ಕೊಡಗು, ನವೆಂಬರ್ 22: ಸಚಿವರ ಪಿಎ ಹೆಸರಿನಲ್ಲಿ ಹಣ (money) ವಸೂಲಿ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ರಘುನಾಥ, ಶಿವಮೂರ್ತಿ ಬಂಧಿತರು. ಕುಶಾಲನಗರ ಕಂದಾಯ ನಿರೀಕ್ಷಕರಿಂದ 20 ಸಾವಿರ ರೂ. ಹಣ ವಸೂಲಿ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಪಿಎ ಎಂದು ಆರ್ಐ ಸಂತೋಷ್ಗೆ ಆರೋಪಿ ರಘುನಾಥ ಫೋನ್ ಕರೆ ಮಾಡಿದ್ದು, ತುರ್ತಾಗಿ 20,000 ರೂ. ನೀಡುವಂತೆ ಬೇಡಿಕೆಯಿಟ್ಟಿದ್ದ. ಇತ್ತ ರೆವಿನ್ಯೂ ಇನ್ಸ್ಪೆಕ್ಟರ್ ಸಂತೋಷ್ 20,000 ರೂ. ಗೂಗಲ್ಪೇ ಮಾಡಿದ್ದಾರೆ. ಬಳಿಕ ಉಸ್ತುವಾರಿ ಸಚಿವರ ಕಚೇರಿಯಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಬಯಲಾಗಿದೆ. ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಗದಗ: ಆನ್ ಲೈನ್ ವಂಚಕರು ಐಪಿಎಸ್, ಮಿಲ್ಟ್ರಿ ಅಧಿಕಾರಿಗಳ ಹೆಸರಲ್ಲಿ ಓರ್ವ ವ್ಯಕ್ತಿಗೆ ಸಾವಿರಾರೂ ರೂಪಾಯಿ ಪಂಗನಾಮ ಹಾಕಿದ್ದಾರೆ. ಚೆನ್ನಾಗಿ ಇಂಗ್ಲೀಷ್ನಲ್ಲಿ ಮಾತನಾಡಿ ವಂಚನೆ ಮಾಡಿದ್ದು, ವಂಚನೆಗೆ ಬಲಿಯಾದ ವ್ಯಕ್ತಿ ಹಣ ಕಳೆದುಕೊಂಡು ಈಗ ಒದ್ದಾಡುತ್ತಿದ್ದಾರೆ. ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಸೈಬರ್ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಅಂತ ಕಿಡಿಕಾರಿದ್ದರು.
ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಸಚಿವರ ಹೆಸರಲ್ಲಿ ಬೆದರಿಕೆ ಆರೋಪ; ಕರವೇ ಜಿಲ್ಲಾಧ್ಯಕ್ಷನ ವಿರುದ್ಧ ಎಫ್ಐಆರ್
ಜಿಲ್ಲೆಯಲ್ಲೊಂದು ಅಂಥದ್ದೊಂದು ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಕರ್ನಾಟಕದ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ ಹಾಗೂ ಸಿಆರ್‌ಪಿಎಫ್ ಯೋಧನ ಹೆಸರಲ್ಲಿ ಮೋಸ ವಂಚನೆ ಮಾಡಲಾಗಿತ್ತು. ಈ ವಂಚನೆ ಬಲಿಯಾದವ್ರೇ ಗದಗನ ಬೆಟಗೇರಿಯ ರಮೇಶ ಹತ್ತಿಕಾಳ. 55,000 ರೂಪಾಯಿ ಪಂಗನಾಮ ಹಾಕಿದ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ಫೇಸ್ಬುಕ್ ಮೂಲಕ ರಮೇಶ ಎಂಬುವರನ್ನು ವಂಚನೆ ಮಾಡಿದ್ದರು.
ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗದಲ್ಲಿ ಕಾರಿನಲ್ಲಿಟ್ಟಿದ್ದ 10 ಲಕ್ಷ ರೂ. ಹಣ ಕಳವು ಮಾಡಿರುವಂತಹ ಘಟನೆ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಕ್ಕಿಹಳ್ಳಿಯ ರೈತ ಮುದ್ದಪ್ಪ ಎಂಬುವರಿಗೆ ಸೇರಿದ್ದ 10 ಲಕ್ಷ ರೂ. ಹಣ ಕಳುವಾಗಿದೆ. ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಬಂದು ಕಾರಿನಲ್ಲಿಟ್ಟು, ಅಂಗಡಿಯೊಂದಕ್ಕೆ ತೆರಳಿದ್ದಾಗ ಕಳವು ಮಾಡಲಾಗಿದೆ.
ಇದನ್ನೂ ಓದಿ: ಆನ್ಲೈನ್ ಮೋಸ: 300 ರೂ. ಲಿಪ್ಸ್ಟಿಕ್ಗೆ 1 ಲಕ್ಷ ರೂ. ಕಳೆದುಕೊಂಡ ವೈದ್ಯೆ
ಹಣದ ಬ್ಯಾಗ್ ತೆಗೆದುಕೊಂಡು ಇಬ್ಬರು ಕಳ್ಳರು ಬೈಕ್ನಲ್ಲಿ ಪರಾರಿ ಆಗಿದೆ. ಕಾರಿನಲ್ಲಿದ್ದ ಹಣ ಕಳವು ಮಾಡುತ್ತಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ ಆಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.