Corona ಬಂದ್ಮೇಲೆ ಸಾರಿಗೆ ಇಲಾಖೆಗೆ ಇದುವರೆಗೂ 1800 ಕೋಟಿ ರೂ ಹಾನಿ!

|

Updated on: May 29, 2020 | 4:41 PM

ಹಾವೇರಿ: ಕೊರೊನಾ ಸಂಕಷ್ಟ ಬಂದ್ಮೇಲೆ ರಾಜ್ಯ ಸಾರಿಗೆ ಇಲಾಖೆಯು ಭಾರಿ ನಷ್ಟ ಅನುಭವಿಸ್ತಿದೆ. ಸಾರಿಗೆ ಇಲಾಖೆಗೆ ಇದುವರೆಗೂ 1,800 ಕೋಟಿ ರೂಪಾಯಿಯಷ್ಟು ಹಾನಿಯಾಗಿದೆ. ಏನೇ ಹಾನಿಯಾದರೂ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಇನ್ನು, ಅಂತರ ಕಾಯ್ದುಕೊಂಡು ಹೋಗೋದ್ರಿಂದ ಬಹಳ ಹಾನಿಯಾಗಿದೆ. ಇಂದಿನ ಸಭೆಯಲ್ಲಿ ಅಧಿಕಾರಿಗಳು ಇದನ್ನು ಗಮನಕ್ಕೆ ತಂದಿದ್ದಾರೆ. ಕೇಂದ್ರದ ಹೊಸ ಮಾರ್ಗಸೂಚಿ ಬಿಡುಗಡೆಯಾಗುವುದಕ್ಕೆ ಕಾಯುತ್ತಿದ್ದೇವೆ. ಅದು ಬಂದ ಬಳಿಕ ಸಂಪುಟ ಸಭೆಯಲ್ಲಿ ಸಿಎಂ ಜತೆ ಚರ್ಚಿಸಿ ಮುಂದಿನ ತೀರ್ಮಾನ […]

Corona ಬಂದ್ಮೇಲೆ ಸಾರಿಗೆ ಇಲಾಖೆಗೆ ಇದುವರೆಗೂ 1800 ಕೋಟಿ ರೂ ಹಾನಿ!
Follow us on

ಹಾವೇರಿ: ಕೊರೊನಾ ಸಂಕಷ್ಟ ಬಂದ್ಮೇಲೆ ರಾಜ್ಯ ಸಾರಿಗೆ ಇಲಾಖೆಯು ಭಾರಿ ನಷ್ಟ ಅನುಭವಿಸ್ತಿದೆ. ಸಾರಿಗೆ ಇಲಾಖೆಗೆ ಇದುವರೆಗೂ 1,800 ಕೋಟಿ ರೂಪಾಯಿಯಷ್ಟು ಹಾನಿಯಾಗಿದೆ. ಏನೇ ಹಾನಿಯಾದರೂ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಇನ್ನು, ಅಂತರ ಕಾಯ್ದುಕೊಂಡು ಹೋಗೋದ್ರಿಂದ ಬಹಳ ಹಾನಿಯಾಗಿದೆ. ಇಂದಿನ ಸಭೆಯಲ್ಲಿ ಅಧಿಕಾರಿಗಳು ಇದನ್ನು ಗಮನಕ್ಕೆ ತಂದಿದ್ದಾರೆ. ಕೇಂದ್ರದ ಹೊಸ ಮಾರ್ಗಸೂಚಿ ಬಿಡುಗಡೆಯಾಗುವುದಕ್ಕೆ ಕಾಯುತ್ತಿದ್ದೇವೆ. ಅದು ಬಂದ ಬಳಿಕ ಸಂಪುಟ ಸಭೆಯಲ್ಲಿ ಸಿಎಂ ಜತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.