ತೆಲಂಗಾಣ ಅಸೆಂಬ್ಲಿ ಚುನಾವಣೆ: ಚಂದ್ರಬಾಬು ನಾಯ್ಡು ಹೆಸರಿನಲ್ಲಿ ನಕಲಿ ಪತ್ರ ವೈರಲ್, ಸೈಬರ್ ಕ್ರೈಂ ಪೊಲೀಸರ ಮೊರೆ ಹೋದ ಟಿಡಿಪಿ

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ದೂರ ಉಳಿಯಲು ನಿರ್ಧರಿಸಿರುವುದಾಗಿ ತೆಲುಗು ದೇಶಂ ಪಕ್ಷ ಘೋಷಿಸಿದೆ. ಹೆಸರಿಗೆ ಸ್ಪರ್ಧಿಸುವುದಕ್ಕಿಂತ ದೂರ ಉಳಿಯುವುದು ಒಳಿತು ಎಂದು ಪಕ್ಷದ ಮುಖಂಡರು ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.

ತೆಲಂಗಾಣ ಅಸೆಂಬ್ಲಿ ಚುನಾವಣೆ: ಚಂದ್ರಬಾಬು ನಾಯ್ಡು ಹೆಸರಿನಲ್ಲಿ ನಕಲಿ ಪತ್ರ ವೈರಲ್, ಸೈಬರ್ ಕ್ರೈಂ ಪೊಲೀಸರ ಮೊರೆ ಹೋದ ಟಿಡಿಪಿ
ಚಂದ್ರಬಾಬು ನಾಯ್ಡು ಹೆಸರಿನಲ್ಲಿ ನಕಲಿ ಪತ್ರ ವೈರಲ್, ಸೈಬರ್ ಕ್ರೈಂ ಪೊಲೀಸರ ಮೊರೆ ಹೋದ ಟಿಡಿಪಿ
Follow us
ಸಾಧು ಶ್ರೀನಾಥ್​
|

Updated on: Nov 10, 2023 | 1:44 PM

ತೆಲಂಗಾಣ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ (Telangana Assembly Elections 2023) ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೆಸರಿನಲ್ಲಿ ಪ್ರಕಟವಾಗಿರುವ ಪತ್ರವೊಂದು ಸಂಚಲನ ಮೂಡಿಸುತ್ತಿದೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಎಚ್ಚೆತ್ತ ತೆಲುಗು ದೇಶಂ ಪಕ್ಷದ (Telugu Desam Party) ಮುಖಂಡರು ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ. ನಕಲಿ ಪತ್ರ (Fake Letter) ವೈರಲ್ ಮಾಡುತ್ತಿರುವ ನೆಟ್ಟಿಗರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಕ್ಷ ಆಗ್ರಹಿಸಿದೆ. ಹೈದರಾಬಾದ್ ಸೈಬರ್ ಕ್ರೈಂ (Cyber Crime) ಡಿಸಿಪಿ ಕವಿತಾ ಅವರನ್ನು ಭೇಟಿ ಮಾಡಿದ ಟಿಡಿಪಿ ವಕ್ತಾರ ಪ್ರೊಫೆಸರ್ ತಿರುನಗರಿ ಜ್ಯೋತ್ಸ್ನಾ ದೂರು ದಾಖಲಿಸಿದ್ದು, ತೆಲುಗು ದೇಶಂ ಹೆಸರಿನಲ್ಲಿರುವ ಲೆಟರ್ ಹೆಡ್ ನಕಲಿ ಪತ್ರದ್ದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಸ್ಪರ್ಧಿಸುವುದರಿಂದ ದೂರ ಉಳಿಯಲು ನಿರ್ಧರಿಸಿರುವುದಾಗಿ ತೆಲುಗು ದೇಶಂ ಪಕ್ಷ ಘೋಷಿಸಿದೆ. ಹೆಸರಿಗೆ ಸ್ಪರ್ಧಿಸುವುದಕ್ಕಿಂತ ದೂರ ಉಳಿಯುವುದು ಒಳಿತು ಎಂದು ಪಕ್ಷದ ಮುಖಂಡರು ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ. ಕೌಶಲಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ಬಂಧನ ಮತ್ತು ಜೈಲು ಪಾಲಾಗಿರುವ ಪರಿಸ್ಥಿತಿಯಲ್ಲಿ ತೆಲಂಗಾಣ ಚುನಾವಣೆಯತ್ತ ಗಮನ ಹರಿಸಲು ಸಾಧ್ಯವಿಲ್ಲ ಎಂದು ಪಕ್ಷ ಭಾವಿಸಿದೆ. ಆಂಧ್ರ ಪ್ರದೇಶ ಚುನಾವಣೆಯಲ್ಲಿ ವಿಜಯ ಸಾಧಿಸಿದರೆ, ತೆಲಂಗಾಣದಲ್ಲೂ ಪಕ್ಷ ಸಲೀಸಾಗಿ ಬಲಿಷ್ಠವಾಗಲಿದೆ ಎಂದು ಚಂದ್ರಬಾಬು ಭಾವಿಸಿದ್ದಾರೆ ಎಂದು ವರದಿಯಾಗಿದೆ.

ಆದರೆ ಇದೀಗ ನಕಲಿ ಪತ್ರದ ಮೂಲಕ ತಮ್ಮ ಪಕ್ಷದ ನೀತಿಗೆ ವಿರುದ್ಧವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತೆಲುಗು ದೇಶಂ ಪಕ್ಷವು ಆರೋಪಿಸಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜ್ಯೋತ್ಸ್ನಾ ಅವರು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ವೈಎಸ್‌ಆರ್‌ಸಿಪಿ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಈ ಪತ್ರವನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ನಕಲಿ ಪತ್ರಕ್ಕೆ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಜಾತಿ, ಧರ್ಮ, ಪ್ರಾದೇಶಿಕ ದ್ವೇಷವನ್ನು ಕೆರಳಿಸಿ ಪೈಶಾಚಿಕ ಆನಂದ ಪಡೆಯುವ ಸೈಕೋ ಜಗನ್ ನ ಕೂಲಿಗಳು ಚಂದ್ರಬಾಬು ನಾಯ್ಡು ಹೆಸರಿನಲ್ಲಿ ನಕಲಿ ಪತ್ರವನ್ನು ಹರಿಯ ಬಿಟ್ಟಿದ್ದಾರೆ. ವೈಸಿಪಿ ಸಾರ್ವಜನಿಕವಾಗಿ ನಂಬಿಕೆ ಕಳೆದುಕೊಂಡಿದ್ದು, ನಕಲಿ ನಡೆಗಳ ವಿರುದ್ಧ ಎಚ್ಚರವಹಿಸಬೇಕು ಎಂದು ಅವರು ಕರೆ ನೀಡಿದರು.

ಮತ್ತೊಂದೆಡೆ, ಟಿಡಿಪಿ ಪಾಲಿಟ್‌ಬ್ಯುರೊ ಸದಸ್ಯ ವರ್ಲಾ ರಾಮಯ್ಯ ಕೂಡ ಚಂದ್ರಬಾಬು ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ. ಈ ಪತ್ರದ ಬಗ್ಗೆ ದೂರು ನೀಡಲು ಸಿಐಡಿ ಅಧಿಕಾರಿಗಳು ಲಭ್ಯವಾಗಿಲ್ಲ. ಎಪಿ ಸರ್ಕಾರದ ಸಲಹೆಗಾರರಾದ ಸಜ್ಜಲ ರಾಮಕೃಷ್ಣ ರೆಡ್ಡಿ ಅವರ ಪುತ್ರ ಸಜ್ಜಲ ಭಾರ್ಗವ್ ರೆಡ್ಡಿ ನಕಲಿ ಪತ್ರವನ್ನು ಸೃಷ್ಟಿಸಿ, ಅದನ್ನು ವೈರಲ್ ಆಗಿ ಹರಡಿದ್ದಾರೆ ಎಂದು ವರ್ಲಾ ರಾಮಯ್ಯ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ