ಕೊರೊನಾ ಆರ್ಭಟ, ಪ್ರವಾಸಿಗರ ಚೆಲ್ಲಾಟ, ಆತಂಕಗೊಂಡ ಕೊಡಗಿನ ಕಲಿಗಳು ಮಾಡಿದ್ದೇನು..?
ಮಡಿಕೇರಿ: ಇದುವರೆಗೂ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಕೊರೊನಾ ಸೋಂಕು ಈಗ ಗ್ರಾಮೀಣ ಭಾಗಕ್ಕೂ ಹಬ್ಬುತ್ತಿದೆ. ಅದ್ರಲ್ಲೂ ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ಕೊರೊನಾ ಆತಂಕದಲ್ಲಿರುವ ಸ್ಳಳೀಯರು ಹೊರ ಜಿಲ್ಲೆಯಿಂದ ಬರೋ ಪ್ರವಾಸಿಗರಿಗೆ ಬ್ರೇಕ್ ಹಾಕೋಕೆ ಮುಂದಾಗಿದ್ದಾರೆ. ಟ್ರೆಕ್ಕಿಂಗ್ ನೆಪದಲ್ಲಿ ಮೋಜು ಮಸ್ತಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಮಲ್ಲಳ್ಳಿ ಜಲಪಾತ ವೀಕ್ಷಿಸಲು, ಬೆಟ್ಟದ ಮೇಲೆ ಟ್ರೆಕ್ಕಿಂಗ್ ಮಾಡುವ ನೆಪದಲ್ಲಿ ಹೋಂ ಸ್ಟೇ ಬಂದ್ ಆಗಿದ್ರೂ, ರೆಸಾರ್ಟ್‌ಗಳಲ್ಲಿ ತಂಗಿ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿದ್ದಾರೆ. […]

ಮಡಿಕೇರಿ: ಇದುವರೆಗೂ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಕೊರೊನಾ ಸೋಂಕು ಈಗ ಗ್ರಾಮೀಣ ಭಾಗಕ್ಕೂ ಹಬ್ಬುತ್ತಿದೆ. ಅದ್ರಲ್ಲೂ ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ಕೊರೊನಾ ಆತಂಕದಲ್ಲಿರುವ ಸ್ಳಳೀಯರು ಹೊರ ಜಿಲ್ಲೆಯಿಂದ ಬರೋ ಪ್ರವಾಸಿಗರಿಗೆ ಬ್ರೇಕ್ ಹಾಕೋಕೆ ಮುಂದಾಗಿದ್ದಾರೆ.
ಟ್ರೆಕ್ಕಿಂಗ್ ನೆಪದಲ್ಲಿ ಮೋಜು ಮಸ್ತಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಮಲ್ಲಳ್ಳಿ ಜಲಪಾತ ವೀಕ್ಷಿಸಲು, ಬೆಟ್ಟದ ಮೇಲೆ ಟ್ರೆಕ್ಕಿಂಗ್ ಮಾಡುವ ನೆಪದಲ್ಲಿ ಹೋಂ ಸ್ಟೇ ಬಂದ್ ಆಗಿದ್ರೂ, ರೆಸಾರ್ಟ್‌ಗಳಲ್ಲಿ ತಂಗಿ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿದ್ದಾರೆ. ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಅಂಗಡಿಗಳಿಗೆ ತೆರಳಿ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಅದರಲ್ಲಿ ಸೋಂಕಿತರನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಪ್ರವಾಸಿಗರನ್ನು ಕಂಡೊಡನೆ ಕೊರೊನಾ ಭಯ ಮಳೆಗಾಲವಾದ್ದರಿಂದ ಕೃಷಿ ಚಟುವಟಿಕೆ ಕೈಗೊಳ್ಳಬೇಕಿದೆ. ಆದ್ರೆ ಕೊರೊನಾ ಭಯದಿಂದಾಗಿ ಮನೆ ಬಿಟ್ಟು ಹೊರಬರಲು ರೈತರು ಭಯಪಡುತ್ತಿದ್ದಾರೆ. ಇಂಥದ್ರಲ್ಲಿ ಹೊರಗಿನಿಂದ ಬರುವ ಪ್ರವಾಸಿಗರು ಎಲ್ಲಿ ಕೊರೊನಾ ಹಂಚಿಹೋಗುತ್ತಾರೋ ಎನ್ನುವ ಭಯಶುರುವಾಗಿದೆ.

ಪ್ರವಾಸಿಗರನ್ನ ವಾಪಸ್ ಕಳಿಸಿದ ಕೂರ್ಗಿಗಳು ಈ ಸಂಬಂಧ ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಮತ್ತು ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಬೆಟ್ಟದಳ್ಳಿ ಜಂಕ್ಷನ್ ಬಳಿ ರಸ್ತೆ ತಡೆ ನಡೆಸಿ ಪ್ರವಾಸಿಗರ ವಾಹನಗಳನ್ನು ತಡೆದು ವಾಪಾಸ್ಸು ಕಳುಹಿಸಿದ್ದಾರೆ. ಅಷ್ಟೇ ಅಲ್ಲ ಮುಂದಿನ ನಾಲ್ಕು ದಿನಗಳಲ್ಲಿ ಕೊಡಗಿಗೆ ಪ್ರವಾಸಿಗರು ಬರದಂತೆ ನಿರ್ಬಂಧ ಹೇರಬೇಕು. ಇಲದಿದ್ರೆ ರಸ್ತೆಗಿಳಿದು ಉಗ್ರ ಹೋರಾಟ ಮಾಡಲಾಗುವುದು ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.-ಸುರೇಶ್ ಬಿ



