ಸಾಂಸ್ಕೃತಿಕ ನಗರಿಯಿಂದ ಕೊನೆಗೂ ಕೇಳಿ ಬಂತು ಸಮಾಧಾನಕರ ಸಂಗತಿ
ಮೈಸೂರು: ಸಾಂಸ್ಕೃತಿಕನಗರಿ ಮೈಸೂರು ಕರ್ನಾಟಕದಲ್ಲೇ ಎರಡನೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆ. ಅದರಲ್ಲೂ ಜುಬಿಲೆಂಟ್ಸ್ ಕಾರ್ಖಾನೆಯ ನಂಜು ಜಿಲ್ಲೆಯನ್ನೇ ರೆಡ್ ಜೋನ್ಗೆ ತಂದು ನಿಲ್ಲಿಸಿತ್ತು. ಆದರೆ ಈಗ ಮೈಸೂರಿನಿಂದ ಸಮಾಧಾನಕರ ಸುದ್ದಿ ಹೊರಬಿದ್ದಿದೆ. ಇಡೀ ಮೈಸೂರಿಗೆ ಸೋಂಕು ಹಬ್ಬಿಸಿದ್ದವನ ಏರಿಯಾ ಈಗ ಕೊರೊನಾ ಮುಕ್ತವಾಗಿದೆ. ಜುಬಿಲೆಂಟ್ಸ್ ಕಾರ್ಖಾನೆಯ ಮೊದಲ ಸೋಂಕಿತನ ಏರಿಯಾದಲ್ಲೀಗ ಕೊರೊನಾ ಆತಂಕ ಕಮ್ಮಿಯಾಗಿದೆ. P52 ವಾಸವಿದ್ದ ಬಡಾವಣೆಗೆ ವಿಧಿಸಿದ್ದ ನಿಷೇಧಾಜ್ಞೆಯನ್ನು ವಾಪಸ್ ಪಡೆಯಲಾಗಿದೆ. ಸರ್ದಾರ್ ವಲ್ಲಭ ಬಾಯಿ ಪಟೇಲ್ ನಗರಕ್ಕೆ ವಿಧಿಸಿದ್ದ ನಿರ್ಬಂಧವನ್ನು […]
ಮೈಸೂರು: ಸಾಂಸ್ಕೃತಿಕನಗರಿ ಮೈಸೂರು ಕರ್ನಾಟಕದಲ್ಲೇ ಎರಡನೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆ. ಅದರಲ್ಲೂ ಜುಬಿಲೆಂಟ್ಸ್ ಕಾರ್ಖಾನೆಯ ನಂಜು ಜಿಲ್ಲೆಯನ್ನೇ ರೆಡ್ ಜೋನ್ಗೆ ತಂದು ನಿಲ್ಲಿಸಿತ್ತು. ಆದರೆ ಈಗ ಮೈಸೂರಿನಿಂದ ಸಮಾಧಾನಕರ ಸುದ್ದಿ ಹೊರಬಿದ್ದಿದೆ.
ಇಡೀ ಮೈಸೂರಿಗೆ ಸೋಂಕು ಹಬ್ಬಿಸಿದ್ದವನ ಏರಿಯಾ ಈಗ ಕೊರೊನಾ ಮುಕ್ತವಾಗಿದೆ. ಜುಬಿಲೆಂಟ್ಸ್ ಕಾರ್ಖಾನೆಯ ಮೊದಲ ಸೋಂಕಿತನ ಏರಿಯಾದಲ್ಲೀಗ ಕೊರೊನಾ ಆತಂಕ ಕಮ್ಮಿಯಾಗಿದೆ. P52 ವಾಸವಿದ್ದ ಬಡಾವಣೆಗೆ ವಿಧಿಸಿದ್ದ ನಿಷೇಧಾಜ್ಞೆಯನ್ನು ವಾಪಸ್ ಪಡೆಯಲಾಗಿದೆ.
ಸರ್ದಾರ್ ವಲ್ಲಭ ಬಾಯಿ ಪಟೇಲ್ ನಗರಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಇದರ ಜೊತೆಗೆ ಯರಗನಹಳ್ಳಿ, ವಿಜಯನಗರ 2ನೇ ಹಂತ, ಟೀಚರ್ಸ್ ಕಾಲೋನಿ ಸೇರಿದಂತೆ ಮೈಸೂರಿನ ಮೂರು ಏರಿಯಾಗಳು ಕಂಟೈನ್ಮೆಂಟ್ ಝೋನ್ನಿಂದ ಮುಕ್ತವಾಗಿವೆ. ಕಳೆದ 28 ದಿನಗಳಿಂದ ಈ ಝೋನ್ಗಳಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಆದೇಶ ವಾಪಸ್ ಪಡೆದಿದ್ದು, ಮೈಸೂರು ನಗರದಲ್ಲಿ ಕಂಟೈನ್ಮೆಂಟ್ ಝೋನ್ಗಳ ಸಂಖ್ಯೆ 8ಕ್ಕೆ ಇಳಿದಿದೆ.
Published On - 11:12 am, Fri, 1 May 20