ಕೊಪ್ಪಳ: ಜಿಲ್ಲೆಯಲ್ಲಿ ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಸುಮಾರು 3 ಲಕ್ಷ ವ್ಯವಹಾರ ನಡೆದಿರುವುದು ಟಿವಿ9ಗೆ ಕೊಪ್ಪಳ ಜಿಲ್ಲಾಡಳಿತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಜಿಲ್ಲೆಯ ಗಂಗಾವತಿಯ ಎರಡು ಆಸ್ಪತ್ರೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದರು. ಗಂಗಾವತಿಯ ಸಿ.ಟಿ.ಆಸ್ಪತ್ರೆ ಮತ್ತು ಚಂದ್ರಪ್ಪ ಆಸ್ಪತ್ರೆ ಮೇಲೆ ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ವೇಳೆ ರೆಮ್ಡಿಸಿವಿರ್ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದ ಮಾಹಿತಿ ಬಯಲಾಗಿತ್ತು.
ರೆಮ್ಡಿಸಿವಿರ್ ಮಾರಾಟ ವಿಚಾರಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ರಾಧಾಕೃಷ್ಣ, ಅಭಿಷೇಕ್, ಮಣಿಕಂಠ, ಶಂಕರ್ ಮತ್ತು ಅಕ್ಷಯ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಕೆ.ಎಸ್.ಆಸ್ಪತ್ರೆಯ ಪವನ್ ಕಿಂಗ್ಪಿನ್ ಬಗ್ಗೆ ಮಾಹಿತಿ ತಿಳಿದುಬಂದಿದೆ. ಪವನ್ ಫೋನ್ ಪರಿಶೀಲನೆ ವೇಳೆ ಸುಮಾರು 3 ಲಕ್ಷ ರೂ. ಹಣದ ವ್ಯವಹಾರ ಬಯಲಾಗಿದೆ. ಆರು ಜನರ ನಡುವೆ ಫೋನ್ ಪೇ, ಗೂಗಲ್ ಪೇ ಮೂಲಕ ಮೂರು ಲಕ್ಷದ ವ್ಯವಹಾರ ನಡೆದಿರುವುದು ಜಿಲ್ಲಾಡಳಿತದ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ರೆಮ್ಡಿಸಿವಿರ್ ಅಕ್ರಮ ಮಾರಾಟ; ಆರೋಪಿಗಳು ಅರೆಸ್ಟ್
ಬೆಂಗಳೂರು: ರೆಮ್ಡಿಸಿವಿರ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅರೋಪಿಗಳನ್ನು ಬೆಂಗಳೂರಿನ ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಲ್ತೇಶ್, ಷಣ್ಮುಖಯ್ಯ ಸ್ವಾಮಿ ಬಂಧಿತ ಆರೋಪಿಗಳು. ಹೆಣ್ಣೂರು ಬಳಿ ಅಧಿಕ ಬೆಲೆಗೆ ಮಾರಾಟ ಮಾಡುವಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸದ್ಯ ಈ ಪ್ರಕರಣ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಅರೋಪಿಗಳಿಂದ ಹದಿನೇಳು ರೆಮ್ಡಿಸಿವಿರ್ ಡೋಸ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ
ಕೊವಿಡ್ ನಿರ್ವಹಣೆ: ತಾಂತ್ರಿಕ ಸಮಸ್ಯೆಯಿಂದಾಗಿ ವಿಚಾರಣೆ ಮೇ 13ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್
(known from the district administration sources that there is a sale of Remdesivir in 3 lakhs business at koppal)