ವಿಧಾನ ಪರಿಷತ್, ಡಿ.12: ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸ್ಟ್ಯಾಂಪ್ (ತಿದ್ದುಪಡಿ) ವಿಧೇಯಕ-2023 (Karnataka Stamp Amendment Bill 2023) ಅನ್ನು ವಿಧಾನ ಪರಿಷತ್ನಲ್ಲಿ ಮಂಡಿಸಲಾಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದು, ನೋಂದಣಿ ದರ ಹೆಚ್ಚಾಗುತ್ತದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಅದು ನಿಜವಲ್ಲ. ಇದು ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧೇಯಕದಲ್ಲಿ 55 ಸ್ವರೂಪದ ಆರ್ಟಿಕಲ್ಗಳಿವೆ, ಅದರ ಕೆಳಗಡೆ 181 ಸಬ್ ಆರ್ಟಿಕಲ್ ಇವೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಒಟ್ಟು 20 ಸಾವಿರ ಕೋಟಿ ಆದಾಯ ಬರುತ್ತದೆ. ನಾನ್ ರಿಜಿಸ್ಟ್ರೇಬಲ್ನಿಂದ ನಮಗೆ ಕೇವಲ ಶೇಕಡಾ 10 ರಷ್ಟು ಆದಾಯ ಬರುತ್ತದೆ. ಒಟ್ಟು ಆದಾಯದ ಶೇ.10 ರಷ್ಟು ಮಾತ್ರ ನಮಗೆ ಇದರಿಂದ ಬರುತ್ತದೆ ಎಂದರು.
ಇದನ್ನೂ ಓದಿ: Belagavi Session: ರಾಜ್ಯದಲ್ಲಿ 26 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ: ಕೃಷ್ಣಬೈರೇಗೌಡ
ಯಾರಾದರೂ ಸ್ಟ್ಯಾಂಪ್ ಡ್ಯೂಟಿ ಕಟ್ಟಿದರೆ ಎನ್ಫೋರ್ಸೆಬಲ್ ಆಗುತ್ತದೆ. ಸ್ಟ್ಯಾಂಪ್ ಡ್ಯೂಟಿ ಕಟ್ಟದೇ ಇದ್ದರೆ ಕಾಂಟ್ರ್ಯಾಕ್ಟ್ಗೆ ಮಾನ್ಯತೆ ಇರುವುದಿಲ್ಲ ಎಂದು ವಿಧಾನ ಪರಿಷತ್ನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ