ಶಾಸಕ ಅಪ್ಪಚ್ಚು ರಂಜನ್ ಕ್ರೀಡಾ ಸಚಿವರೂ ಆಗಿದ್ದವರು, ಆದರೆ ಕೊಡಗು ಕ್ರೀಡಾಂಗಣಗಳ ಸ್ಥಿತಿ ಆ ದೇವರಿಗೇ ಪ್ರೀತಿ!

| Updated By: ಸಾಧು ಶ್ರೀನಾಥ್​

Updated on: Jan 10, 2023 | 2:02 PM

ಸೋಮವಾರಪೇಟೆ ಅಸ್ಟ್ರೋ ಟರ್ಫ್: ಕಳೆದ ಎಂಟು ವರ್ಷಗಳಿಂದ ಇದರ ಕಾಮಗಾರಿ ಕುಂಟುತ್ತಲೇ ಸಾಗಿದೆ. ಹೈದ್ರಾಬಾದ್ ಮೂಲದ ಸಂಸ್ಥೆಯೊಂದು ಇದರ ಕಾಮಗಾರಿ ನಡೆಸುತ್ತಿದ್ದು ಬಹಳಷ್ಟು ಕಳಪೆಯಿಂದ ಕೂಡಿದೆ ಎಂಬ ಆರೋಪವಿದೆ.

ಶಾಸಕ ಅಪ್ಪಚ್ಚು ರಂಜನ್ ಕ್ರೀಡಾ ಸಚಿವರೂ ಆಗಿದ್ದವರು, ಆದರೆ ಕೊಡಗು ಕ್ರೀಡಾಂಗಣಗಳ ಸ್ಥಿತಿ ಆ ದೇವರಿಗೇ ಪ್ರೀತಿ!
ಕೊಡಗು ಕ್ರೀಡಾಂಗಣಗಳ ಸ್ಥಿತಿ ಆ ದೇವರಿಗೇ ಪ್ರೀತಿ!
Follow us on

ನಮ್ಮ ದೇಶದ ಯಾವುದೇ ಕ್ರೀಡೆ (sports) ಆಗಿರಲಿ ಅದಕ್ಕೆ ಕೊಡಗು (Kodagu) ಜಿಲ್ಲೆಯ ಪ್ರತಿಭೆಗಳು ಬಹಳಷ್ಟು ಸಂಖ್ಯೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಹಾಕಿ ಫುಟ್ಬಾಲ್ ಅಥ್ಲೆಟಿಕ್ಸ್ ಶೂಟಿಂಗ್ ಹೀಗೆ ಹತ್ತುಹಲವು ಕ್ರೀಡೆಗಳಲ್ಲಿ ದೇಶದ ಕೀರ್ತಿಪತಾಕೆ ಹಾರಿಸಿದ್ದಾರೆ. ಆದ್ರೆ ಇಲ್ಲಿನ ಜಿಲ್ಲಾ ಕ್ರೀಡಾಂಗಣ (stadium) ಮತ್ತು ಹಾಕಿ ಟರ್ಫ್ ಗ್ರೌಂಡ್​ನ ಕಥೆ ಮಾತ್ರ ಹೇಳುವುದೇ ಬೇಡ. ಅಷ್ಟೊಂದು ನಿರ್ಲಕ್ಷ್ಯಕ್ಕೆ (negligence) ಒಳಗಗಾಗಿದೆ. ಹಚ್ಚಹಸಿರ ಹೊದಿಕೆ ಹೊದ್ದು ಮಲಗಿರುವ ಆಕರ್ಷಕ ಕ್ರೀಡಾಂಗಣ ಅದು.. ಆಸ್ಟ್ರೋ ಟರ್ಫ್​ ಅಳವಡಿಸಿರೋ ಹಾಕಿ ಕ್ರೀಡಾಂಗಣ ಅನ್ನೋದು ಯಾರಿಗೇ ಆಗಲಿ ಅರಿವಾಗುತ್ತೆ. ಆದ್ರೆ ಈ ಕ್ರೀಡಾಂಗಣ ಆಟವಾಡಲು ಮಾತ್ರ ಲಭ್ಯವಿಲ್ಲ. ಯಾಕಂದ್ರೆ ಈ ಅಂಕಣದ ಕಾಮಗಾರಿಯೇ ಮುಕ್ತಾಯವಾಗಿಲ್ಲ. ಅದೂ ಕೂಡ ಎಂಟು ವರ್ಷಗಳ ಸುಧೀರ್ಘ ಅವಧಿಯ ಬಳಿಕವೂ.

ಅಂದ ಹಾಗೆ ಇದು ಹಾಕಿ ತವರು ಕೊಡಗಿನ ಸೋಮವಾರಪೇಟೆ ನಗರದಲ್ಲಿರೋ ಅಸ್ಟ್ರೋ ಟರ್ಫ್ ಕಾಮಗಾರಿ. ಇದೇ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ (appachu ranjan) ಕ್ರೀಡಾ ಸಚಿವರಾಗಿದ್ದಾಗ ಸೋಮವಾರಪೇಟೆಗೆ ಈ ಗ್ರೌಂಡನ್ನ ಸ್ಯಾಂಕ್ಷನ್ ಮಾಡಿಸುತ್ತಾರೆ. ಆದ್ರೆ ವಿಪರ್ಯಾಸ ಅಂದ್ರೆ ಕಳೆದ ಎಂಟು ವರ್ಷಗಳಿಂದ ಇದರ ಕಾಮಗಾರಿ ಕುಂಟುತ್ತಲೇ ಸಾಗಿದೆ. ಹೈದ್ರಾಬಾದ್ ಮೂಲದ ಸಂಸ್ಥೆಯೊಂದು ಇದರ ಕಾಮಗಾರಿ ನಡೆಸುತ್ತಿದ್ದು ಬಹಳಷ್ಟು ಕಳಪೆಯಿಂದ ಕೂಡಿದೆ ಎಂಬ ಆರೋಪಿಸುತ್ತಾರೆ ಸೋಮೇಶ್, ಪಟ್ಟಣ ಪಂಚಾಯಿತಿ ಸದಸ್ಯ, ಸೋಮವಾರಪೇಟೆ.

ಇನ್ನು ಮಡಿಕೇರಿ ಜಿಲ್ಲೆಯಲ್ಲಿರೋ ಜಿಲ್ಲಾ ಫುಟ್ಬಾಲ್ ಸ್ಟೇಡಿಯಂ ದನಗಳು ಮೇಯುವ ಸ್ಥಿತಿಯಲ್ಲೂ ಇಲ್ಲ. ಒಂದು ಕಾಲದಲ್ಲಿ ಕರ್ನಾಟಕ ರಾಜ್ಯದ ಫುಟ್ಬಾಲ್ ತಂಡದಲ್ಲಿ ಏಳು ಮಂದಿ ಕೊಡಗಿನ ಆಟಗಾರರೇ ಇದ್ದರು. ಅದರಲ್ಲೂ ಭಾರತ ತಂಡವನ್ನ ಪ್ರತನಿಧಿಸಿದ್ದ ಬೆಪ್ಪುರನ ಅಣ್ಣಪ್ಪ ಇದೇ ಗ್ರೌಂಡ್​ನಲ್ಲಿ ಆಡಿ ಬೆಳೆದವರು. ಆದ್ರೆ ಇಂದು ಈ ಕ್ರೀಡಾಂಗಣ ದುಃಸ್ಥಿತಿಯಲ್ಲಿದೆ. ಪ್ರತಿನಿತ್ಯ ಆಡಲು ಬರುವ ಆಟಗಾರರು ದಿನಾ ಇಲ್ಲಿ ಬಿದ್ದು ಗಾಯ ಮಾಡಿಕೊಳ್ಳುವುದೇ ಆಗಿದೆ ಎಂದು ಅಲವತ್ತುಕೊಳ್ಳುತ್ತಾರೆ ಕ್ರೀಡಾ ಪ್ರೇಮಿ ಅಶೋಕ್.

ಸ್ಥಳೀಯ ಶಾಸಕ ಅಪ್ಪಚ್ಚು ರಂಜನ್ ಇದೇ ಊರಿನವರಾಗಿದ್ದಾರೆ. ಇವರು ಕ್ರೀಡಾ ಸಚಿವರೂ ಆಗಿದ್ದವರು. ಆದ್ರೆ ಇವರೂ ಕೂಡ ಜಿಲ್ಲೆಯ ಕ್ರೀಡೆಯನ್ನ ಉತ್ತೇಜಿಸುವ ಕೆಲಸ ಮಾಡುತ್ತಿಲ್ಲ ಎಂಬ ಆರೋಪವಿದೆ. ಇನ್ನಾದ್ರೂ ಸರ್ಕಾರ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ಕ್ರೀಡಾಂಗಣವನ್ನ ಸುಧಾರಿಸುವ ಕೆಲಸ ಮಾಡಬೇಕಿದೆ.

ವರದಿ: ಗೋಪಾಲ್ ಸೋಮಯ್ಯ, ಟಿವಿ9, ಕೊಡಗು

Published On - 2:00 pm, Tue, 10 January 23