ಕರ್ನಾಟಕ ಸರ್ಕಾರವು ನವೆಂಬರ್ 30ನೇ ತಾರೀಕಿನಂದು 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ಸರ್ಕಾರಿ ಸಿಬ್ಬಂದಿಗೆ ರಜಾ ಇರುತ್ತದೆ. ಅದನ್ನು ಹೊರತುಪಡಿಸಿದಂತೆ ಇರುವ ರಜಾ ದಿನಗಳು ಈ ಕೆಳಗಿನಂತಿವೆ:
15-1-2022: ಶನಿವಾರ- ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ ಹಬ್ಬ
26-1-2022: ಬುಧವಾರ- ಗಣರಾಜ್ಯೋತ್ಸವ
1-3-202022: ಮಂಗಳವಾರ- ಮಹಾ ಶಿವರಾತ್ರಿ
2-4-2022: ಶನಿವಾರ- ಯುಗಾದಿ ಹಬ್ಬ
14-4-20222: ಗುರುವಾರ- ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ
15-4-2022: ಶುಕ್ರವಾರ- ಗುಡ್ಫ್ರೈಡೇ
3-5-2022: ಮಂಗಳವಾರ- ಬಸವೇಶ್ವರ ಜಯಂತಿ/ಅಕ್ಷಯ ತೃತೀಯ, ಖುತುಬ್-ಎ-ರಂಜಾನ್
9-8-2022: ಬುಧವಾರ- ಮೊಹರಂ ಕಡೇ ದಿನ
15-8-2022: ಸೋಮವಾರ- ಸ್ವಾತಂತ್ರ್ಯ ದಿನಾಚರಣೆ
31-8-2022: ಬುಧವಾರ- ವರಸಿದ್ಧಿ ವಿನಾಯಕ ವ್ರತ
4-10-2022: ಮಂಗಳವಾರ- ಮಹಾನವಮಿ, ಆಯುಧಪೂಜೆ
5-10-2022: ಬುಧವಾರ- ವಿಜಯದಶಮಿ
24-10-2022: ಸೋಮವಾರ- ನರಕ ಚತುರ್ದಶಿ
26-10-2022: ಬುಧವಾರ- ಬಲಿಪಾಡ್ಯಮಿ, ದೀಪಾವಳಿ
1-11-2022: ಮಂಗಳವಾರ- ಕನ್ನಡ ರಾಜ್ಯೋತ್ಸವ
11-11-2022: ಶುಕ್ರವಾರ- ಕನಕದಾಸ ಜಯಂತಿ
ಅಂದಹಾಗೆ ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಕಾರ್ಮಿಕ ದಿನಾಚರಣೆ (ಮೇ 1), ಬಕ್ರೀದ್ (ಜುಲೈ 10), ಮಹಾಲಯ ಅಮಾವಾಸ್ಯೆ (ಸೆಪ್ಟೆಂಬರ್ 25), ಗಾಂಧೀ ಜಯಂತಿ (ಅಕ್ಟೋಬರ್ 2), ಮಹರ್ಷಿ ವಾಲ್ಮೀಕಿ ಜಯಂತಿ/ ಈದ್ ಮಿಲಾದ್ (ಅಕ್ಟೋಬರ್ 9) ಮತ್ತು ಕ್ರಿಸ್ಮಸ್ (ಡಿಸೆಂಬರ್ 25) ಒಳಗೊಂಡಿಲ್ಲ). ಮುಸಲ್ಮಾನರಿಗೆ ಆಯಾ ನಿಗದಿತ ದಿನಾಂಕದ ಬದಲಿಗೆ ಬೇರೆ ದಿನ ಹಬ್ಬ ಬಂದಲ್ಲಿ ಆ ದಿನ ರಜಾ ನೀಡಬಹುದು. ಇನ್ನು ಸೆಪ್ಟೆಂಬರ್ 3 ಕೈಲ್ ಮುಹೂರ್ತ ಹಾಗೂ ಡಿಸೆಂಬರ್ 8 ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯ ಆಗುವಂತೆ ಸ್ಥಳೀಯ ಸಾರ್ವತ್ರಿಕ ರಜಾ ಘೋಷಣೆ ಮಾಡಲಾಗಿದೆ. ಇವೆಲ್ಲವನ್ನೂ ಹೊರತುಪಡಿಸಿ ಪರಿಮಿತ ರಜಾ, ಅಂದರೆ ರಿಸ್ಟ್ರಿಕ್ಟೆಡ್ ಹಾಲಿಡೇ 22 ದಿನಗಳು ಬರುತ್ತವೆ.
ಇದನ್ನೂ ಓದಿ: Bank Holidays in December 2021: ಡಿಸೆಂಬರ್ನಲ್ಲಿ ಬ್ಯಾಂಕ್ಗಳಿಗೆ ಒಟ್ಟು ಎಷ್ಟು ದಿನ ರಜಾ ಗೊತ್ತೆ?
Published On - 8:34 pm, Wed, 1 December 21