ಬೆಂಗಳೂರು: ಕೊರೊನಾ ಸೋಂಕು ಆಡಳಿತ ವರ್ಗಕ್ಕೆ ಒಂದಷ್ಟು ಪಾಠಗಳನ್ನೂ ಕಲಿಸತೊಡಗಿದೆ. ಕೊರೊನಾ ಲಾಕ್ ಡೌ್ನ್ನಿಂದಾಗಿ ಬಸವಳಿದಿರುವ ಆರ್ಥಿಕತೆಯನ್ನು ಸರಿದೂಗಿಸಲು ಆರ್ಥಿಕ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಈ ಚಿಂತನೆಯ ಭಾಗವಾಗಿ ಸರ್ಕಾರದಲ್ಲಿನ ಕೆಲ ಇಲಾಖೆಗಳನ್ನು ವಿಲೀನ ಮಾಡುವುದು, ಹಲವು ಹುದ್ದೆಗಳನ್ನು ರದ್ದುಪಡಿಸಲೂ ಸಹ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಈ ಕುರಿತು ಸಚಿವ ಸಂಪುಟ ಉಪ ಸಮಿತಿ ಮೊದಲ ಸಭೆಯೂ ನಡೆದಿದೆ. ಸರ್ಕಾರಕ್ಕೆ ವೆಚ್ಚ ತರುತ್ತಿರುವ ಹುದ್ದೆಗಳನ್ನು ರದ್ದು ಮಾಡುವುದು, ಇಲಾಖೆಗಳನ್ನು ವಿಲೀನ ಮಾಡುವುದರ ಬಗ್ಗೆ ಚಿಂತಿಸಲಾಗಿದೆ.
ಜನತೆ ಶುಭಸ್ಯ ಶೀಘ್ರಂ ಅನ್ನುತ್ತಿದ್ದಾರೆ
ಕೃಷಿ ಇಲಾಖೆ ಜಂಟಿ ನಿರ್ದೇಶಕ ಹುದ್ದೆ, ಪ್ರಾದೇಶಿಕ ಆಯುಕ್ತ ಹುದ್ದೆ ಹೀಗೆ ಒಂದೇ ಇಲಾಖೆಯಲ್ಲಿರುವ ಎರಡೆರಡು ಪ್ರಧಾನ ಕಾರ್ಯದರ್ಶಿ ಹುದ್ದೆಗಳು, ಎರಡೆರಡು ಆಯುಕ್ತ ಹುದ್ದೆಗಳು, ಗ್ರಾ.ಪಂ.ಗಳಲ್ಲಿ ಹೆಚ್ಚುವರಿ ಸಿಬ್ಬಂದಿ.. ಹೀಗೆ ಅನಗತ್ಯ ಹುದ್ದೆಗಳನ್ನು ರದ್ದು ಮಾಡಲು ಚಿಂತನೆ ನಡೆದಿದೆ.
ಸರ್ವೆ ಮಾಡಿ ವರದಿ ನೀಡಲು 3 ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಹೆಚ್ಚುವರಿ ಹುದ್ದೆ, ಸಿಬ್ಬಂದಿ ರದ್ದು, ಇಲಾಖೆಗಳ ವಿಲೀನದಿಂದ ಸರ್ಕಾರಕ್ಕೆ ₹ 2 ಸಾವಿರ ಕೋಟಿ ಉಳಿತಾಯವಾಗುವ ಬಗ್ಗೆ ಅಂದಾಜು ಮಾಡಲಾಗಿದೆ. ಇದನ್ನು ಕೇಳಿದ ಜನತೆ ಶುಭಸ್ಯ ಶೀಘ್ರಂ ಅನ್ನುತ್ತಿದ್ದಾರೆ.
Published On - 10:35 am, Fri, 1 May 20