Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​​​​ಲೈನ್​​​​ ಮೋಸ: 300 ರೂ. ಲಿಪ್‌ಸ್ಟಿಕ್​​ಗೆ 1 ಲಕ್ಷ ರೂ. ಕಳೆದುಕೊಂಡ ವೈದ್ಯೆ

ಮಹಿಳಾ ವೈದ್ಯರೊಬ್ಬರು ಆನ್​​​ಲೈನ್​​ನಲ್ಲಿ ಲಿಪ್ ಸ್ಟಿಕ್ ಆರ್ಡರ್​​​ ಮಾಡಿ ಮೋಸ ಹೋಗಿದ್ದಾರೆ. 1 ಲಕ್ಷ ರೂ. ಕೊಟ್ಟು ಒಂದು ಲಿಪ್ ಸ್ಟಿಕ್​​ನ್ನು ಆನ್​​​ಲೈನ್​​​​ನಲ್ಲಿ ಖರೀದಿ ಮಾಡಿದ್ದಾರೆ. ಆದರೆ ಈ ಲಿಪ್ ಸ್ಟಿಕ್​​ನ ಮೂಲ ಬೆಲೆ 300 ರೂ. ಆದರೆ ಆನ್​​​ಲೈನ್​​ ಮಾರಾಟದಲ್ಲಿ ದೊಡ್ಡ ಮೋಸ ಮಾಡಿದ್ದಾರೆ.

ಆನ್​​​​ಲೈನ್​​​​ ಮೋಸ: 300 ರೂ. ಲಿಪ್‌ಸ್ಟಿಕ್​​ಗೆ 1 ಲಕ್ಷ ರೂ. ಕಳೆದುಕೊಂಡ ವೈದ್ಯೆ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Nov 20, 2023 | 3:16 PM

ನಮ್ಮ ದೇಶದಲ್ಲಿ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿದೆ, ದಿನಕ್ಕೆ ಲಕ್ಷಾಂತರ ಇಂತಹ ಪ್ರಕರಣಗಳು ನಡೆಯುತ್ತ ಇರುತ್ತದೆ. ಅದರಲ್ಲೂ ಆನ್​​​ಲೈನ್​​​ ಖರೀದಿಯಲ್ಲಿ ಆಗುವ ಎಡವಟ್ಟು ಒಂದೆರೆಡಲ್ಲ, ಆನ್​​​ಲೈನ್​​​ ಮೂಲಕ ವಸ್ತುಗಳನ್ನು ಖರೀದಿ ಮಾಡಿ ಸಂಷ್ಟಕಕ್ಕೆ ಸಿಲುಕಿಕೊಂಡಿರುವುದನ್ನು ಕೇಳಿರಬಹುದು. ಇದೀಗ ಮುಂಬೈನಲ್ಲಿ ಇಂತಹದೇ ಒಂದು ನಡೆದಿದೆ. ಮಹಿಳಾ ವೈದ್ಯರೊಬ್ಬರು ಆನ್​​​ಲೈನ್​​ನಲ್ಲಿ ಲಿಪ್ ಸ್ಟಿಕ್ ಆರ್ಡರ್​​​ ಮಾಡಿ ಮೋಸ ಹೋಗಿದ್ದಾರೆ. 1 ಲಕ್ಷ ರೂ. ಕೊಟ್ಟು ಒಂದು ಲಿಪ್ ಸ್ಟಿಕ್​​ನ್ನು ಆನ್​​​ಲೈನ್​​​​ನಲ್ಲಿ ಖರೀದಿ ಮಾಡಿದ್ದಾರೆ. ಆದರೆ ಈ ಲಿಪ್ ಸ್ಟಿಕ್​​ನ ಮೂಲ ಬೆಲೆ 300 ರೂ. ಆದರೆ ಆನ್​​​ಲೈನ್​​ ಮಾರಾಟದಲ್ಲಿ ದೊಡ್ಡ ಮೋಸ ಮಾಡಿದ್ದಾರೆ.

ನವಿ ಮುಂಬೈನಲ್ಲಿ ವಾಸವರಿರುವ ಈ ವೈದ್ಯರು ನವೆಂಬರ್ 2 ರಂದು ಇ-ಕಾಮರ್ಸ್ ಪೋರ್ಟಲ್‌ನಲ್ಲಿ ಲಿಪ್‌ಸ್ಟಿಕ್‌ ಆರ್ಡರ್ ಮಾಡಿದ್ದರು. ಕೆಲವು ದಿನಗಳ ನಂತರ, ನಿಮ್ಮ ಲಿಪ್‌ಸ್ಟಿಕ್ ಅನ್ನು ತಲುಪಿಸಲಾಗಿದೆ ಎಂದು ವೈದ್ಯರಿಗೆ ಕೊರಿಯರ್ ಕಂಪನಿಯಿಂದ ಸಂದೇಶ ಬಂದಿತು. ಆದರೆ ಮಹಿಳೆಗೆ ಲಿಪ್ ಸ್ಟಿಕ್ ಸಿಗದ ಕಾರಣ ಕೊರಿಯರ್ ಕಂಪನಿಯನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ನಂತರ ನಮ್ಮ ಕಸ್ಟಮರ್ ಕೇರ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಕೊರಿಯರ್ ಕಂಪನಿ ಎಂದು ಹೇಳಿದ್ದಾರೆ.

ನಂತರ ವೈದ್ಯರಿಗೆ ಒಂದು ಫೋನ್​​ ಬರುತ್ತದೆ, ನಿಮ್ಮ ಆರ್ಡರ್​ನ್ನು ತಲುಪಿಸಲು 2 ಸಾವಿರ ನೀಡಬೇಕು ಎಂದು ಹೇಳಿದ್ದಾರೆ. ಆದರೆ ಇದಕ್ಕೆ ವೈದ್ಯೆ ನಿರಕಾರಿಸಿದ್ದಾರೆ. ನಂತರ ಒಂದು ವೆಬ್​​​ ಲಿಂಕ್​​​ ಬರುತ್ತದೆ. ಅದರಲ್ಲಿ ಬ್ಯಾಂಕ್​​​ ವಿವರಗಳನ್ನು ಕೇಳಲಾಗಿದೆ. ವೈದ್ಯೆ ಎಲ್ಲ ವಿವರಗಳನ್ನು ಭರ್ತಿ ಮಾಡಿದ್ದಾರೆ. ಆಕೆಗೆ ಒಂದು ಭಿಪ್ ಯುಪಿಐ ಲಿಂಕ್ ರಚಿಸುವ ಕುರಿತು ಸಂದೇಶ ಬಂದಿದೆ. ಇನ್ನು ಪಾರ್ಸೆಲ್​​​ ಬಗ್ಗೆ ಆಕೆ ಕರೆ ಮಾಡಿದವರಲ್ಲಿ ಕೇಳಿದಾಗ, ನಿಮ್ಮ ಪಾರ್ಸೆಲ್​​​ನ್ನು ತಕ್ಷಣದಲ್ಲಿ ಡೆಲಿವರಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ; ತೆಲಂಗಾಣ ಅಸೆಂಬ್ಲಿ ಚುನಾವಣೆ: ಚಂದ್ರಬಾಬು ನಾಯ್ಡು ಹೆಸರಿನಲ್ಲಿ ನಕಲಿ ಪತ್ರ ವೈರಲ್, ಸೈಬರ್ ಕ್ರೈಂ ಪೊಲೀಸರ ಮೊರೆ ಹೋದ ಟಿಡಿಪಿ

ನವೆಂಬರ್​​ 9ರಂದು ವೈದ್ಯೆಯ ಖಾತೆಯಿಂದ ಮೊದಲು 95 ಸಾವಿರ ನಂತರ 5 ಸಾವಿರ, ಒಟ್ಟು ಒಂದ ಲಕ್ಷ ಡೆಬಿಟ್ ಆಗಿದೆ. ಇದರಿಂದ ಕಕ್ಕಾಬಿಕ್ಕಿಯಾದ ಮಹಿಳೆ ತಕ್ಷಣ ಹತ್ತಿರದ ಪೊಲೀಸ್​​​ ಠಾಣೆಗೆ ದೂರು ನೀಡಿದ್ದಾರೆ. ವೈದ್ಯರ ದೂರಿನ ಆಧಾರ ಮೇಲೆ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ