ಶಾಲೆಗೇ ಫುಲ್ ಮಾರ್ಕ್ಸ್​! ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಟ-ಪಾಠ-ಊಟ ಹೈಟೆಕ್

Full marks to school: ಕಲ್ಲಾವಿ ಹೊಸಹಳ್ಳಿ ಗ್ರಾಮ ಆಂಧ್ರ ಹಾಗೂ ತಮಿಳುನಾಡಿನ ಗಡಿ ಹಂಚಿಕೊಂಡಿರುವ ಕೆಜಿಎಫ್​ ತಾಲ್ಲೂಕಿಗೆ ಸೇರಿದ ಕುಗ್ರಾಮ. ಇಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆ ಇದೆ. ಗ್ರಾಮದ ಜನರ ಸಹಕಾರದೊಂದಿಗೆ ಈ ಶಾಲೆಯ ಶಿಕ್ಷಕರಾದ ಕೆ.ಎಸ್​. ಸುರೇಶ್​ ಹಾಗೂ ಎ.ಎಸ್​. ಸುನೀತ ಅವರು 17 ವರ್ಷಗಳಿಂದಲೂ ಈ ಶಾಲೆಯನ್ನು ಜೀವಂತಿಕೆಯಿಂದ ನಳನಳಿಸುವಂತೆ ಮಾಡಿದ್ದಾರೆ.

ಶಾಲೆಗೇ ಫುಲ್ ಮಾರ್ಕ್ಸ್​!  ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಟ-ಪಾಠ-ಊಟ ಹೈಟೆಕ್
ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಟ-ಪಾಠ-ಊಟ ಹೈಟೆಕ್
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on: Dec 12, 2023 | 7:45 PM

ಸರ್ಕಾರಿ ಶಾಲೆ ಅಂದ್ರೆ ಯಾವಾಗಲೂ ಮೂಗು ಮುರಿಯುವ ಜನರೇ ಹೆಚ್ಚು, ಯಾಕಂದ್ರೆ ಅಲ್ಲಿ ಸರ್ಕಾರಿ ಶಾಲೆಯಲ್ಲಿ ಯಾವುದೇ ವ್ಯವಸ್ಥೆಗಳಿರಲ್ಲ, ಶಾಲೆಗೆ ಮಕ್ಕಳು ಬರೋದಿಲ್ಲ, ಬಂದರೂ ಅಲ್ಲಿ ಮಕ್ಕಳು ಕಲಿಕೆ ತಕ್ಕಮಟ್ಟಿಗಷ್ಟೇ ಇರುತ್ತದೆ ಹೀಗೊಂದು ಭಾವನೆ ಸಹಜವಾಗಿರುತ್ತದೆ. ಇನ್ನು ಗಡಿ ಭಾಗದ ಶಾಲೆಗಳಲ್ಲಂತೂ ಹೇಳುವ ಮಾತೇ ಬೇಡ, ಸರ್ಕಾರಿ ಶಾಲೆಗೆ ಮಕ್ಕಳಿರಲಿ ಶಿಕ್ಷಕರು ಬರೋದೆ ಅನುಮಾನ ಎನ್ನುವ ಸ್ಥಿತಿ ಇರುತ್ತದೆ. ಆದರೆ ಇಂಥಾದೊಂದು ಎಲ್ಲಾ ಮಾತುಗಳಿಗೆ ವ್ಯತಿರಿಕ್ತ ಎನ್ನುವಂತೆ ಒಂದು ಹೈಟೆಕ್​ ಸರ್ಕಾರಿ ಶಾಲೆ (Education) ಇದೆ, ಆ ಶಾಲೆಯಲ್ಲಿ ಯಾವುದೂ ಕಡಿಮೆ ಇಲ್ಲಾ ಎಲ್ಲವೂ ನಾವಂದುಕೊಳ್ಳುವುದಕ್ಕಿಂತ ಹೆಚ್ಚಾಗಿಯೇ ಇದೆ ( Hi-tech government middle school ). ಅಷ್ಟಕ್ಕೂ ಯಾವುದು ಆ ಶಾಲೆ ಅಂತೀರಾ ಇಲ್ಲಿದೆ ಡೀಟೇಲ್ಸ್​ ನೋಡಿ..

ಹೊರಗಿನ ನೋಟದಲ್ಲಿ ಒಂದೊಳ್ಳೆ ಯಾವುದೋ ಹಸಿರು ಹೊದಿಕೆಯ ತೋಟದ ಮನೆಯಂತೆ ಬಾಸವಾಗುವ ಶಾಲೆಯ ಹೊರ ನೋಟ, ಇನ್ನು ಶಾಲೆ ಕಾಂಪೌಂಡ್​ ಸುತ್ತಲೂ ಬೃಹತ್ತಾದ ಮರಗಳು, ಇನ್ನು ಒಳಗಡೆ ನೀರಿನ ಕಾರಂಜಿಗಳು, ಶೋ ಗಿಡಗಳು, ಆವರಣದಲ್ಲಿ ಹತ್ತಾರು ಬಗೆಯ ತರಕಾರಿ ಗಿಡಗಳು, ಈ ಸುಂದರ ಹಸಿರು ವನದ ಮಧ್ಯೆ ಒಳ ಹೋದರೆ ಬೃಹತ್ತಾದ ಸರಸ್ವತಿಯ ಚಿತ್ರ. ಶಾಲೆ ಕೊಠಡಿಯೊಳಗೆ ಹೋದರೆ ಮಕ್ಕಳಿಗೆ ಕಲಿಯಲು ಬೇಕಾದ ಸುರಕ್ಷಿತ ಹಾಗೂ ಸುಂದರ ವ್ಯವಸ್ಥೆ ಮಕ್ಕಳೊಂದಿಗೆ ಬೆರೆತು ಪಾಠ ಕಲಿಸುತ್ತಿರುವ ಶಿಕ್ಷಕರು ಈ ಎಲ್ಲಾ ದೃಷ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್​ ತಾಲ್ಲೂಕಿನ ಕಲ್ಲಾವಿ ಹೊಸಹಳ್ಳಿ ಗ್ರಾಮದಲ್ಲಿ (Kallaavi Hosahalli in KGF).

Hi-tech government middle school in remote Kallaavi Hosahalli in KGF Taluk in Kolar District 3

ಕಲ್ಲಾವಿ ಹೊಸಹಳ್ಳಿ ಗ್ರಾಮ ಆಂಧ್ರ ಹಾಗೂ ತಮಿಳುನಾಡಿನ ಗಡಿ ಹಂಚಿಕೊಂಡಿರುವ ಕೆಜಿಎಫ್​ ತಾಲ್ಲೂಕಿಗೆ ಸೇರಿದ ಕುಗ್ರಾಮ, ಗ್ರಾಮದಲ್ಲಿ 50 ಮನೆಗಳಿದ್ದರೆ ಹೆಚ್ಚು. ಸರ್ಕಾರಿ ಮಾಧ್ಯಮಿಕ ಶಾಲೆ ಇದೆ ಈ ಶಾಲೆಗೆ ಸುಮಾರು 20 ಮಕ್ಕಳಿದ್ದಾರೆ, ಕೇವಲ ಕಲ್ಲಾವಿಹೊಸಹಳ್ಳಿ ಮತ್ತು ಕೃಷ್ಣಾಪುರ ಗ್ರಾಮಗಳ ಮಕ್ಕಳು ಈಶಾಲೆಗೆ ಬರುತ್ತಾರೆ. ಬರುವ ಮಕ್ಕಳಿಗೆ ಉತ್ತಮ ಕಲಿಯುವ ವಾತಾವರಣವಿದೆ. ಅಷ್ಟೇ ಅಲ್ಲದೆ ಶಾಲೆಯ ಹಿಂಭಾಗದಲ್ಲಿ ಮಕ್ಕಳು ಆಟವಾಡಲು ಖಾಸಗಿ ಶಾಲೆಯಲ್ಲಿ ಇರುವಂತೆ ಮಕ್ಕಳ ಆಟಿಕೆಗಳು ಇವೆ. ಹೀಗೆ ಸುಂದರ ವಾತಾವರಣದ ಸರ್ಕಾರಿ ಶಾಲೆ ಹಲವು ಖಾಸಗಿ ಶಾಲೆಗಳನ್ನು ನಾಚಿಸುವಂತಿದೆ.

ಸರಿಯಾದ ವ್ಯವಸ್ಥೆಗಳಿಲ್ಲದೆ, ಮಕ್ಕಳ ದಾಖಲಾತಿಗಳಿಲ್ಲದೆ ಸರ್ಕಾರಿ ಶಾಲೆಗಳಿಗೆ ಬಾಗಿಲು ಹಾಕುವ ಸ್ಥಿತಿ ಇದೆ ಆದರೆ ಈ ಕಲ್ಲಾವಿಹೊಸಹಳ್ಳಿ ಸರ್ಕಾರಿ ಮಾಧ್ಯಮಿಕ ಶಾಲೆ ಮಾತ್ರ ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳುವ ಜೊತೆಗೆ ಇವತ್ತಿನ ಕಾಲಕ್ಕೆ ತಕ್ಕಂತೆ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ. ಗ್ರಾಮದ ಜನರ ಸಹಕಾರದೊಂದಿಗೆ ಈ ಶಾಲೆಯ ಶಿಕ್ಷಕರಾದ ಕೆ.ಎಸ್​.ಸುರೇಶ್​ ಹಾಗೂ ಎ.ಎಸ್​.ಸುನೀತ ಅವರು ಕಳೆದ ಹದಿನೇಳು ವರ್ಷಗಳಿಂದಲೂ ಈ ಶಾಲೆಯ ಜೀವಂತಿಕೆಯನ್ನು ಉಳಿಸಲು ಶ್ರಮಿಸಿದ್ದಾರೆ. ಹಲವು ದಾನಿಗಳ ನೆರವಿನಿಂದ ಶಾಲೆಯನ್ನು ಸುಂದರವಾಗಿಟ್ಟುಕೊಂಡು ಬಂದಿದ್ದಾರೆ.

ಅಲ್ಲದ ಮಕ್ಕಳಿಗೆ ಉತ್ತಮ ಪಾಠ ಪ್ರವಚನ ಮಾಡುತ್ತಾ ಮಕ್ಕಳಿಗೆ ಇಂದಿನ ಕಾಲಕ್ಕೆ ಬೇಕಾದ ಇಂಗ್ಲೀಷ್​ ಕಲಿಕೆಯನ್ನು ಹೇಳಿಕೊಡುತ್ತಾ ಮಕ್ಕಳ ದಾಖಲಾತಿ ಕಡಿಮೆಯಾಗದಂತೆ. ಮಕ್ಕಳ ಪೊಷಕರು ಖಾಸಗಿ ಶಾಲೆಗ ವ್ಯಾಮೋಹಕ್ಕೆ ಮಾರು ಹೋಗದಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಹಿನ್ನೆಲೆ ಈ ಶಾಲೆ ಇವತ್ತಿಗೆ ವಿಶೇಷವಾಗಿದೆ. ಅದರ ಜೊತೆಗೆ ಈ ಶಾಲೆಯಲ್ಲಿ ಕೇವಲ ಮಕ್ಕಳಿಗೆ ಪಾಠವಷ್ಟೇ ಅಲ್ಲದೆ ಬದುಕಿಗೆ ಬೇಕಾದ ಕಾಯಕ ಪಾಠವನ್ನು ಹೇಳಿಕೊಡಲಾಗುತ್ತದೆ. ಶಾಲಾ ಆವರಣದಲ್ಲಿ ಸುಂದರ ಕೈತೋಟ ಮಾಡಿ ಅಲ್ಲಿ ಹತ್ತಾರು ಬಗೆಯ ತರಕಾರಿಗಳನ್ನು, ಸೊಪ್ಪು, ಹಾಗೂ ಆಯುರ್ವೇದ, ಔಷದೀಯ ಸಸ್ಯಗಳನ್ನು ಬೆಳೆಸುವ ಮೂಲಕ ಮಕ್ಕಳನ್ನು ಅದರಲ್ಲಿ ತೊಡಗಿಸಿ ಮಕ್ಕಳಿಗೆ ಪಾಠದ ಜೊತೆಗೆ ಪರಿಸರದ ಪಾಠವನ್ನು ಮಾಡಲಾಗುತ್ತದೆ.

ಇನ್ನು ಈ ಶಾಲೆಯ ಆವರಣದಲ್ಲೇ ಒಂದಷ್ಟು ಒಳ್ಳೆಯ ತರಕಾರಿಗಳನ್ನು ಬೆಳೆಯುವ ಹಿನ್ನೆಲೆಯಲ್ಲಿ ಶಾಲೆಯ ಬಿಸಿಯೂಟಕ್ಕೆ ಬೇಕಾದ ಎಲ್ಲಾ ರೀತಿಯ ತರಕಾರಿಗಳು ಇಲ್ಲೇ ಸಿಗುತ್ತವೆ. ಅಮೃತಬಳ್ಳಿ, ಬಸಲೆ ಸೊಪ್ಪು, ಒಂದೆಲಗ, ದಂಟಿನಸೊಪ್ಪು, ಪಾಲಕ್, ದಂಡಿನಸೊಪ್ಪು, ಬದನೆಕಾಯಿ, ಮೆಣಸಿನಕಾಯಿ ಸೇರಿ ಹಲವು ಬಗೆ ತರಕಾರಿಗಳು ಈಶಾಲೆ ಆವರಣದಲ್ಲಿವೆ. ಅದರ ಜೊತೆಗೆ ಈ ಎಲ್ಲಾ ತರಕಾರಿಗಳನ್ನು ಬೆಳೆಯುವಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲಾಗುತ್ತದೆ. ಇನ್ನು ರಾಜ್ಯದಲ್ಲೇ ಅಪರೂಪದಲ್ಲಿ ಅಪರೂಪ ಎನ್ನುವಂತೆ ಬಳ್ಳಿಯಲ್ಲಿ ಬೆಳೆಯುವ ಆಲೂಗಡ್ಡೆಯನ್ನು ಈಶಾಲೆಯಲ್ಲಿ ಬೆಳೆಯಲಾಗುತ್ತದೆ.

ವಿಶೇಷ ತಳಿಯ ಬಳ್ಳಿಯಲ್ಲಿ ಬೆಳೆಯುವ ಆಲೂಗಡ್ಡೆ ಬಳ್ಳಿ ಶಾಲೆಯ ಮರಗಳಿಗೆ ಹಬ್ಬದಿದ್ದು ಅದು ನಿತ್ಯ ಮಕ್ಕಳ ಬಿಸಿಯೂಟಕ್ಕೆ ಇದ್ದೇ ಇರುತ್ತದೆ. ಹೀಗೆ ಒಂದು ಶಾಲೆಯಲ್ಲಿ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುವ ಮೂಲಕ ಕುಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸುವಲ್ಲಿ ಇಲ್ಲಿನ ಶಿಕ್ಷಕ ವರ್ಗದ ಪ್ರಯತ್ನಕ್ಕೆ ಮೆಚ್ಚಲೇಬೇಕು. ಇನ್ನು ಈಶಾಲೆಗೆ ಹಸಿರು ಶಾಲೆ, ಸೇರಿದಂತೆ ಹಲವು ಪ್ರಶಸ್ತಿಗಳು ಸಿಕ್ಕಿದ್ದು ಇನ್ನಷ್ಟು ಪ್ರೋತ್ಸಾಹದ ಜೊತೆಗೆ ಸರ್ಕಾರದ ಒಂದಷ್ಟು ಅನುದಾನ ಸಿಕ್ಕಿದ್ದೇ ಆದಲ್ಲಿ ಈ ಸರ್ಕಾರಿ ಶಾಲೆ ಇನ್ನಷ್ಟು ಸರ್ಕಾರಿ ಶಾಲೆಗಳಿಗೆ ಮಾದರಿಯಾಗೋದರಲ್ಲಿ ಅನುಮಾನವಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್