ಚಿನ್ನದ ನಾಡಿನ ಕರಾಟೆ ಲೇಡಿ! ಕೋಲಾರದ ರುಮಾನಾ ಕೌಸರ್ ಕೊರಳಿಗೆ ಚಿನ್ನದ ಪದಕ, ತಂದೆ ಆಟೋ ಚಾಲಕ
ಸಿಂಗಾಪೂರ್ ಸೇರಿದಂತೆ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿರುವ ರುಮಾನಾ ಹಲವು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಪ್ರಸ್ತುತ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 3,000 ಹೆಣ್ಣು ಮಕ್ಕಳಿಗೆ ಓಬವ್ವ ಆತ್ಮ ರಕ್ಷಣೆ ಕರಾಟೆ ತರಬೇತಿಯನ್ನು ನೀಡುತ್ತಿದ್ದಾರೆ
ಕರಾಟೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಚಿನ್ನದ ಪದಕಕ್ಕೆ ರುಮಾನಾ ಕೌಸರ್ ಭಾಜನರಾಗಿದ್ದಾರೆ. ಕರಾಟೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಅಂತರಾಷ್ಟ್ರೀಯ ಕರಾಟೆ ಪಟು (karate lady) ರುಮಾನಾ ಕೌಸರ್ ಇಂಡಿಯಾ ಬುಕ್ ಆಪ್ ರೆಕಾರ್ಡ್ 23-24 ರ ಚಿನ್ನದ ಪದಕಕ್ಕೆ (gold medal) ಭಾಜನರಾಗಿದ್ದಾರೆ. ಕೋಲಾರದ ಪ್ರಶಾಂತ ನಗರದ ವಾಸಿಯಾದ ರುಮಾನಾ ಕೌಸರ್ ತಂದೆ ರಶೀದ್ ಅಹ್ಮದ್ ಆಟೋ ಚಾಲಕರಾಗಿದ್ದು (father auto driver) ತಾಯಿ -ಬಾನಾ ಧರ್ಮಸ್ಥಳ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಿಂಗಾಪೂರ್ ಸೇರಿದಂತೆ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿರುವ ರುಮಾನಾ ಹಲವು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಪ್ರಸ್ತುತ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 3,000 ಹೆಣ್ಣು ಮಕ್ಕಳಿಗೆ ಓಬವ್ವ ಆತ್ಮ ರಕ್ಷಣೆ ಕರಾಟೆ ತರಬೇತಿಯನ್ನು ನೀಡುತ್ತಿದ್ದಾರೆ ರುಮಾನ್ ಕೌಸರ್. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಇವರು ತಮ್ಮದಾಗಿಸಿಕೊಂಡು ಕರಾಟೆಯಲ್ಲಿ ಮತ್ತಷ್ಟು ಸಾಧನೆ ಮಾಡುವ ಕನಸು ಕಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ