸಿ ಖಾಸಗಿಕರಣದ ಮೊದಲ ಹೆಜ್ಜೆ? ಕಾರ್ಮಿಕರ ಆತಂಕ
17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು