ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರಿಂದ ಕೇಸ್‌ ದಾಖಲು

ತಿರುವನಂತಪುರಂ: ಮಲಪ್ಪುರಂ ಜಿಲ್ಲೆ ಕುಟ್ಟಿಪುರಂನಲ್ಲಿ ಘಟನೆ ಸಂಬಂಧ ಟ್ವೀಟ್ ಮಾಡಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರಿಂದ ಕೇಸ್‌ ದಾಖಲಾಗಿದೆ. ಶೋಭಾ ಮಾಡಿದ್ದ ಟ್ವೀಟ್‌ ವಿಚಾರವಾಗಿ ಮೊಕದ್ದಮೆ ದಾಖಲು ಮಾಡಿದ್ದಾರೆ. ಸಿಎಎ ಬೆಂಬಲ ನೀಡಿದ್ದ ಮಲಪ್ಪುರಂನ ಹಿಂದೂ ಕುಟುಂಬಗಳಿಗೆ ಕೇರಳ ಸರ್ಕಾರ ನೀರು ಪೂರೈಕೆಗೆ ನಿರಾಕರಿಸಿದೆ. ಕೇರಳ ಮತ್ತೊಂದು ಕಾಶ್ಮೀರ ಆಗುವತ್ತಾ ಹೆಜ್ಜೆ ಇಡುತ್ತಿದೆ ಎಂದು ಜನವರಿ 22ರಂದು ಶೋಭಾ ಕರಂದ್ಲಾಜೆ ಟ್ವೀಟ್‌ ಮಾಡಿದ್ದರು. ಈ ವಿಚಾರವಾಗಿ ಸಂಸದೆ ವಿರುದ್ಧ ದೂರು ದಾಖಲಾಗಿದೆ. ಸುಪ್ರೀಂಕೋರ್ಟ್‌ನ […]

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರಿಂದ ಕೇಸ್‌ ದಾಖಲು
ಸಾಧು ಶ್ರೀನಾಥ್​

Updated on: Jan 24, 2020 | 9:19 AM

ತಿರುವನಂತಪುರಂ: ಮಲಪ್ಪುರಂ ಜಿಲ್ಲೆ ಕುಟ್ಟಿಪುರಂನಲ್ಲಿ ಘಟನೆ ಸಂಬಂಧ ಟ್ವೀಟ್ ಮಾಡಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರಿಂದ ಕೇಸ್‌ ದಾಖಲಾಗಿದೆ. ಶೋಭಾ ಮಾಡಿದ್ದ ಟ್ವೀಟ್‌ ವಿಚಾರವಾಗಿ ಮೊಕದ್ದಮೆ ದಾಖಲು ಮಾಡಿದ್ದಾರೆ.

ಸಿಎಎ ಬೆಂಬಲ ನೀಡಿದ್ದ ಮಲಪ್ಪುರಂನ ಹಿಂದೂ ಕುಟುಂಬಗಳಿಗೆ ಕೇರಳ ಸರ್ಕಾರ ನೀರು ಪೂರೈಕೆಗೆ ನಿರಾಕರಿಸಿದೆ. ಕೇರಳ ಮತ್ತೊಂದು ಕಾಶ್ಮೀರ ಆಗುವತ್ತಾ ಹೆಜ್ಜೆ ಇಡುತ್ತಿದೆ ಎಂದು ಜನವರಿ 22ರಂದು ಶೋಭಾ ಕರಂದ್ಲಾಜೆ ಟ್ವೀಟ್‌ ಮಾಡಿದ್ದರು. ಈ ವಿಚಾರವಾಗಿ ಸಂಸದೆ ವಿರುದ್ಧ ದೂರು ದಾಖಲಾಗಿದೆ.

ಸುಪ್ರೀಂಕೋರ್ಟ್‌ನ ವಕೀಲ, ಮಲಪ್ಪುರಂ ನಿವಾಸಿ ಸುಭಾಷ್ ಚಂದ್ರನ್ ನೀಡಿದ್ದ ದೂರು ಆಧರಿಸಿ, ಧರ್ಮ ಆಧಾರಿತವಾಗಿ 2 ಗುಂಪುಗಳ ಮಧ್ಯೆ ದ್ವೇಷಕ್ಕೆ ಪ್ರಚೋದನೆ ನೀಡಿರುವ ಆರೋಪದಡಿ ಕುಟ್ಟಿಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us