ಶ್ರೀರಾಮುಲುಗೆ ದೂರು ನೀಡಲು ಬಂದ ವ್ಯಕ್ತಿಗೆ ಆಸ್ಪತ್ರೆ ಸಿಬ್ಬಂದಿ ತಡೆ
ಚಿತ್ರದುರ್ಗ: ಆರೋಗ್ಯ & ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಜಿಲ್ಲಾಸ್ಪತ್ರೆಗೆ ತಡರಾತ್ರಿ ಭೇಟಿ ನೀಡಿದ್ದಾರೆ. ಈ ವೇಳೆ ಶ್ರೀರಾಮುಲುಗೆ ಭ್ರಷ್ಟಾಚಾರ ಮತ್ತು ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ದೂರು ನೀಡಲು ಬಂದ ಸಿದ್ದೇಶ್ ಎಂಬ ವ್ಯಕ್ತಿಗೆ ಆಸ್ಪತ್ರೆ ಸಿಬ್ಬಂದಿ ತಡೆದಿದ್ದಾರೆ. ಕೆಲದಿನಗಳ ಹಿಂದೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಸಿದ್ದೇಶ್ ತಂದೆ ವೀರಭದ್ರಪ್ಪ(61) ಮೃತಪಟ್ಟಿದ್ದರು. ಅಲ್ಲದೆ ಸೂಕ್ತ ಚಿಕಿತ್ಸೆ ನೀಡದ ಕಾರಣ ಸಿದ್ದೇಶ್ ಪತ್ನಿ ಶೈಲಾ(28) ಗರ್ಭದಲ್ಲೇ ಮಗು ಮೃತಪಟ್ಟಿತ್ತು ಎಂಬ ಆರೋಪ ಕೂಡ ಇದೆ. ಈ ಕುರಿತು ದೂರು […]
ಚಿತ್ರದುರ್ಗ: ಆರೋಗ್ಯ & ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಜಿಲ್ಲಾಸ್ಪತ್ರೆಗೆ ತಡರಾತ್ರಿ ಭೇಟಿ ನೀಡಿದ್ದಾರೆ. ಈ ವೇಳೆ ಶ್ರೀರಾಮುಲುಗೆ ಭ್ರಷ್ಟಾಚಾರ ಮತ್ತು ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ದೂರು ನೀಡಲು ಬಂದ ಸಿದ್ದೇಶ್ ಎಂಬ ವ್ಯಕ್ತಿಗೆ ಆಸ್ಪತ್ರೆ ಸಿಬ್ಬಂದಿ ತಡೆದಿದ್ದಾರೆ. ಕೆಲದಿನಗಳ ಹಿಂದೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಸಿದ್ದೇಶ್ ತಂದೆ ವೀರಭದ್ರಪ್ಪ(61) ಮೃತಪಟ್ಟಿದ್ದರು.
ಅಲ್ಲದೆ ಸೂಕ್ತ ಚಿಕಿತ್ಸೆ ನೀಡದ ಕಾರಣ ಸಿದ್ದೇಶ್ ಪತ್ನಿ ಶೈಲಾ(28) ಗರ್ಭದಲ್ಲೇ ಮಗು ಮೃತಪಟ್ಟಿತ್ತು ಎಂಬ ಆರೋಪ ಕೂಡ ಇದೆ. ಈ ಕುರಿತು ದೂರು ನೀಡಲು ಬಂದ ಸಿದ್ದೇಶ್ನನ್ನು ಆಸ್ಪತ್ರೆ ಸಿಬ್ಬಂದಿ ತಡೆದಿದ್ದಾರೆ. ನಂತರ ಮಾಧ್ಯಮಗಳ ಎದುರು ಆಸ್ಪತ್ರೆಯ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದ ಬಳಿಕ ಆಸ್ಪತ್ರೆಯ ಸಿಬ್ಬಂದಿ ಸಚಿವ ಬಿ.ಶ್ರೀರಾಮುಲು ಭೇಟಿ ಮಾಡಿಸಿದ್ದಾರೆ. ಈ ವೇಳೆ ಸಿದ್ದೇಶ್ ಸಿಬ್ಬಂದಿ ವಿರುದ್ಧ ಸಚಿವರಿಗೆ ದೂರು ನೀಡಿದ್ದಾರೆ.